More

    ಜನರ ಸಮಸ್ಯೆ ಬಗೆಹರಿಸಲು ಪ್ರಯತ್ನ

    ರಾಯಬಾಗ, ಬೆಳಗಾವಿ: ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ, ಅಧಿಕಾರಿಗಳ ನಡೆ ಹಳ್ಳಿ ಕಡೆ ಯೋಜನೆ ರೂಪಿಸಿ, ಗ್ರಾಮೀಣ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

    ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಕಂದಾಯ ಇಲಾಖೆಯಿಂದ ಈಚೆಗೆ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಎಲ್ಲ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಜನರ ಎಲ್ಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ರಾಯಬಾಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಬಿಪಿಎಲ್ ಕಾರ್ಡ್ ಹೊಂದಿದ ಬಡವರಿಂದ ಪ್ರತಿಯೊಂದಕ್ಕೂ ಹಣ ಪಡೆಯುತ್ತಾರೆ. ಬಡವರು ಉಚಿತವಾಗಿ ಚಿಕಿತ್ಸೆ ಪಡೆಯಲು ಸಾರ್ವಜನಿಕ ಆಸ್ಪತ್ರೆಗೆ ಬರುತ್ತಾರೆ. ಆದರೆ, ಅಲ್ಲಿನ ಸಿಬ್ಬಂದಿ ಹೀಗೆ ಮಾಡಿದರೆ ಬಡವರು ಎಲ್ಲಿ ಹೋಗಬೇಕು ಎಂದು ತಾಪಂ ಮಾಜಿ ಸದಸ್ಯ ನಾಮದೇವ ಕಾಂಬಳೆ ಹಾಗೂ ಗ್ರಾಮಸ್ಥರು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

    ಆಸ್ಪತ್ರೆಯಲ್ಲಿ ಸೀ ರೋಗ ಹಾಗೂ ಚಿಕ್ಕಮಕ್ಕಳ ತಜ್ಞ ವೈದ್ಯರ ಹುದ್ದೆ ಅನೇಕ ವರ್ಷಗಳಿಂದ ಖಾಲಿ ಇವೆ ಎಂದು ಗಮನಕ್ಕೆ ಬಂದ ಬಳಿಕ ಮುಖ್ಯವೈದ್ಯಾಧಿಕಾರಿ ಡಾ. ಆರ್.ಎಚ್.ರಂಗಣ್ಣವರಗೆ ಕರೆ ಮಾಡಿ ಕಾಯಂ ವೈದ್ಯರನ್ನು ನೇಮಿಸಿ ಎಂದು ಸೂಚಿಸಿದರು. ವಿವಿಧ ಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ತಹಸೀಲ್ದಾರ್
    ಆರ್.ಎಚ್.ಬಾಗವಾನ್ ಮಾತನಾಡಿದರು. ತಾಪಂ ಇಒ ಡಾ. ಸುರೇಶ ಕದ್ದು, ಬಿಇಒ ಪ್ರಭಾವತಿ ಪಾಟೀಲ, ಗ್ರಾಪಂ ಅಧ್ಯಕ್ಷೆ ಮನಿಷಾ ಹೆರವಾಡೆ, ಉಪಾಧ್ಯಕ್ಷೆ ಕಸ್ತೂರಿ ಕಾಂಬಳೆ, ಸುರೇಶ ಮೇಖಳಿ, ಡಾ. ಆರ್.ಎಚ್.ರಂಗಣ್ಣವರ, ಸಂತೋಷ ಕಾಂಬಳೆ, ವಿನೋದ ಮಾವರಕರ, ಕೆ.ಎನ್.ಹಂಚಿನಮನಿ, ಆರ್.ಬಿ.ಮನವಡ್ಡರ,
    ಎಂ.ಎಸ್.ಪಾಟೀಲ, ಡಾ. ರಾಮು ರಾಠೋಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts