More

    ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಮಹನೀಯ, ಶಾಸಕ ಎಸ್.ಆರ್.ವಿಶ್ವನಾಥ್ ಬಣ್ಣನೆ, ವಿಶ್ವದಲ್ಲಿ ಮೊದಲ ಸಂಸತ್ತನ್ನು ಪರಿಚಯಿಸಿದ ಕ್ರಾಂತಿಕಾರಿ

    ನೆಲಮಂಗಲ: ಬಸವಣ್ಣನವರ ಮಾನವೀಯತೆಯ ಸಂದೇಶಗಳು ಸೌಹಾದರ್ ಮತ್ತು ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟರು.

    ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಮತ್ತು ಪವಾಡ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

    ಕ್ರಾಂತಿಕಾರಿ ಬಸವಣ್ಣ, ಜಗಜ್ಯೋತಿ ಬಸವಣ್ಣ ಸೇರಿ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಬಸವಣ್ಣನವರು ಶತಮಾನಗಳ ಹಿಂದೆಯೇ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಮಹನೀಯ. ಅನುಭವ ಮಂಟಪದ ಹೆಸರಿನಲ್ಲಿ ವಿಶ್ವದಲ್ಲಿ ಮೊದಲ ಸಂಸತ್ತನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

    ದೇಶದ ಧರ್ಮ ಸಂಸ್ಕೃತಿಯನ್ನು ರಕ್ಷಣೆ ಮಾಡುವ ಕೆಲಸ ನಾಡಿನ ಮಠಗಳಿಂದ ಆಗುತ್ತಿರುವುದು ಸಂತಸದ ಸಂಗತಿ ಎಂದರು.

    ಕುಣಿಗಲ್ ಬೆಟ್ಟಹಳ್ಳಿಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸೋಲೂರು ಗದ್ದುಗೆಮಠದ ಶ್ರೀ ಮಹಾಂತ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪವಾಡ ಶ್ರೀ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ಮಕ್ಕಳ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ‘ಪವಾಡ ಶ್ರೀ ಫೌಂಡೇಷನ್ ವೆಬ್‌ಸೈಟ್’ ಉದ್ಘಾಟಿಸಿದರು. ವೀರಶೈವ ಅಭಿವೃದ್ಧಿ ನಿಗಮದ ಪರಮಶಿವಯ್ಯ ‘ಅಖಿಲ ಭಾರತ ಸನಾತನ ಮಠಾಧಿಪತಿಗಳ ಒಕ್ಕೂಟ ಸೇವಾ ಟ್ರಸ್ಟ್ ಹಾಗೂ ಮಠಗಳು’ ವೆಬ್‌ಸೆಟ್ ಉದ್ಘಾಟಿಸಿದರು. ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಗುರುವಣ್ಣ ದೇವರಮಠದ ಶ್ರೀ ನಂಜುಂಡಸ್ವಾಮೀಜಿ ಇತರರು ಸಾನ್ನಿಧ್ಯವಹಿಸಿದ್ದರು.

    ರಥೋತ್ಸವ ಸಂಭ್ರಮ: ಮಠದಲ್ಲಿ ಕ್ಷೇತ್ರನಾಥ ಶ್ರೀ ಪವಾಡ ಬಸವಣ್ಣದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ 10.30 ಗಂಟೆಯ ವೇಳೆಗೆ ವಿಶೇಷವಾಗಿ ಸಿಂಗರಿಸಿದ್ದ ರಥದಲ್ಲಿ ಶ್ರೀ ಬಸವಣ್ಣದೇವರ ಮೂರ್ತಿ ಪ್ರತಿಷ್ಠಾಪಿಸಿದ ಮಠದ ಸದ್ಭಕ್ತರು ರಥ ಎಳೆದು ಸಂಭ್ರಮಿಸಿದರು.

    ಮಾಜಿ ಶಾಸಕ ಎಂ.ವಿ.ನಾಗರಾಜು, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಸ್.ಮಲ್ಲಯ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಹೊಂಬಯ್ಯ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್.ರಾಮ್, ನಗರಸಭೆ ಸದಸ್ಯರಾದ ಗಂಗಾಧರ್‌ರಾವ್, ಶಿವಕುಮಾರ್, ಸಿ.ಪ್ರದೀಪ್‌ಕುಮಾರ್, ಭಾರತೀಯ ವೈಧ್ಯಕೀಯ ಸಂಘದ ಅಧ್ಯಕ್ಷ ಡಾ.ಜಯಪ್ರಸಾಧ್, ಅ.ಭಾ.ವಿ.ಮಹಸಭಾ ನಿ.ಪೂರ್ವ ಜಿಲ್ಲಾಧ್ಯಕ್ಷ ಎನ್.ಎಸ್.ನಟರಾಜು, ಮಹಿಳಾಘಟಕ ಜಿಲ್ಲಾಧ್ಯಕ್ಷೆ ವಿ.ರಾಜಮ್ಮ, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಪೂರ್ಣಿಮಾ, ಉಪಾಧ್ಯಕ್ಷೆ ಮಂಜುಳಾ ಸುರೇಶ್, ನೀಲಾ ನಾಗರಾಜು, ತಾಲೂಕು ಅಧ್ಯಕ್ಷ ಎನ್.ಎಸ್.ಶಾಂತಕುಮಾರ್, ನಿರ್ದೇಶಕರಾದ ಜಗದೀಶ್, ಎಂ.ಜಿ.ಲೋಕೇಶ್, ಖಜಾಂಚಿ ಸತೀಶ್, ರೋಟರಿ ಅಧ್ಯಕ್ಷ ವಿ.ಆರ್.ಸ್ವಾಮಿ, ನಿರ್ದೇಶಕ ವಿ.ರಂಜಿತ್, ಗಂಗಾಧರಯ್ಯ, ಪ್ರಗತಿಪರ ವೀರಶೈವ ವೇದಿಕೆ ಅಧ್ಯಕ್ಷ ಯಾಡಾಳು ಸತೀಶ್, ವೀರಶೈವ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ನಾಗರಾಜು, ಮುಖಂಡ ತೀರ್ಥೇಶ್ ಮತ್ತಿತರರು ಇದ್ದರು.

     

    ವಿಶ್ವವೇ ಆರಾಧನೆ ಮಾಡುವ ವ್ಯಕ್ತಿ
    ಬಸವಣ್ಣ ಕೇವಲ ವ್ಯಕ್ತಿಯಲ್ಲ. ಅವರೊಂದು ಶಕ್ತಿ. ಇಡೀ ವಿಶ್ವವೇ ಆರಾಧನೆ ಮಾಡುವ ವ್ಯಕ್ತಿಯಾಗಿದ್ದು, ಅವರ ವಚನಗಳು ಪ್ರಸ್ತುತ ಸಮಾಜದಲ್ಲಿ ಬೇರೂರಿವೆ. ಮಹಿಳೆಯರಿಗೆ ವಿಶೇಷ ಸ್ಥಾನ ಕಲ್ಪಿಸಿದ ಮೊದಲಿಗರು. ಕಾಯಕ ತತ್ವದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸಿದ್ದಾರೆ ಎಂದು 2021 ಸಾಲಿನ ಪವಾಡ ಶ್ರೀ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ರಂಜಾನ್‌ದರ್ಗಾ ಬಣ್ಣಿಸಿದರು. 700ಕ್ಕೂ ಹೆಚ್ಚು ಶಿವಶರಣರಿದ್ದ ಬಸವಣ್ಣನವರ ಅನುಭವ ಮಂಟಪದ ದೇಶದ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದೆ. ಬಸವಣ್ಣನವರ ಚಿಂತನೆಗಳಿಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ ಎಂದರು.

    ಧೈರ್ಯ ಇದ್ದಲ್ಲಿ ಸಾಧನೆ
    ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಹಲವಾರು ವ್ಯಕ್ತಿಗಳ ಶ್ರಮವಿರುತ್ತದೆ. ಕೆಲವೊಂದು ಶಸ್ತ್ರ ಚಿಕಿತ್ಸೆ ಮಾಡುವ ವೇಳೆ ಇಂದಿಗೂ ಸವಾಲುಗಳನ್ನು ಎದುರಿಸಿದ್ದೇನೆ. ಪ್ರತಿಯೊಬ್ಬರೂ ಧೈರ್ಯದಿಂದ ಮನಸ್ಸು ಮಾಡಿದ್ದರೆ ಅಸಾಧ್ಯವಾದುದ್ದನ್ನು ಸಾಧಿಸಬಹುದಾಗಿದೆ ಎಂದು 2022ನೇ ಸಾಲಿನ ಪ್ರಶಸ್ತಿ ಸ್ವೀಕರಿಸಿದ್ದ ವೈದ್ಯ ಎಸ್.ವಿದ್ಯಾದರ ಅಭಿಪ್ರಾಯಪಟ್ಟರು. ನನ್ನ ಅಲ್ಪ ಪ್ರಮಾಣದ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ ಶ್ರೀ ಮಠಕ್ಕೆ ಅಭಾರಿಯಾಗಿದ್ದೇನೆ ಎಂದರು.

    03 ನೆಲಪಿಹೆಚ್ 03 ರಥೋತ್ಸವ:
    ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಬಸವ ಜಯಂತಿ ಪ್ರಯುಕ್ತ ಬಸವಣ್ಣ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.

    19 ನೆಲಪಿಹೆಚ್ 04 ಪವಾಡ ಶ್ರೀ ಪ್ರಶಸ್ತಿ:
    ಬಸವಜಯಂತಿಯ ವೇದಿಕೆ ಕಾರ್ಯಕ್ರಮದಲ್ಲಿ ಸಾಹಿತಿ ರಂಜಾನ್‌ದರ್ಗಾ ಅವರಿಗೆ ಪವಾಡ ಶ್ರೀ ನೀಡಿ ಗೌರವಿಸಲಾಯಿತು. ಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತಿತರ ಮಠಾಧೀಶರು ಇದ್ದರು.

    19 ನೆಲಪಿಹೆಚ್ 05 ಪವಾಡ ಶ್ರೀ ಪ್ರಶಸ್ತಿ:
    ವೈದ್ಯ ಎಸ್.ವಿದ್ಯಾದರ್ ಅವರಿಗೆ ಪವಾಡ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts