More

    ಚಿಕ್ಕಮಗಳೂರಿನಲ್ಲಿ ವರ್ಷಧಾರೆ

    ಚಿಕ್ಕಮಗಳೂರು: ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಂಗಳವಾರವೂ ವರ್ಷಧಾರೆಯಾಗಿದೆ. ಮಲೆನಾಡಿನ ಕೆಲವೆಡೆ ವರುಣ ಅಬ್ಬರಿಸಿದ್ದರೆ, ಉಳಿದ ಕಡೆ ಸಾಧಾರಣ ಮಳೆ ಬಂದಿದೆ. ಚಿಕ್ಕಮಗಳೂರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಬಂತು. ಚರಂಡಿಗಳು ಉಕ್ಕಿ ರಸ್ತೆಯ ಮೇಲೆ ಹೊಳೆಯಂತೆ ನೀರು ಹರಿಯಿತು.

    ಬೀರೂರು ಹೋಬಳಿಯಲ್ಲಿ ಮಂಗಳವಾರ ಸಂಜೆ ಒಂದು ತಾಸಿಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಪಟ್ಟಣದ ಪ್ರಮುಖ ರಸ್ತೆಗಳೆಲ್ಲ ಜಲಾವೃತವಾದವು. ಚರಂಡಿಗಳಲ್ಲಿ ಕೊಳಚೆ ಕಟ್ಟಿಕೊಂಡ ಪರಿಣಾಮ ನೀರು ರಸ್ತೆ ಮೇಲೆ ಹರಿಯಿತು. ರಾಗಿ ಬಿತ್ತನೆ ಮಾಡಿರುವ ರೈತರಿಗೆ ಸಂತಸ ಮೂಡಿಸಿದರೆ, ಈರುಳ್ಳಿ ಬೆಳೆದಿರುವ ರೈತರಿಗೆ ಕಣ್ಣೀರು ತರಿಸಿದೆ.

    ಈರುಳ್ಳಿ ಬೆಳೆಯನ್ನು ಕಿತ್ತು ಹಾಕಿದ್ದು ಮಳೆಯಿಂದ ಕೊಳೆಯುವ ಸಾಧ್ಯತೆ ಇದೆ. ಅಡಕೆ ಮತ್ತು ತೆಂಗಿಗೆ ನೀರುಣಿಸಲು ಅನುಕೂಲವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts