More

    ಚರಂಡಿ ಸಮಸ್ಯೆಗೆ ಎರಡೇ ತಿಂಗಳಲ್ಲಿ ಮುಕ್ತಿ

    ತಲಕಾಡು: ಮಳೆಗಾಲದಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿದ್ದ ಪಟ್ಟಣದ ಮುಖ್ಯ ಸರ್ಕಲ್‌ನ ನಿವಾಸಿಗಳು ಹಾಗೂ ವಾಣಿಜ್ಯ ಮಳಿಗೆದಾರರ ಸಮಸ್ಯೆಗೆ ಶಾಸಕ ಎಂ.ಅಶ್ವಿನ್‌ಕುಮಾರ್ ಸ್ಪಂದಿಸಿದ್ದಾರೆ.


    2009ರ ಪಂಚಲಿಂಗದರ್ಶನದ ಸಂದಭ ಗ್ರಾಮದ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸುವ ವೇಳೆ ಮುಖ್ಯಸರ್ಕಲ್‌ನಿಂದ ಸೆಸ್ಕ್ ಸರ್ಕಲ್‌ವರೆಗೆ ರಸ್ತೆಯ ಒಂದು ಬದಿಗೆ ಮಾತ್ರ ಕಾಂಕ್ರೀಟ್ ಚರಂಡಿ ನಿರ್ಮಿಸಲಾಗಿತ್ತು. ಮಳೆ ಬಂದಾಗ ಮಂಟಪದ ಕೆರೆ ಕೋಡಿ ಬಿದ್ದು ಮುಖ್ಯ ಸರ್ಕಲ್ ದಾಟಿ ಮಾಧವಮಂತ್ರಿ ನಾಲೆಗೆ ಸೇರುವ ಮತ್ತೊಂದು ಬದಿಯ ಚರಂಡಿ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಈ ನಡುವೆ ಎರಡು ತಿಂಗಳ ಹಿಂದೆ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿತ್ತು. ಬಳಿಕ ತಲಕಾಡಿನಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕಂದಾಯ ಅದಾಲತ್‌ನಲ್ಲಿ ಶಾಸಕ ಎಂ.ಅಶ್ವಿನ್ ಕುಮಾರ್‌ಗೆ ಈ ಸಂಬಂಧ ಮನವಿ ಮಾಡಲಾಗಿ, ಶಾಸಕರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ನಂತರ ತ್ವರಿತವಾಗಿ ತಲಕಾಡು ಮುಖ್ಯಸರ್ಕಲ್ ಬಳಿಯಿಂದ ನಾಡಕಚೇರಿವರೆಗೆ ಕಾಂಕ್ರೀಟ್ ಚರಂಡಿ ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
    ಶಾಸಕರ ಸ್ಪಂದನೆ ಫಲವಾಗಿ ಚರಂಡಿ ಸಮಸ್ಯೆ ಎರಡೇ ತಿಂಗಳಲ್ಲಿ ಬಗೆಹರಿದಂತಾಗಿದೆ. ಇಲ್ಲಿನ ಚರಂಡಿ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಒಂದೆರಡು ದಿನದಲ್ಲಿ ಮುಕ್ತಾಯವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts