More

    ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಲಿ

    ನೇಸರಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವಂತಾಗಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

    ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಹೆಚ್ಚುವರಿ ಕೊಠಡಿ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರವು ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಮುಖಾಂತರ ಶಿಕ್ಷಣಕ್ಕೆ ಹೊಸ ಮೆರುಗು ನೀಡಲಾಗುತ್ತಿದೆ ಎಂದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಹಾಂತೇಶ ದೊಡಗೌಡರ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದರು.

    ಉಪವಿಭಾಗಾಧಿಕಾರಿ ಶ್ರೀಧರ ಬಗಲಿ, ತಹಸೀಲ್ದಾರ್ ಬಸವರಾಜ ನಾಗರಾಳ, ತಾಪಂ ಎಒ ಸುಭಾಷ ಸಂಪಗಾವಿ, ಬಿಜೆಪಿ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಬಿ.ಎಫ್.ಕೊಳದೂರ, ಸಿಡಿಸಿ ಉಪಾಧ್ಯಕ್ಷ ಡಾ.ಚನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ರಾಜಶೇಖರ ಎತ್ತಿನಮನಿ, ಧಾರವಾಡ ಪ್ರಾದೇಶಿಕ ಜಂಟಿ ನಿರ್ದೇಶಕ ಹನುಮಂತರಾಯ ವೈ.ಎಸ್, ಉಪನಿರ್ದೆಶಕ ಮಂಜುನಾಥ, ಶಂಕರ ತಿಗಡಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರಗೌಡ ಪಾಟೀಲ, ಗುತ್ತಿಗೆದಾರ ನಾಗರಾಜ ಪಾಟೀಲ, ಗ್ರಾಪಂ ಅಧ್ಯಕ್ಷೆ ಸುಶೀಲಾ ತುಬಾಕಿ, ನಿಂಗಪ್ಪ ತಳವಾರ, ಪ್ರಕಾಶ ತೋಟಗಿ, ಮಲ್ಲಿಕಾರ್ಜುನ ತುಬಾಕಿ, ಪ್ರಾಚಾರ್ಯ ಪ್ರೊ.ಎಂ.ವೈ.ಹಿತಾರಗೌಡರ, ಮಲ್ಲೇಶಪ್ಪ ಮಾಳಣ್ಣವರ, ಸೋಮನಗೌಡ ಪಾಟೀಲ,ಸೊಮಪ್ಪ ಸೋಮಣ್ಣವರ, ಸೋಮಶೇಖರ ಮಾಳಣ್ಣವರ, ಸಲೀಶಹಾ ನದಾಫ, ಪ್ರೊ.ಶಿವಾನಂದ ಹಿರೇಮಠ, ಪ್ರೊ.ಮಹದೇವ ಕೊಪ್ಪದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts