More

    ಚರಿತ್ರೆಯಲ್ಲಿ ಟಿಪ್ಪು ಬಗ್ಗೆ ಸತ್ಯ ಮರೆಮಾಚಲಾಗಿದೆ

    ರಾಯಚೂರು: ಟಿಪ್ಪುವಿನ ಕುರಿತಾದ ಹಲವು ಸತ್ಯಗಳನ್ನು ಚರಿತ್ರೆಯಲ್ಲಿ ಮರೆಮಾಚುವ ಮೂಲಕ ಆತನೊಬ್ಬ ಸ್ವಾತಂತ್ರೃಯೋಧ, ವೀರ ಎಂದು ಸುಳ್ಳಿನಿಂದ ಕೂಡಿದ ಪಠ್ಯವನ್ನು ಮಕ್ಕಳಿಗೆ ಬೋಧಿಸಲಾಗುತ್ತಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

    ಮತ ಬ್ಯಾಂಕ್‌ಗಾಗಿ ಹಾಗೂ ಬುದ್ಧಿ ಜೀವಿಗಳು ಕನ್ನಡವನ್ನು ಕೊಂದ ಟಿಪ್ಪು ಸುಲ್ತಾನ್‌ನನ್ನು ಕನ್ನಡ ಪ್ರೇಮಿ ಎಂದು ಬಣ್ಣಿಸ ಆತನ ಕರಾಳ ಮುಖದ ಚರಿತ್ರೆಯನ್ನು ಮುಚ್ಚಿಟ್ಟಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಟಿಪ್ಪುವಿನ ಬಗ್ಗೆ ನೈಜತೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಟಿಪ್ಪುವಿನ ನಿಜ ಕನಸುಗಳ ಹೆಸರಿನ ನಾಟಕವನ್ನು ರಚನೆ ಮಾಡಿ, ರಂಗಾಯಣದ ಮೂಲಕ ಪ್ರದರ್ಶನ ಏರ್ಪಡಿಸುವ ಮೂಲಕ ಜನರಿಗೆ ಆತನ ನಿಜ ಸ್ವರೂಪವನ್ನು ತೋರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

    ಟಿಪ್ಪುವಿನ ನಿಜ ಕನಸು ನಾಟಕ ಹಸ್ತಪ್ರತಿ ಹೊರಬರುವ ಮುಂಚೆಯೇ ಹಸ್ತಪ್ರತಿ ಪ್ರಕಟಿಸದಂತೆ ಕೆಲವರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ನ್ಯಾಯಾಲಯಕ್ಕೆ ನಾಟಕದಲ್ಲಿನ ಪ್ರಸ್ತಾಪಿಸಲಾದ ವಿಷಯಗಳಿಗೆ ಸೂಕ್ತ ದಾಖಲೆಗಳನ್ನು ನೀಡಲಾಗಿದೆ. ಆದರೆ ಕೇಸ್ ದಾಖಲಿಸಿದವರು ದೂರನ್ನು ವಾಪಸ್ ಪಡೆದಿದ್ದಾರೆ.

    ಒಟ್ಟು ಮೂರೂವರೆ ಗಂಟೆಗಳ ನಾಟಕವನ್ನು ಮೈಸೂರು ರಂಗಾಯಣದಿಂದ ರಾಜ್ಯದ ವಿವಿಧೆಡೆ ಪ್ರದರ್ಶನ ಮಾಡಲಾಗುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಗರದ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಫೆ.12ರಂದು ಸಂಜೆ 6ಕ್ಕೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು. ನಾಟಪ ಪ್ರದರ್ಶನ ಸಮಿತಿ ಪದಾಧಿಕಾರಿಗಳಾದ ಬಂಡೇಶ ವಲ್ಕಂದಿನ್ನಿ, ವಿಜಯಭಾಸ್ಕರ ಇಟಗಿ, ವಾಸುದೇವ, ಬಸವರಾಜ, ವಿಷ್ಣುವರ್ಧನರೆಡ್ಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts