More

    ಚುನಾವಣೆ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ: ಶ್ರೀಧರ ಸುಲ್ತಾನಪೂರ

    ವಿಜಯವಾಣಿ ಸುದ್ದಿಜಾಲ, ಗದಗ
    ನಮ್ಮ ಸಂವಿಧಾನವು ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾಮಿರ್ಕ ಸ್ವಾತಂತ್ರ್ಯದ ಹಕ್ಕು, ಸಾಂಸತಿಕ ಮತ್ತು ಶೈಣಿಕ ಹಕ್ಕುಗಳು ಮತ್ತು ಸಾಂವಿಧಾನಿಕ ಪರಿಹಾರಗಳ ಹಕ್ಕುಗಳನ್ನು ಭಾರತೀಯರ ನಾಗರಿಕರಿಗೆ ಹೇಗೆ ನೀಡಿದೆಯೋ ಅದೇ ರೀತಿ ಸಂವಿಧಾನವು ಮತ ಚಲಾಲಿಸುವ ಹಕ್ಕನ್ನು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ನೀಡಿದೆ ಎಂದು ರೋಟರಿ ಸಂಸ್ಥೆಯ ಶ್ರಿಧರ ಸುಲ್ತಾನಪುರ ಹೇಳಿದರು.
    ನಗರದ ಜೆಟಿ ಕಾಲೇಜಿನಲ್ಲಿ ಜರುಗಿದ ಮತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿದಿ ಮಾತನಾಡಿದ ಅವರು, ಚುನಾವಣೆ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾಗಿದೆ. ಮತದಾನ ಮಾಡಿ ತಾವೆಲ್ಲರೂ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದರು.
    ಜೆಟಿ ಕಾಲೇಜ್​ ಬಿಸಿಎ, ಬಿಬಿಎ ಸಂಯೋಜಕ ಸುದೀಪ ಕುಂದಗೋಳ ಮಾತನಾಡಿ, ಎಲ್ಲ ವಿದ್ಯಾಥಿರ್ಗಳಿಗೆ ತಾವು ಮತದಾನ ಮಾಡುವುದರ ಜೊತೆಗೆ ತಮ್ಮ ಕುಟುಂಬದಲ್ಲಿನ ಸದಸ್ಯರು ಹಾಗೂ ತಮ್ಮ ಮಿತ್ರರಿಗೆ ಮತದಾನ ಮಾಡಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
    ವಿರೇಂದ್ರ ಚೆನ್ನಪ್ಪನ್ನವರ, ಚಂದ್ರಮೌಳಿ ಜಾಲಿ, ವೀಣಾ ತಿರ್ಲಾಪೂರ, ಅಯ್​ ಶೆಟ್ಟಿ, ಶಿವಾಚಾರ್ಯ ಹೊಸಳ್ಳಿಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts