More

    ಚುನಾವಣಾ ದೂರು ಸಲ್ಲಿಸಲು ಸಿ ವಿಜಿಲ್ ಆ್ಯಪ್

    ಹಾಸನ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮಾ. 16ರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲು ಭಾರತೀಯ ಚುನಾವಣಾ ಆಯೋಗವು ಸಿ-ವಿಜಿಲ್ ಎಂಬ ಮೊಬೈಲ್ ಆ್ಯಪ್ ಅನ್ನು ತೆರೆದಿದೆ.
    ಯಾವುದೇ ಚುನಾವಣಾ ಅಕ್ರಮಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಸಾರ್ವಜನಿಕರು ನಿಖರವಾದ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಸಿ-ವಿಜಿಲ್ ಆ್ಯಪ್ ಮೂಲಕ ನೀಡಬಹುದಾಗಿದೆ. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು. ಸಾರ್ವಜನಿಕರು ಚುನಾವಣೆ ಅಕ್ರಮಗಳು ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಇದರಲ್ಲಿ ಮಾಹಿತಿ ನೀಡಬಹುದಾಗಿದೆ.
    ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಯಾವುದೇ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಫೋಟೋ, ವೀಡಿಯೋಗಳನ್ನು ನೇರವಾಗಿ ಈ ಆ್ಯಪ್ ಮೂಲಕ ಚಿತ್ರೀಕರಿಸಿ ಕಳುಹಿಸಬಹುದಾಗಿದೆ. ಇದರಿಂದ ಆಯಾ ಸ್ಥಳದ ಜಿ.ಪಿ.ಎಸ್. ಮಾಹಿತಿ ಸಮೇತ ದೃಶ್ಯ ಹೋಗಲಿದೆ. ಈ ಮೂಲಕ ದೂರುಗಳನ್ನು ಪರಿಶೀಲಿಸಿ ತ್ವರಿತವಾಗಿ ಸ್ಪಂದಿಸಿ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗಕ್ಕೆ ನೆರವಾಗಲಿದೆ.
    ಸಿ ವಿಜಿಲ್ ಆ್ಯಪ್‌ನಲ್ಲಿ ದೂರು ಬಂದ ತಕ್ಷಣ ಮಾಹಿತಿ ಜಿಲ್ಲಾ ಚುನವಣಾಧಿಕಾರಿಗಳ ಕಂಟ್ರೋಲ್ ರೂಂಗೆ ಹೋಗಲಿದೆ. ಚುನಾವಣಾಧಿಕಾರಿ ಕಚೇರಿಯಿಂದ ಆಯಾ ಪ್ರದೇಶದ ವಿವಿಧ ಚುನಾವಣಾ ತಪಾಸಣಾ ತಂಡಗಳಾದ ಫ್ಲೈಯಿಂಗ್ ಸ್ಕ್ವಾಡ್ ಟೀಂಗಳಿಗೆ ಕೂಡಲೇ ಮಾಹಿತಿ ರವಾನೆಯಾಗಿ, ಯಾವುದೇ ಅಕ್ರಮಗಳು ವರದಿಯಾದ ತಕ್ಷಣವೇ ತಪಾಸಣಾ ತಂಡಗಳು ನಿಖರವಾದ ಸ್ಥಳಕ್ಕೆ ಭೇಟಿ ನೀಡಲಿದೆ.
    ಸಾರ್ವಜನಿಕರು ಸಿ-ವಿಜಿಲ್ ಆಪ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಚುನಾವಣಾ ಆಕ್ರಮಗಳ ಮಾಹಿತಿ ನೀಡಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಜಿಲ್ಲಾ ಚುನವಣಾಧಿಕಾರಿಗಳ ಪ್ರಕಟಣೆ ತಿಳಿಸಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts