More

    ಜನರಲ್ಲಿ ಹೆಚ್ಚುತ್ತಿದೆ ದಸರಾ ಸಂಭ್ರಮ

    ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಕೆ.ಸಂತೋಷ್ ಅಭಿಮತ


    ಹುಣಸೂರು: ನಾಡಹಬ್ಬ ದಸರಾ ಆಚರಣೆ ತಾಲೂಕು ಮಟ್ಟಕ್ಕೂ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಜನರಲ್ಲಿ ಸಂತಸ ಸಂಭ್ರಮ ಹೆಚ್ಚಾಗಿದೆ ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್ ಅಭಿಪ್ರಾಯಪಟ್ಟರು.


    ನಗರದ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ದಸರವನ್ನು ಯುವದಸರಾ, ಮಹಿಳಾ ದಸರಾ, ರೈತದಸರಾ, ಮಕ್ಕಳ ದಸರಾ ಎಂಬಿತ್ಯಾದಿಯಾಗಿ ವಿಕೇಂದ್ರೀಕರಿಸಿ ಸಮಾಜದ ಎಲ್ಲ ವಿಭಾಗಗಳಲ್ಲೂ ದಸರಾ ಮನೆ ಮಾಡುವಂತೆ ರೂಪಿಸಿದ್ದಾರೆ. ಇದರಿಂದಾಗಿ ನಾಡಹಬ್ಬದ ಸಂಭ್ರಮ ಜನಮನದಲ್ಲಿ ಮನೆ ಮಾಡುತ್ತಿದೆ. ತಾಲೂಕಿನಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಛದ್ಮವೇಷ, ರಸಪ್ರಶ್ನೆ, ಚಿತ್ರಕಲೆ, ಕರಕುಶಲ ವಸ್ತುಪ್ರದರ್ಶನ ಕಾರ್ಯಕ್ರಮ, ಸಾಂಸ್ಕೃತಿಕ ನೃತ್ಯ, ದೇಸಿ ಆಟಗಳಾದ ಕುಂಟೆಬಿಲ್ಲೆ, ಲಗೋರಿ, ಬುಗುರಿ, ಚೌಕಬಾರ ಆಟಗಳನ್ನು ಆಯೋಜಿಸಲಾಗಿದೆ ಎಂದರು.


    ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ತಾಲೂಕಿನ 4 ಹೋಬಳಿಗಳಿಂದ 4 ಬಸ್‌ಗಳ ಮುಖಾಂತರ ಆಯ್ದ ಮಕ್ಕಳಿಗೆ ಮೈಸೂರು ದಸರಾ ಕಾರ್ಯಕ್ರಮವನ್ನು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡಿಸಲಾಗುತ್ತಿದೆ ಎಂದರು.

    ನಗರಸಭಾ ಸದಸ್ಯೆ ರಾಧಾ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಶುಭಕೋರಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಿ. ಮಹದೇವಯ್ಯ, ತಾಲೂಕು ಅಧ್ಯಕ್ಷ ಮೋಹನ್‌ರಾಜ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಸತೀಶ, ಉಪ ಪ್ರಾಂಶುಪಾಲರಾದ ಭವಾನಿ, ಗೀತಾ ಹಾಗೂ ಸಹಶಿಕ್ಷಕ ಸಂಘದ ಅಧ್ಯಕ್ಷ ಹರೀಶ ಮತ್ತು ಶಿಕ್ಷಣ ಇಲಾಖೆ ಇನ್ನಿತರ ಸಿಬ್ಬಂದಿ ಹಾಜರಿದ್ದರು.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts