More

    ಜಗದಜನರ ಬಾಳು ಬೆಳಗಿದವರು ವಿಶ್ವಾರಾಧ್ಯರು

    ಯಾದಗಿರಿ: ಈ ನಾಡು ಕಂಡ ಅವಧೂತ ಪರಂಪರೆಯ ವಿಶ್ವಾರಾಧ್ಯರು ಜಗದ ಜನರ ಬಾಳು ಬೆಳಗಿದ ಪುಣ್ಯಪುರುಷರು ಎಂದು ಪೀಠಾಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.

    ತಾಲೂಕಿನ ಅಬ್ಬೆತುಮಕೂರು ಗ್ರಾಮದಲ್ಲಿ ಶನಿವಾರ ಸಂಜೆ ಜರುಗಿದ ಶ್ರೀ ವಿಶ್ವಾರಾಧ್ಯರ ಭವ್ಯ ರಥೋತ್ಸವದ ನಂತರ ಏರ್ಪಡಿಸಿದ್ದ ಮಾನವ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಯುಗ ಪುರುಷ, ಶಖ ಪುರಷನಾದ ವಿಶ್ವಾರಾಧ್ಯರು ದೇವಿಯ ಆರಾಧಕರಾಗಿ ಅವಳ ಒಲುಮೆಗೆ ಪಾತ್ರರಾದವರು. ಅಣಿಮಾದಿ ಅಷ್ಟಸಿದ್ಧಿಗಳನ್ನು ಸಂಪಾದಿಸಿಕೊಂಡ ಮಹಾತ್ಮರಲ್ಲದೆ, ತಾವು ಸಂಪಾದಿಸಿದ್ದ ಜ್ಞಾನವನ್ನು ಲೋಕದ ಜನತೆಗೆ ಉಣಬಡಿಸಿ ಜಗದ ಕಾಳಿಕೆಯನ್ನು ಕಳೆಯುವ ಜಗದೊಡೆಯರಾಗಿದ್ದಾರೆ ಎಂದರು.

    ವಿಶ್ವಾರಾಧ್ಯರ ಕತರ್ೃ ಗದ್ದುಗೆಯ ಎದುರು ನಿಂತರೆ, ಎಲ್ಲರಲ್ಲಿಯೂ ಭಕ್ತಿಭಾವ ಸಹಜವಾಗಿಯೇ ಮೂಡುತ್ತದೆ. ಭಕ್ತಿಯಿಂದ ವಿಶ್ವಾರಾಧ್ಯರನ್ನು ಭಜಿಸಿದರೆ ಭಕ್ತರಿಗೆ ಬೇಡಿದ್ದನ್ನು ಕೊಡುವಕಾಮಧೇನು, ಕಲ್ಪತರು ಅವರಾಗಿದ್ದಾರೆ ಎಂದು ಹೇಳಿದರು.

    ಒಮ್ಮೆ ನಾಯ್ಕಲ್ನಿಂದ ಸದ್ಬಕ್ತರಿಗೆ ತಮ್ಮ್ಮನ್ನು ಎತ್ತಿನ ಬಂಡಿಯಲ್ಲಿ ಎಳೆದುಕೊಂಡು ಬರುವಂತೆ ಹೇಳಿ ಅಬ್ಬೆತುಮಕೂರಿನ ಮಠದ ಮುಂಭಾಗದಲ್ಲಿ ಬಂದಾಗ ಬಂಡಿಯನ್ನು ಆಕಡೆಯಿಂದ, ಈಕಡೆ ಎಳೆಸುತ್ತಾರೆ. ಆಗ ವಿಶ್ವಾರಾಧ್ಯರು ಅಬ್ಬಾ ಏನು ಜನ ಎಂದು ಉದ್ಘರಿಸಿದರಂತೆ. ಅಂದು ಆ ಪುಣ್ಯಾತ್ಮ ಹೇಳಿದಂತೆ ಇಂದು ಲಕ್ಷಾವ ಭಕ್ತರು ಸೇರಿರುವುದೇ ಅದಕ್ಕೆ ಸಾಕ್ಷಿಯಾಗಿದೆ ಎಂದರು.
    ಪಾಳಾದ ಗುರುಮೂತರ್ಿ ಶಿವಾಚಾರ್ಯರು ಮಾತನಾಡಿ, ಮಠದ ಪೀಠಾಪತಿಗಳು ತಮ್ಮ ಕತರ್ೃತ್ವ ಶಕ್ತಿ ಯಿಂದ ಸಮಸ್ತ ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಅಲ್ಪಕಾಲದಲ್ಲಿಯೇ ಅಭಿವೃದ್ಧಿಯನ್ನು ಮಾಡಿದ್ದಾರೆ. ಲಕ್ಷಲಕ್ಷ

    ಭಕ್ತವೃಂದ ಈ ಕ್ಷೇತ್ರಕ್ಕೆ ಧಾವಿಸಿ ಬರುತ್ತಿದ್ದು, ಅವರೆಲ್ಲ ವಿಶ್ವಾರಾಧ್ಯರ ಕೃಪೆಗೆ ಒಳಗಾಗಿದ್ದಾರೆ ಎಂದು ಹೇಳಿದರು.
    ಶಹಾಪೂರದ ಸೂಗುರೇಶ್ವರ ಶಿವಾಚಾರ್ಯರು ಅನುಭಾವ ನೀಡಿ, ವಿಶ್ವಾರಾಧ್ಯರು ನಡೆದಾಡಿದ ಈ ಪುಣ್ಯಕ್ಷೇತ್ರಕ್ಕೆ ನಾವು ಬರುತ್ತಿರುವುದು ನಮಗೆ ತುಂಬಾ ಸಂತಸವಾಗಿದೆ. ಇಲ್ಲಿನ ಅಸಂಖ್ಯಾತ ಭಕ್ತವೃಂದ ಗಮನಿಸಿದರೆ ವಿಶ್ವಾರಾಧ್ಯರ ಮಹಿಮೆ ಅಗಾಧವಾದದ್ದು ಎಂಬುದು ಮನದಟ್ಟಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts