More

    ಚಿಕ್ಕೋಡಿ ಪುರಸಭೆಗೆ 8.50 ಕೋಟಿ ರೂ.

    ಚಿಕ್ಕೋಡಿ ಗ್ರಾಮೀಣ, ಬೆಳಗಾವಿ: ನಗರೋತ್ಥಾನ ಯೋಜನೆಯಡಿ ರಾಜ್ಯ ಸರ್ಕಾರವು ಚಿಕ್ಕೋಡಿ ಪುರಸಭೆಗೆ 8.50 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಪುರಸಭೆ ಹಿರಿಯ ಸದಸ್ಯ ಜಗದೀಶ ಕವಟಗಿಮಠ ಹೇಳಿದರು.

    ಚಿಕ್ಕೋಡಿ ಪುರಸಭೆ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನವನ್ನು ಪಟ್ಟಣದ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ತಿಳಿಸಿದರು. ನಗರೋತ್ಥಾನ ಯೋಜನೆಯಡಿ ಪಟ್ಟಣದ ಪುರಸಭೆ ಮಾಲ್ಕಿ ಜಾಗದಲ್ಲಿ ನಿಗಪಡಿಸಿದ ತಿನಿಸು ಕಟ್ಟೆ ನಿರ್ಮಿಸಲು 40 ಲಕ್ಷ ರೂ., ಎಂ.ಕೆ.ಕೆ ಕನ್ವೇಷನಲ್ ಹಾಲ್ ಕಾಂಪೌಂಡ್ ನಿರ್ಮಿಸಲು 40 ಲಕ್ಷ ರೂ., ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 4.33 ಕೋಟಿ ರೂ., ಬೀದಿ ದೀಪಗಳಿಗಾಗಿ 34.80 ಲಕ್ಷ ರೂ., ವಾಲ್ಮಿಕಿ ಸಮುದಾಯ ಭವನ ನಿರ್ಮಾಣಕ್ಕಾಗಿ 14.18 ಲಕ್ಷ ರೂ., ಜಿಮ್ ಬಿಲ್ಡಿಂಗ್ ನಿರ್ಮಾಣಕ್ಕಾಗಿ 15 ಲಕ್ಷ ರೂ., ಸೇತುವೆ ನಿರ್ಮಾಣಕ್ಕೆ 64.70 ಲಕ್ಷ ರೂ., ಉದ್ಯಾನ ಹಾಗೂ ಸ್ಮಶಾನ ಅಭಿವೃದ್ಧಿಗೆ 55.65 ಲಕ್ಷ ರೂ. ಹಾಗೂ ವಿವಿಧ ಕೆಲಸಗಳಿಗೆ 1.52 ಕೋಟಿ ರೂ. ಹೀಗೆ ಒಟ್ಟು 8.50 ಕೋಟಿ ರೂ. ಅನುದಾನ ಮಂಜೂರಾತಿಯಾಗಿದ್ದು, ಶೀಘ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

    ಸಚಿವೆ ಶಶಿಕಲಾ ಜೊಲ್ಲೆ ಅವರು ಚಿಕ್ಕೋಡಿಯ ವಿವಿಧ ಮಂದಿರ, ಮಸೀದಿಗಳಿಗೆ ಅನುದಾನ ನೀಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ನಗರೋತ್ಥಾನದ ಅನುದಾನ ಮಂಜೂರಾತಿಗೆ ಸಹಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ವಿಪ ಸದಸ್ಯ ಲಕ್ಷ್ಮಣ ಸವದಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಇತರರನ್ನು ಅಭಿನಂದಿಸುತ್ತೇವೆ ಎಂದು ತಿಳಿಸಿದರು.

    ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಸಭಾಪತಿ ಆದಂ ಗಣೇಶವಾಡಿ, ಸದಸ್ಯರಾದ ನಾಗರಾಜ ಮೇದಾರ, ಸಂತೋಷ ಜುಗುಳೆ, ಬಾಬು ಮಿರ್ಜೆ, ಸಿದ್ದಪ್ಪ ಡಂಗೇರ, ಸೋಮನಾಥ ಗಾವನಾಳೆ, ನಾಗರಾಜ ಮೇದಾರ, ಸಂತೋಷ ಟವಳೆ, ಕಿರಣ ಯರಂಡೊಲೆ, ವಿನಾಯಕ ತಂಗಡಿ, ಪ್ರಶಾಂತ ಕಾಳಿಂಗೆ, ಮುಖ್ಯಾಧಿಕಾರಿ ಡಾ. ಸುಂದರ ರೂಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts