More

    ಚಿಕ್ಕಮಗಳೂರು ಉತ್ಸವದಲ್ಲಿ ದಲಿತರಿಗಿಲ್ಲ ಅವಕಾಶ

    ಚಿಕ್ಕಮಗಳೂರು: ನಗರದಲ್ಲಿ ಹಮ್ಮಿಕೊಂಡಿರುವ ಚಿಕ್ಕಮಗಳೂರು ಉತ್ಸವದ 22 ಸಮಿತಿಯಲ್ಲಿ ದಲಿತರಿಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳ ಐಕ್ಯತಾ ಚಾಲನ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

    ನಗರದ ಆಜಾದ್ ಪಾರ್ಕ್​ನಲ್ಲಿ ದಲಿತಪರ ಸಂಘಟನೆಗಳು ಹಾಗೂ ಎಸ್​ಡಿಪಿಐ ಕಾರ್ಯಕರ್ತರು ಜಿಲ್ಲಾಧಿಕಾರಿ ಹಾಗೂ ಶಾಸಕ ಸಿ.ಟಿ.ರವಿ ವಿರುದ್ಧ ಘೊಷಣೆ ಕೂಗಿದರು.

    ದಲಿತ ಮುಖಂಡ ಮಂಜುನಾಥ್ ಮಾತನಾಡಿ, 22 ಕಾರ್ಯಕಾರಿಣಿ ಸಮಿತಿಯಲ್ಲಿ ದಲಿತರಿಗೆ ಅವಕಾಶ ನೀಡಿಲ್ಲ. ಹಿಂದು ಮಹಾಸಭಾದವರೇ ಕಾರ್ಯಕಾರಿಣಿಯಲ್ಲಿದ್ದಾರೆ. ವರ್ಷಕ್ಕೊಮ್ಮೆ ದತ್ತ ಜಯಂತಿ, ಮೂರು ವರ್ಷಕ್ಕೊಮ್ಮೆ ಚಿಕ್ಕಮಗಳೂರು ಹಬ್ಬವನ್ನು ಆಚರಿಸುತ್ತಿದ್ದಾರೆ. ಜನರ ಬೆವರಿನ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಬಾರ್​ಲೈನ್ ರಸ್ತೆಯಲ್ಲಿರುವ ಹಾಸ್ಟೆಲ್ ಕಟ್ಟಡ ಶಿಥಿಲಗೊಂಡಿದ್ದು ಆಲ್ಲಿದ್ದ ವಿದ್ಯಾರ್ಥಿಗಳನ್ನು ಬೇರೆಡೆ ಕಳುಹಿಸಲಾಗಿದೆ. ಕಟ್ಟಡ ಕಟ್ಟಲು ಆಗದಿರುವವರಿಗೆ ಹಬ್ಬ ಆಚರಣೆ ಏಕೆ ಬೇಕು? ದೇಶ ಕಟ್ಟುವಲ್ಲಿ ದಲಿತರ ಪಾತ್ರ ಪ್ರಮುಖವಾಗಿದೆ. ಎಲ್ಲ ದಲಿತ ಸಂಘಟನೆಗಳು ಜಾಗೃತರಾಗಬೇಕು ಎಂದು ತಿಳಿಸಿದರು.

    ಮುಖಂಡ ಲಕ್ಷ್ಮಣ್ ಮಾತನಾಡಿ, ಹಬ್ಬ ಮಾಡಲು ಸಮಿತಿಯಲ್ಲಿ ದಲಿತರು ಬೇಡ. ವೋಟ್ ಬೇಡ ಅಂತಾನೂ ತೀರ್ಮಾನ ಮಾಡಿ. ಈ ಸಮಾಜಕ್ಕೆ ಯಾರು ಸ್ಪಂದಿಸುತ್ತಾರೋ ಅವರಿಗೆ ಮತ ಹಾಕೋಣ ಎಂದರು.

    ದಲಿತ ಸಂಘಟನೆಗಳ ಐಕ್ಯತಾ ಚಾಲನ ಸಮಿತಿ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್, ಎಸ್​ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್, ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೋಯಿದ್ದೀನ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಡಿ.ಜಿ.ಸಾಗರ್ ಬಣದ ಜಿಲ್ಲಾ ಸಂಚಾಲಕ ಬಾಲಕೃಷ್ಣ , ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts