More

    ಚರ್ಮರೋಗಕ್ಕೆ ಶೀಘ್ರ ಚಿಕಿತ್ಸೆ ಪಡೆಯಲು ಸಲಹೆ

    ಹುಬ್ಬಳ್ಳಿ: ಭಾರತೀಯ ಚರ್ಮರೋಗ ಹಾಗೂ ಲೈಂಗಿಕ ರೋಗ ತಜ್ಞರು ಮತ್ತು ಕುಷ್ಟರೋಗ ತಜ್ಞರ ಸಂಘ ಕರ್ನಾಟಕ ಶಾಖೆ ವತಿಯಿಂದ ಆಯೋಜಿಸಿರುವ ಚರ್ಮರಥ ಜಾಗೃತಿ ಅಭಿಯಾನ ಹುಬ್ಬಳ್ಳಿಯ ಕಿಮ್ಸ್​ಗೆ ಗುರುವಾರ ಆಗಮಿಸಿತು.

    ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಹಸಿರು ನಿಶಾನೆ ತೋರಿಸಿ ಮಾತನಾಡಿ, ಚರ್ಮರೋಗದ ಬಗ್ಗೆ ಇರುವ ಮೂಢ ನಂಬಿಕೆಗಳನ್ನು ಕೈಬಿಡಬೇಕು. ನಿಮ್ಮ ನಂಬಿಕೆ ಹೊರತಾಗಿಯೂ ಚರ್ಮರೋಗ ತಜ್ಞರ ಬಳಿ ಬಂದು ಚಿಕಿತ್ಸೆ ಪಡೆಯಬೇಕು. ಈಗೀಗ ಫಂಗಸ್ ಎಂಬ ಚರ್ಮರೋಗ ಎಲ್ಲೆಡೆ ಹರಡುತ್ತಿದೆ. ಮೂಲದಲ್ಲಿಯೇ ಚಿಕಿತ್ಸೆ ಪಡೆಯದೇ ಹೋದರೆ ಮೈತುಂಬ ಹರಡಿ, ವ್ಯಕ್ತಿ ಗುರುತು ಸಿಗದಂತೆ ಮಾಡಿಬಿಡುತ್ತದೆ. ಇದಷ್ಟೇ ಅಲ್ಲ ಯಾವುದೇ ಕಾಯಿಲೆ ಇರಲಿ, ತಜ್ಞರ ಸಲಹೆ, ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎಂದರು.

    ನಂತರ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಂದ ಜಾಗೃತಿ ಬೀದಿ ನಾಟಕ ಪ್ರದರ್ಶನ ನಡೆಯಿತು.

    ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಐಎಡಿವಿಎಲ್ ಕರ್ನಾಟಕ ಅಧ್ಯಕ್ಷೆ (ಚುನಾಯಿತ) ಡಾ. ಮಿತಾಕ್ಷರಿ ಹೂಗಾರ, ಜಂಟಿ ಕಾರ್ಯದರ್ಶಿ ಡಾ. ಮೋಹನ ಶಿಂಧ್ರೆ, ಡಾ.ಕೆ.ಎಫ್. ಕಮ್ಮಾರ, ಡಾ. ಅನ್ನಪೂರ್ಣ ಸಾಲಿ, ಡಾ. ಸುನೀಲ ಗೋಖಲೆ, ಡಾ. ಚಂದ್ರಮೋಹನ, ಡಾ. ಚನ್ನಬಸಪ್ಪ ಮೆಂಡಗುದ್ಲಿ, ಡಾ. ಯಾಶ್ಮಿನ್, ಹು-ಧಾ ಚರ್ಮರೋಗ ತಜ್ಞರ ಸಂಘದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts