More

    ಚರಂಡಿ ಮರುನಿರ್ಮಾಣ ಮಾಡಿ

    ಸೋಮವಾರಪೇಟೆ: ಹೊಸತೋಟದಿಂದ ಮಾದಾಪುರದವರೆಗೆ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿ ಕಳಪೆಯಾಗಿದ್ದು, ಅವೈಜ್ಞಾನಿಕವಾಗಿದೆ ಎಂಬ ರೈತ ಸಂಘ ಮತ್ತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಗುಣ ನಿಯಂತ್ರಣ ಅಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿ ಗುತ್ತಿಗೆದಾರರಿಗೆ ಮರುನಿರ್ಮಾಣ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.


    4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 11 ಮೋರಿ ನಿರ್ಮಾಣ ಹಾಗೂ 4 ಕಿ.ಮೀ. ಉದ್ದದ ಚರಂಡಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಮೋರಿ ನಿರ್ಮಾಣದ ಹಂತದಲ್ಲಿಯೇ ಬಿರುಕು ಬಿಟ್ಟಿದೆ. ಮಳೆ ನೀರು ಹರಿಯುವ ಕಡೆ ಚರಂಡಿ ಮತ್ತು ಮೋರಿ ವ್ಯವಸ್ಥೆ ಮಾಡದೆ ಸರಾಗವಾಗಿ ನೀರು ಹರಿಯುವ ಜಾಗದಲ್ಲಿಯೇ ನಿರ್ಮಾಣ ಮಾಡಲಾಗಿತ್ತು. ಕಾಮಗಾರಿ ಆರಂಭದ ಮೊದಲಿಗೆ ಕಾಮಗಾರಿಯ ವೆಚ್ಚ ಮತ್ತು ವಿವರಗಳನ್ನು ಫಲಕದಲ್ಲಿ ನಮೂದಿಸಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಅಳವಡಿಸಬೇಕಾಗಿತ್ತು. ಆದರೆ ಈ ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ರೈತ ಮುಖಂಡರಾದ ಕೆ.ಲಕ್ಷ್ಮಣ್, ಮಚ್ಚಂಡ ಅಶೋಕ್, ಸುಬ್ಬಯ್ಯ ಅವರು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್‌ಗೆ ದೂರು ನೀಡಿದ್ದರು.


    ಗುಣ ನಿಯಂತ್ರಣಾಧಿಕಾರಿ ಧನಂಜಯ್ ತಂಡ ಕುಂಬೂರು ಜಂಕ್ಷನ್ ಬಳಿ ನಿರ್ಮಾಣಗೊಳ್ಳುತ್ತಿರುವ ಮೋರಿಯನ್ನು ಪರೀಕ್ಷಿಸಿ ಬಿರುಕು ಬಿಟ್ಟ ಹಿನ್ನೆಲೆ ಹಾಗೂ ನಿಗದಿತ ಪ್ರಮಾಣದಲ್ಲಿ ಸ್ಟೀಲ್ ರಾಡ್ ಅಳವಡಿಸದೆ ಇದ್ದದರಿಂದ ಅದನ್ನು ಒಡೆದು ಹಾಕುವಂತೆ ಗುತ್ತಿಗೆದಾರರಿಗೆ ಸೂಚಿಸಿ, ಮರು ಕಾಮಗಾರಿ ಕೈಗೊಳ್ಳುವಂತೆ ಆದೇಶ ನೀಡಿದರು.


    ಆರ್‌ಟಿಐ ಕಾರ್ಯಕರ್ತ ಬಿ.ಪಿ. ಅನಿಲ್, ರೈತ ಮುಖಂಡರಾದ ಮಚ್ಚಂಡ ಅಶೋಕ್, ಸುಬ್ಬಯ್ಯ, ಚರಣ್, ಯಡೂರು ಲತೀಶ್, ಕೆ.ಲಕ್ಷ್ಮಣ್, ಕೆ.ಪಿ.ದಿನೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts