More

    ಚಿನ್ನದ ನಾಣ್ಯ ಮಾರಾಟ ಸೋಗಿನಲ್ಲಿ ಲಕ್ಷಾಂತರ ವಂಚನೆ

    ಮೊಳಕಾಲ್ಮೂರು: ಚಿನ್ನದ ನಾಣ್ಯ ಮಾರಾಟದ ಸೋಗಿನಲ್ಲಿ 8 ಲಕ್ಷ ರೂ.ದೋಚಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬಾತನನ್ನು ರಾಂಪುರ ಪೊ ಲೀಸರು ಬಂಧಿಸಿ, 7.70 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
    ಬಂಧಿತನನ್ನು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾಸಾಪುರ ಕೊರಚರಹಟ್ಟಿಯ ಹನುಮಂತಪ್ಪ(25)ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಸಂಡೂರು ತಾಲೂಕು ತಿಮ್ಲಾಪುರಕೊರಚರಹಟ್ಟಿಯ ರಾಮಾಂಜನೇಯ(23)ತಲೆಮರೆಸಿಕೊಂಡಿದ್ದಾನೆ.
    ಪ್ರಕರಣದ ವಿವರ:
    ಆಂಧ್ರಪ್ರದೇಶದ ಮಿನಿಗಾವಿಜಯ್ ಎಂಬುವರಿಗೆ ಒಬ್ಬ ಆರೋಪಿ ಪದೆ,ಪದೇ ದೂರವಾಣಿ ಕರೆ ಮಾಡಿ, ಹುಬ್ಬಳ್ಳಿಯಲ್ಲಿದ್ದ ತಮ್ಮ ತಾ ತನ ಹಳೆಯ ಮನೆ ಕೆಡವಿ, ಹೊಸ ಮನೆಗೆ ಪಾಯ ತೆಗೆಯುವ ವೇಳೆ 5 ಕೆಜಿ ಬಂಗಾರದ ನಾಣ್ಯಗಳು ದೊರಕಿವೆ. ಅವುಗಳನ್ನು ನಿಮಗೆ ಅರ್ಧ ಬೆಲೆಗೆ ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ.
    ಡಿ.5ರಂದು ಡಿ.ಹಿರೇಹಾಳ್ ಬಳಿ,ಇಬ್ಬರು ಆರೋಪಿತರು 2 ಅಸಲಿ ಬಂಗಾರದ ನಾಣ್ಯಗಳನ್ನು ಪರೀಕ್ಷೆಗೆಂದು ವಿಜಯ್‌ಗೆ ಕೊಟ್ಟಿದ್ದು, 90 ಲಕ್ಷ ರೂ.ತಂದು ಕೊಟ್ಟರೆ, ಉಳಿದೆಲ್ಲ ಬಂಗಾರ ನಾಣ್ಯಗಳನ್ನು ಕೊಡುವುದಾಗಿ ತಿಳಿಸಿದ್ದಾರೆ. ಡಿ.11ರಂದು ರಾಮಸಾಗರ ಕ್ರಾಸ್ ಬಳಿ ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು, ತನ್ನ ಸ್ನೇಹಿತನೊಂದಿಗೆ ಅಲ್ಲಿಗೆ ತೆರಳಿದ್ದ ವಿಜಯ್‌ರಿಂದ 8 ಲಕ್ಷ ರೂ.ನಗದು,ಮೊಬೈಲ್ ಹಾಗೂ ವಿ ಜಯ್ ಸ್ನೇಹಿತನ ಮೊಬೈಲ್ ಕಸಿದುಕೊಂಡು,ಪೊಲೀಸರು ಬರುತ್ತಿದ್ದಾರೆ ಆಮೇಲೆ ಬಂಗಾರ ಕೊಡುವುದಾಗಿ ಎಂದು ಹೇಳಿ ಪರಾರಿಯಾ ಗಿದ್ದಾರೆ.
    ವಿಜಯ್ ದೂರು ಆಧರಿಸಿ ತನಿಖೆ ನಡೆಸಿದ್ದ ಪಿಎಸ್‌ಐಗಳಾದ ಮಹೇಶ್‌ಲಕ್ಷ್ಮಣ್ ಹೊಸಪೇಟೆ ಹಾಗೂ ಪರಶುರಾಮ್ ಎನ್.ಲಮಾ ಣಿ ಹಾಗೂ ಸಿಬ್ಬಂದಿ, ಆರೋಪಿ ಹನುಮಂತಪ್ಪನನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿ ರಾಮಾಂಜನೇಯನ ಶೋಧ ಮುಂದುವರಿದಿದೆ. ಆಮಿಷಗಳಿಗೆ ಒಳಗಾಗಿ ಮೋಸ ಹೋಗಬಾರದು, ಇಂಥ ವಂಚನೆಗಳೆಡೆ ಜಾಗೃತರಾಗಿರ ಬೇಕೆಂದು ಎಸ್‌ಪಿ ಧ ರ್ಮೆಂದರ್‌ಕುಮಾರ್‌ಮೀನಾ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts