More

    ಜನತಾ ದರ್ಶನದಲ್ಲಿ ಗಿಮಿಕ್ ಇಲ್ಲ ; ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸ್ಪಷ್ಟನೆ

    ತುಮಕೂರು: ರೈತರು ಹಾಗೂ ಸಾರ್ವಜನಿಕರಿಗೆ ನೇರವಾಗಿ ಶಾಸಕರು ಸಿಗಬೇಕು ಎಂಬ ಸದುದ್ದೇಶದಿಂದ ಜನತಾ ದರ್ಶನ ಹಮ್ಮಿಕೊಂಡಿದ್ದು, ಇದರಲ್ಲಿ ಯಾವುದೇ ಚುನಾವಣೆ ಗಿಮಿಕ್ ಇಲ್ಲ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸ್ಪಷ್ಟಪಡಿಸಿದರು.

    ಊರ್ಡಿಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನತಾದರ್ಶನದಲ್ಲಿ ಮಾತನಾಡಿದ ಅವರು, ಹೇಮಾವತಿ ನೀರಿನಿಂದ ವಂಚಿತವಾಗಿದ್ದ ಊರ್ಡಿಗೆರೆ ಹೋಬಳಿ ಮೈದಾಳ ಕೆರೆಗೆ 27 ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ ನೀರನ್ನು ಈ ವರ್ಷವೇ ಹರಿಸಲಾಗುವುದು, ಇದರಿಂದ ಮೂರು ಸಾವಿರ ಎಕರೆಗೆ ನೀರಾವರಿ ದೊರಕಿದಂತಾಗಲಿದೆ ಎಂದರು.

    ಬಿಜೆಪಿ ಸರ್ಕಾರ ಬಂದ ಮೇಲೆ ಪ್ರವಾಹ, ಕರೊನಾದಿಂದ ಅನುದಾನದ ಕೊರತೆ ಆಯಿತು, ಈ ಸಂದರ್ಭದಲ್ಲಿ ಬಿಜೆಪಿ ಸಚಿವರ ಕ್ಷೇತ್ರದಲ್ಲೇ ಅಭಿವೃದ್ಧಿಯಾಗಿಲ್ಲ, ಇದರಿಂದಾಗಿ ಒಂದು ವರ್ಷ ಅಭಿವೃದ್ಧಿ ಕುಂಠಿತವಾಗಿತ್ತು, ಈ ವರ್ಷ ಅನುದಾನದ ಕೊರತೆ ಆಗದೇ ಇರುವುದರಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

    ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಬಗ್ಗೆ ವಿಧಾನಸೌಧದಲ್ಲಿ ಸಚಿವರೇ ಉತ್ತರ ನೀಡಿದ್ದಾರೆ, ನಂದಿಹಳ್ಳಿಯ ಸರ್ವೇ.ನಂ.42ರಲ್ಲಿ 10 ಎಕರೆ ಕಂದಾಯ ಭೂಮಿ ಒತ್ತುವರಿಯಾಗಿರುವ ಬಗ್ಗೆ ಅಧಿಕಾರಿಗಳ ವರದಿ ಸಲ್ಲಿಸಿದ್ದಾರೆ. ಆದರೆ, ಇನ್ನು ಕ್ರಮ ಕೈಗೊಂಡಿಲ್ಲ, ಇನ್ನೊಂದು ವಾರದಲ್ಲಿ ಗಣಿಗಾರಿಕೆ ಇಲಾಖೆ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಮುಂದಾಗದೇ ಇದ್ದರೆ ಇನ್ನೊಂದು ವಾರದಲ್ಲಿ ಜಿಲ್ಲಾ ಗಣಿಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದರು.
    ಗ್ರಾಮಾಂತರ ಕ್ಷೇತ್ರ ಯಲ್ಲಾಪುರ, ಸ್ವಾಂದೇನಹಳ್ಳಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿರುವ ಬಗ್ಗೆ ಮಾಹಿತಿ ಇದ್ದು, ಯಲ್ಲಾಪುರದಲ್ಲಿ ಅಂತರ್ಜಲ ಇಲ್ಲ, ಬೇಸಿಗೆ ಆರಂಭಗೊಳ್ಳುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅನುದಾನ ಮೀಸಲಿಡುವುದು ಅಗತ್ಯವಾಗಿದೆ ಎಂದು ಹೇಳಿದರು.

    ಜನತಾದರ್ಶನದಲ್ಲಿ ತಹಸೀಲ್ದಾರ್ ಮೋಹನ್‌ಕುಮಾರ್, ಕಂದಾಯ ಅಧಿಕಾರಿ ಮಹೇಶ್, ಬಿಇಒ ಹನುಮಾನಾಯ್ಕ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಪ್ಪ, ಯುವ ಜೆಡಿಎಸ್ ಅಧ್ಯಕ್ಷ ವಿಷ್ಣುವರ್ಧನ, ಯುವ ಜೆಡಿಎಸ್ ಕಾರ್ಯಾಧ್ಯಕ್ಷ ಸುವರ್ಣಗಿರಿ ಕುಮಾರ್, ಎಸ್‌ಸಿ ಘಟಕದ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಇದ್ದರು.

    ಸ್ಥಳದಲ್ಲಿಯೇ ಆದೇಶಪತ್ರ ವಿತರಣೆ: ವಿವಿಧೆಡೆ ನಡೆದ ಜನತಾದರ್ಶನದಲ್ಲಿ 1400ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 600ಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ, ಉಳಿದ ಅರ್ಜಿಗಳನ್ನು 15 ದಿನದಲ್ಲಿ ಇತ್ಯರ್ಥ ಪಡಿಸಲಾಗುವುದು, ಹೆಬ್ಬೂರು ಹೋಬಳಿಯಲ್ಲಿ ಸಲ್ಲಿಕೆಯಾದ 1500 ಅರ್ಜಿಗಳಲ್ಲಿ 800 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ, ಊರ್ಡಿಗೆರೆ ಹೋಬಳಿ ಜನತಾದರ್ಶನದಲ್ಲಿ 2000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಪಿಂಚಣಿಗೆ ಅರ್ಜಿ ಸಲ್ಲಿಸಿದವರಿಗೆ ಸ್ಥಳದಲ್ಲಿಯೇ ಆದೇಶ ಪ್ರತಿ ನೀಡಲಾಗುತ್ತಿದೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts