More

    ಚಿಕ್ಕೋಡಿಯಲ್ಲಿ ಅಂತಾರಾಜ್ಯ ಕಳ್ಳರ ಬಂಧನ

    ಚಿಕ್ಕೋಡಿ: ನಕಲಿ ದಾಖಲೆ ಸೃಷ್ಟಿಸಿ, ವಿಮೆ ಕಂಪನಿಯಿಂದ ಹಣ ಕೊಡಿಸುತ್ತೇವೆ ಎಂದು ಲಾರಿಯನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಗುರುವಾರ ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

    ಪಟ್ಟಣದ ಡಿವೈಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಾಳವಾ ತಾಲೂಕಿನ ಯುನಸ್ ಸಿರಾಜ್ ಸೈಯ್ಯದ್ ಎಂಬಾತ ಕಮಿಷನ್ ಮೇಲೆ 12 ಲಕ್ಷ ರೂ.ಗೆ ಜೆಸಿಬಿ ಮಾರಾಟ ಮಾಡಿದ್ದ. ಈ ಪೈಕಿ 6 ಲಕ್ಷ ರೂ. ನಗದು, ಕಮಿಷನ್ 50 ಸಾವಿರ ಹಣ ಪಡೆದಿದ್ದ. ವಾಹನದ ವಿಮೆ ಪ್ರತಿ ಹಾಗೂ ಬಾಕಿ ಹಣವನ್ನು ನಂತರ ಕೊಡುತ್ತೇನೆಂದು ನನಗೆ ಮೋಸ ಮಾಡಿದ್ದ ಎಂದು ಇಚಲಕರಂಜಿಯ ಫಯಾಜ್ ಮಹಮ್ಮದ್ ಹನಿಫ್ ದಾಲಾಯತ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಮಾ. 9ರಂದು ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಸಾಂಗ್ಲಿ ಜಿಲ್ಲೆಯ ವಾಳವಾ ತಾಲೂಕಿನ ಮಚ್ಛೇಂದ್ರಗಡ ಗ್ರಾಮದ ಯುನಸ್ ಸೈಯ್ಯದ್, ದಾಂಡೇಲಿಯ ಅಫ್ಜ್‌ಲ್ ದಿಲಾವರ್ ಎಂಬಾತರನ್ನು ಬಂಧಿಸಿ, ಅವರಿಂದ ಟಾಟಾ ಕಂಪನಿಯ 4 ಟಿಪ್ಪರ, ಮಹೀಂದ್ರಾ ಕಂಪನಿಯ 2 ಟಿಪ್ಪರ್, ಅಶೋಕ ಲೈಲಾಂಡ್ ಕಂಪನಿಯ 3 ವಾಹನ, ಒಂದು ಜೆಸಿಬಿ, ಐಶರ್ ಕಂಪನಿಯ 1 ಟ್ರಕ್, ಟಾಟಾ ಕಂಪನಿಯ ಒಂದು ಗೂಡ್ಸ್ ಸೇರಿ 2.60 ಕೋಟಿ ರೂ. ಮೌಲ್ಯದ 12 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts