More

    ಗ್ರಾಮೀಣ ಜನತೆ ಸ್ವಚ್ಚತೆಗೆ ಆದ್ಯತೆ ಕೊಡಿ


    ಯಾದಗಿರಿ: ಕಳೆದ ಚುನಾವಣೆಯಲ್ಲಿ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ತಿಳಿಸಿದರು.

    ಸೋಮವಾರ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 26 ಲಕ್ಷ ರೂ.ವೆಚ್ಛದಲ್ಲಿ ಸಿಸಿ ರಸ್ತೆ, ಚರಂಡಿ ನಿಮರ್ಾಣದ ಶಂಕುಸ್ಥಾಪನೆ ಹಾಗೂ 42 ಲಕ್ಷ ರೂ.ವೆಚ್ಛದಲ್ಲಿ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳುವ ಮುಖ್ಯರಸ್ತೆ ಉದ್ಘಾಟಿಸಿ ಮಾತನಾಡಿ, ಕಳೆದ 4 ವರ್ಷದಲ್ಲಿ ಮತಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಹಾಗೂ ಸಾರ್ವಜನಿಕರ ಬೇಡಿಕೆಯಂತೆ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಮೊದಲಿನಿಂದಲೂ ರಾಮಸಮುದ್ರ ಹೋಬಳಿ ಜನತೆ ನಮ್ಮನ್ನು ಪ್ರತಿ ಚುನಾವಣೆಯಲ್ಲಿ ಬೆಂಬಲಿಸುತ್ತ ಬಂದಿದ್ದಾರೆ. ನಮಗೂ ಸಹ ನಿಮ್ಮ ಗ್ರಾಮಗಳ ಮೇಲೆ ವಿಶೇಷ ಕಾಳಜಿ ಇದೆ. ಮುಂಡರಗಿ ಗ್ರಾಪಂ ವ್ಯಾಪ್ತಿಯಲ್ಲಿ 24 ಕೋಟಿ ರೂ. ವೆಚ್ಛದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

    ಗ್ರಾಮದ ದೇವಸ್ಥಾನಕ್ಕೆ ರಸ್ತೆ ನಿಮರ್ಾಣ ಮಾಡಿರವುದರಿಂದ ಇಲ್ಲಿರುವ 4-5 ದೇವಸ್ಥಾನಗಳಿಗೆ ಜನರು ಬರಲು ಅನುಕೂಲವಾಗಿದೆ. ಜೆಜೆಎಂ ಯೋಜನೆಯಡಿ ಮನೆಮನೆಗೆ ನೀರು ಸಂಪಕರ್ಿಸುವ ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಇದರಿಂದ ಪ್ರತಿಯೊಂದು ಕುಟುಂಬಕ್ಕೆ ಶುದ್ಧ ಕುಡಿಯುವ ನೀರು ಲಭಿಸುತ್ತದೆ. ಕಾರಣ ಜನರು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

    ನಿಮ್ಮ ಯಾವುದೇ ಸಮಸ್ಯೆ ಇರಲಿ ನೇರವಾಗಿ ನನಗೆ ಇಲ್ಲವೇ ನಮ್ಮ ಸಹೋದರರಿಗೆ ತಿಳಿಸಿದರೆ ಕೂಡಲೇ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts