More

    ಚರ್ಮಗಂಟು ರೋಗ: ತಾಳಗುಪ್ಪದಲ್ಲಿ 6 ಜಾನುವಾರು ಸಾವು

    ತಾಳಗುಪ್ಪ: ಹೋಬಳಿಯಾದ್ಯಂತ ದನಕರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು ಈಗಾಗಲೇ, 185 ದನಕರು ರೋಗಪೀಡಿತವಾಗಿವೆ. 6 ಮೃತಪಟ್ಟಿವೆ.
    ಚರ್ಮಗಂಟು ರೋಗಗ್ರಸ್ತ ದನಗಳಲ್ಲಿ ಅತಿಯಾದ ಜ್ವರ , ಮೂಗು, ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವುದು, ಮೇವನ್ನು ತಿನ್ನದಿರುವುದು, ದುಗ್ಧರಸಗ್ರಂಥಿಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಸೋಂಕು ತಗಲಿದ ವಾರದ ನಂತರ ಚರ್ಮದಲ್ಲಿ 3-5 ಸೆಂಟಿ ಮೀಟರ್‌ನಷ್ಟು ಅಗಲವಿರುವ ಗಂಟು ಕಾಣಿಸಿಕೊಂಡು ಒಡೆದು ಗಾಯವಾಗುತ್ತದೆ. ನೊಣಗಳು ಕೂರುವುದರಿಂದ ಹುಣ್ಣಾಗುತ್ತದೆ. ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಜಾನುವಾರುಗಳು ಸಾವಿಗೀಡಾಗುತ್ತದೆ.
    ಸಾಗರ ತಾಲೂಕು ಪಶು ವೈದ್ಯಕೀಯ ಇಲಾಖೆಯ ಮಾಹಿತಿಯಂತೆ, ತಾಳಗುಪ್ಪ ಹೋಬಳಿಯಲ್ಲಿ 20,167 ಜಾನುವಾರಗಳಿದ್ದು 16 ಗ್ರಾಮಗಳಲ್ಲಿ ರೋಗ ಸಂಚಿತವಾಗಿದೆ. 3,900 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ತಾಳಗುಪ್ಪ, ತಲವಾಟ, ಮರತ್ತೂರು ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ಒಟ್ಟು 6,134 ಜಾನುವಾರುಗಳಿದ್ದು ತಾಳಗುಪ್ಪ ಊರೊಂದರಲ್ಲಿಯೇ 75 ಜಾನುವಾರುಗಳು ರೋಗ ಪೀಡಿತವಾಗಿವೆ. 40 ಜಾನುವಾರುಗಳು ಚಿಕಿತ್ಸೆಯಿಂದ ಗುಣ ಹೊಂದಿವೆ. 800 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.
    ಪಶು ಇಲಾಖೆಯ ಸಿಬ್ಬಂದಿ ಹಗಲು ರಾತ್ರಿ ಕಾಳಜಿ ವಹಿಸುತ್ತಿದ್ದಾರೆ, ಚರ್ಮಗಂಟು ರೋಗಕ್ಕೆ ಔಷದ ಹಾಗೂ ಲಸಿಕೆ ಸಾಕಷ್ಟು ಲಭ್ಯವಿದೆ. ರೋಗನಿರೋಧಕ ಶಕ್ತಿ ಇರುವ ದನಗಳು ಚೇತರಿಸಿಕೊಳ್ಳುತ್ತಿವೆ. ದುರ್ಬಲ ಹಸುಗಳು ಸಾವು ಕಾಣುತ್ತಿದೆ ಎಂದು ಸಹಾಯಕ ನಿರ್ದೇಶಕಿ ಡಾ.ಉಮಾದೇವಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts