More

    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗುಂಪುಗಾರಿಕೆ : ಗುಂಪುಗಾರಿಕೆ ತೊಡೆದುಹಾಕಲು ಯತೀಂದ್ರಗೆ ಚುನಾವಣೆ ಉಸ್ತುವಾರಿ

    ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಾಣಿಸಿಕೊಂಡಿರುವ ಗುಂಪುಗಾರಿಕೆಯು ಲೋಕಸಭಾ ಚುನಾ ವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಮನಗಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯಗೆ ಚುನಾವಣಾ ಸಾರಥ್ಯ ವಹಿಸಿದ್ದಾರೆ.

    ಗುಂಪುಗಾರಿಕೆ ತೊಡೆದು ಹಾಕುವ ಸಲುವಾಗಿಯೇ ನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಪ್ರತ್ಯೇಕ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯ ಆರಂಭದಲ್ಲಿ ಯೇ ಅಸಮಾಧಾನ ಸ್ಫೋಟಗೊಂಡಿತು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಿ ಮಾವಿನಹಳ್ಳಿ ಸಿದ್ದೇಗೌಡ ಸ್ಪರ್ಧಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಸಭೆಗೆ ಮಾವಿನಹಳ್ಳಿ ಸಿದ್ದೇಗೌಡ ಸಹ ಆಗಮಸಿದ್ದರು. ಮಾನವಿನಹಳ್ಳಿ ಸಿದ್ದೇಗೌಡರಿಗೆ ಸ್ವಾಗತ ಕೋರುವ ಸಂದರ್ಭ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದರು. ‘ಕಳೆದ ಬಾರಿ ಮಾವಿನಹಳ್ಳಿ ಸಿದ್ದೇಗೌಡರಿಂದ ಕಾಂಗ್ರೆಸ್‌ಗೆ ಸೋಲುಂಟಾಗಿದೆ. ಸೋತ ನಂತರ ಪಕ್ಷ ಸಂಘಟನೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ವೇದಿಕೆಯಲ್ಲಿ ಕೂರಿಸಬಾರದು’ ಎಂದು ಕಾರ್ಯಕರ್ತರು ಒತ್ತಾಯಿಸಿದರು. ಇದರಿಂದ ಸ್ವಲ್ಪ ಹೊತ್ತು ಗದ್ದಲದ ವಾತಾವರಣ ನಿರ್ಮಾಣಗೊ ಂಡಿತು.

    ಈ ಸಂದರ್ಭ ಕಾರ್ಯಕರ್ತರನ್ನು ಸಮಾಧಾನ ಪಡಿಸುವ ಕಾರ್ಯವನ್ನು ಸಿದ್ದರಾಮಯ್ಯ ಮಾಡಿದರು. ಇಲ್ಲಿ ವೈಯಕ್ತಿಕ ವಿಚಾರ ಹೇಳಲು ಅವಕಾಶ ಇಲ್ಲ, ವೈಯಕ್ತಿಕ ಹೇಳಿಕೆ ನೀಡಲು ಬಂದಿರುವವರು ಹೊರಗೆ ಹೋಗಿ ಎಂದು ಗದರಿದ ನಂತರ ಸಭೆ ಶಾಂತವಾ ಯಿತು. ಈ ಸಂದರ್ಭ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಬೇಕು ಎಂದು ಕಾರ್ಯಕರ್ತರು ಪಟ್ಟುಹಿಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts