More

    ಚಿಂಚೋಳಿ: ಸ್ವೀಪ್ ಸಮಿತಿಯಿಂದ ನೂತನ ಮತದಾರರ ನೊಂದಣಿ ಅಭಿಯಾನ

    ಚಿಂಚೋಳಿ: ಪ್ರಜೆಗಳಿಂದ ಪ್ರಜೆಗಳಿಗೊಸ್ಕರ ಪ್ರಜಾಪ್ರಭುತ್ವ ಭಾರತ ದೇಶವು ನಿಮ್ಮದಾಗಿದೆ ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.

    ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ತಾಲೂಕು ಸ್ವೀಪ್ ಸಮಿತಿ, ಪುರಸಭೆ, ಚುನಾವಣಾ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ನೂತನ ಮತದಾರರ ನೊಂದಣಿ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, 17 ವರ್ಷ ಮೇಲ್ಪಟ್ಟ ಯುವಕರು, ಯುವತಿಯರು ಮತದಾರರ ಪಟ್ಟಿಯಲ್ಲಿ ನೊಂದಣಿಗೆ ಮುಂದಾಗಬೇಕು. ನಮೂನೆ 6,7,8 ಅರ್ಜಿ ಅರಿತು ನೊಂದಣಿಗೆ ಮುಂದಾಗಬೇಕು ಎಂದರು.

    ತಾಲೂಕಿನಲ್ಲಿ 2.2 ಲಕ್ಷ ಮತದಾರರು ಹೊಂದಿದ್ದಾರೆ. ಮತದಾರರ ಪಟ್ಟಿ ಪರಿಶೀಲಿಸಿ, ಯುವಕರು, ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ ಭವ್ಯ ಭಾರತದ ಭವಿಷ್ಯ ರೂಪಿಸಲು ಮುಂದಾಗಬೇಕು. ಕಡ್ಡಾಯವಾಗಿ ಮತದಾನಕ್ಕೆ ಮುಂದಾಗಬೇಕು ಎಂದು ಮಾತನಾಡಿದರು.

    ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ರಾಠೋಡ ಮಾತನಾಡಿದ ಅವರು, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಪೀಳಿಗೆ ಸಜ್ಜಾಗಬೇಕು ಎಂದರು.ಮತದಾರರ ಜಾಗೃತಿ ಸಮಿತಿ, ಚುನಾವಣಾ ಪಾಠ ಶಾಲಾ ಸಮಿತಿ, ಚುನಾವಣಾ ಸಾಕ್ಷರತಾ ಸಮಿತಿಯು ತಾಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮತದಾನ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಮಾತನಾಡಿದರು.

    ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಸಾವರಕರ್, ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ ದುಗ್ಗನ್, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ್ ಧನ್ನಿ, ತಾ.ಪಂ.ಯೋಜನಾಧಿಕಾರಿ ಮಲ್ಲಿಕಾರ್ಜುನ, ಪ್ರೊ.ಮಲ್ಲಪ್ಪ ತೊಟನಳ್ಳಿ, ಚುನಾವಣಾ ಸಾಕ್ಷರತಾ ಕ್ಲಬ್ ಸಂಯೋಜಕ ಬಸವರಾಜಶ್ರೀ ಹಾಲು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.

    ಭವ್ಯ ಭಾರತಕ್ಕೆ ಯುವ ಪೀಳಿಗೆಯೇ ಭದ್ರ ಬುನಾದಿ, ಕಡ್ಡಾಯವಾಗಿ ಮತದಾನಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿಗೆ ಮುಂದಾಗಬೇಕು.

    • ಕಾಶಿನಾಥ್ ಧನ್ನಿ ಪುರಸಭೆ ಮುಖ್ಯಾಧಿಕಾರಿ ಚಿಂಚೋಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts