More

    ಜನಪ್ರತಿನಿಧಿಗಳಿಂದ ಜಿಲ್ಲೆಗಿಲ್ಲ ನಯಾಪೈಸೆ ಪ್ರಯೋಜನ

    ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಉತ್ತರ ಕನ್ನಡ ಹಿತಾಸಕ್ತಿ ಬಳಗದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
    ಶಿರೂರು ಟೋಲ್​ಗೆಟ್​ನಲ್ಲಿ ಆಂಬುಲೆನ್ಸ್ ಅಪಘಾತದ ಬಳಿಕ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಶನಿವಾರ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಿಯೋಗ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬಂದಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಬೇಕು. ಶ್ರಾವಣ ಮಾಸ ಮುಗಿಯುವ ವೇಳೆಗೆ ಆಸ್ಪತ್ರೆಗೆ ಅಡಿಗಲ್ಲು ಪೂಜೆ ಮಾಡಬೇಕೆಂದು ಮನವಿ ಸಲ್ಲಿಸಿದರು.
    ಇದಕ್ಕೂ ಮೊದಲು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ, ಸಂಸದರು ಮತ್ತು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಉತ್ತರ ಕನ್ನಡ ಜಿಲ್ಲೆಯ ಶಾಸಕರು ತುಲಾಭಾರ ಮಾಡುವಷ್ಟು ದುಡ್ಡು ಮಾಡಿದ್ದಾರೆ. ಆದರೆ, ಅವರಿಗೆ ಆಸ್ಪತ್ರೆ ನಿರ್ವಣದ ಬಗ್ಗೆ ಇಚ್ಛಾಶಕ್ತಿ ತೋರುತ್ತಿಲ್ಲ. ಈ ಬಾರಿಯ ಹೋರಾಟ ರ್ತಾಕ ಅಂತ್ಯ ಕಾಣಬೇಕು. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಜಿಲ್ಲೆಯಲ್ಲಿ ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿದ್ದೇವೆ. ಈ ಪ್ರತಿಭಟನೆಗೆ ಸಾಥ್ ನೀಡಲು ಒಬ್ಬ ಶಾಸಕನೂ ಬಂದಿಲ್ಲ. ಅಷ್ಟೇ ಅಲ್ಲದೇ ಉತ್ತರ ಕನ್ನಡದ ಸಂಸದರಾಗಿ ಐದಾರು ಬಾರಿ ಆಯ್ಕೆ ಆದವರೂ ನಯಾ ಪೈಸೆ ಉಪಯೋಗಕ್ಕೆ ಬಾರದಂತಾಗಿದ್ದಾರೆ. ಪದೇಪದೆ ರಾಜ್ಯ ಸರ್ಕಾರವನ್ನು ಬೈಯುವ ಪರಿಸ್ಥಿತಿ ಬಂದಿದೆ. ಉತ್ತರ ಕನ್ನಡದಲ್ಲಿ ಟೂರಿಸಂ ಅಭಿವೃದ್ಧಿ ಮಾಡಿದರೆ ಬೆಂಗಳೂರಿಗೆ ಉದ್ಯೋಗ ಅರಸಿ ಅಲ್ಲಿನ ಯುವ ಸಮೂಹ ಬರಬೇಕಾಗಿಲ್ಲ. ಜನಪ್ರತಿನಿಧಿಗಳು ಅಭಿವೃದ್ಧಿ ಬಗ್ಗೆ ತಲೆಕೆಡೆಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

    ಜನಪ್ರತಿನಿಧಿಗಳು ಮಾಡಿರುವ ಹಣ ಎಷ್ಟಿದೆ ಅಂದರೆ ನೀವ್ಯಾರು ವೋಟು ಮಾಡದೇ ಇದ್ದರೂ ಅವರು ಗೆಲುವು ಸಾಧಿಸುತ್ತಾರೆ. ಅವರ ಸಾಮರ್ಥ್ಯ ಅಷ್ಟಿದೆ. ಕುಮಟಾದ ಶಾಸಕರ ಜತೆ ನಾನು ಮಾತಾನಾಡಿದ್ದೇನೆ. ಸರ್ಕಾರಕ್ಕೆ ಆಗದೇ ಇದ್ದರೆ ಖಾಸಗಿ ಸಹಭಾಗಿತ್ವದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡೋಣ ಅಂತ ಹೇಳಿದ್ದೇನೆ. ಆಸ್ಪತ್ರೆ ಕಟ್ಟಲು ಜಾಗ ತೋರಿಸಿ ಎಂದು ಕೇಳಿದ್ದಾರೆ. ಶೀಘ್ರದಲ್ಲೇ ಯೋಜನೆ ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡೋಣ.
    ಹೋರಾಟ ಸಾಂಕೇತಿಕ ಆಗಬಾರದು. ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಬಾರದು. ನಾವು ಗೆಲ್ಲಿಸಿರುವ ಶಾಸಕರು ಮತ್ತು ಸಂಸದರು ದಾಂಡೇಲಿ ಕುಮಟಾ ಶಿರಸಿಗೆ ಬಂದರೆ ಕಲ್ಲು ಹೊಡೆಯುವ ಗಟ್ಟಿತನ ಬರಬೇಕು ಎಂದರು.


    ದಕ್ಷಿಣ ಕನ್ನಡದವರು ಆಕ್ರೋಶದಿಂದ ತಮಗೆ ಬೇಕಾದದ್ದನ್ನು ಪಡೆಯುತ್ತಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯವರು ಮೃದುವಾಗಿ ಹೇಳುತ್ತಾರೆ. ಜನಪ್ರತಿನಿಧಿಗಳದ್ದು ಎಮ್ಮೆ ಚರ್ಮ. ಈ ಬಾರಿ ಅಂಥವರಿಗೆ ಬುದ್ದಿ ಕಲಿಸಲೇ ಬೇಕಾಗಿದೆ. ಗುರಿ ಮುಟ್ಟುವವರೆಗೂ ಹೋರಾಟ ನಡೆಸಲು ಗಟ್ಟಿ ಪಡೆಯನ್ನು ನಿರ್ಮಾಣ ಮಾಡಿ ನಮ್ಮ ಶಕ್ತಿ ಏನೆಂಬುದನ್ನು ಸರ್ಕಾರಕ್ಕೆ ಮುಟ್ಟಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts