More

    ಗ್ರಾಮೀಣರ ಸಮಸ್ಯೆಗೆ ಸ್ಥಳದಲ್ಲೇ ಮುಕ್ತಿ

    ನೇಸರಗಿ: ಗ್ರಾಮೀಣ ಜನರ ಸಮಸ್ಯೆ ಆಲಿಸಲು ತಹಸೀಲ್ದಾರ್ ನಡೆ ಹಳ್ಳಿ ಕಡೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

    ಸಮೀಪದ ಮಲ್ಲಾಪುರ ಕೆ.ಎನ್. ಗ್ರಾಮದ ಗಾಳೇಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ತಹಸೀಲ್ದಾರ್ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಾಕಿಕೊಂಡು ಗ್ರಾಮದಲ್ಲೇ ಗ್ರಾಮೀಣರ ಸಮಸ್ಯೆಗಳಿಗೆ ಮುಕ್ತಿ ನೀಡುತ್ತೀದೆ ಎಂದರು.

    ತಹಸೀಲ್ದಾರ್ ಬಸವರಾಜ ನಾಗರಾಳ ಮಾತನಾಡಿ, ಗ್ರಾಮದ ಮೂಲ ಸೌಕರ್ಯಗಳ ಕೊರತೆ, ಸಾರ್ವಜನಿಕ ಸಮಸ್ಯೆ ಹಾಗೂ ವೈಯಕ್ತಿಕ ಸೌಲಭ್ಯಗಳ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲಾಗುವುದು ಎಂದರು.

    ತಾಲೂಕು ಆರೋಗ್ಯಾಕಾರಿ ಡಾ.ಎಸ್.ಎಸ್.ಸಿದ್ದಣ್ಣವರ ಮಾತನಾಡಿ, ಗ್ರಾಮದಲ್ಲಿ ಆರೋಗ್ಯ ಶಿಬಿರ ನಡೆಸಲಾಗುತ್ತಿದ್ದು, ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದರು.

    ವಿವಿಧ ಇಲಾಖೆ ಅಕಾರಿಗಳೊಂದಿಗೆ ತಹಸೀಲ್ದಾರ್ ಬಸವರಾಜ ನಾಗರಾಳ ಜನರ ಸಮಸ್ಯೆಗಳನ್ನು ಆಲಿಸಿದರು. ಮನೆ ಬಿದ್ದಿರುವುದು, ಮಾಸಾಶನ, ಹಕ್ಕುಪತ್ರ ಬದಲಾವಣೆ ಮುಂತಾದವುಗಳ ಬಗ್ಗೆ ತಿಳಿಸಿದರು. ಕಂದಾಯ ಇಲಾಖೆಯಿಂದ 16 ಜನರಿಗೆ ಮಾಸಾಶನ ಆದೇಶ ಪತ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 10 ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಪ್ರಮಾಣಪತ್ರ ವಿತರಿಸಲಾಯಿತು. ಮಕ್ಕಳ ಹುಟ್ಟು ಹಬ್ಬ, ಪೋಷಣ ಅಭಿಯಾನ ಜರುಗಿತು.

    ನೇಸರಗಿ-ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಬಿ.ಎಫ್.ಕೊಳದೂರ, ಬೈಲಹೊಂಗಲ ತಹಸೀಲ್ದಾರ್ ಬಸವರಾಜ ನಾಗರಾಳ, ತಾಪಂ ಇಒ ಸುಭಾಷ ಸಂಪಗಾವಿ, ಬಿಇಒ ಎ.ಬಿ.ಪ್ಯಾಟಿ, ತಾಲೂಕು ಆರೋಗ್ಯಾಕಾರಿ ಡಾ.ಸಂಜಯ ಸಿದ್ಧಣ್ಣವರ, ವಲಯ ಅರಣ್ಯಾಕಾರಿ ಬಸವರಾಜ ವಾಳದ, ಡಾ.ಸುದರ್ಶನ ಗಡಾದ, ತಾಲೂಕು ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಎಇಇ ಎಸ್.ಕೆ.ಮೂಗಸಜ್ಜಿ, ಸಿಡಿಪಿಒ ಕಮಲಾ ಬಸರಗಿ, ವಾಸಂತಿ ಹಿರೇಮಠ, ಶಾಂತಾ ಅರಬಳ್ಳಿ, ಬಿ.ಎಸ್.ತಲ್ಲೂರ, ಗ್ರಾಪಂ ಅಧ್ಯಕ್ಷ ಅಶೋಕ ವಕ್ಕುಂದ, ಪಿಡಿಒ ಬಸನಗೌಡ ಪಾಟೀಲ, ರಾಜು ಬುಗಡಿಗಟ್ಟಿ, ನಾಗರಾಜ ತಲ್ಲೂರ, ಉಪತಹಸೀಲ್ದಾರ್ ಬಸವರಾಜ ಹುಬ್ಬಳ್ಳಿ, ಕಂದಾಯ ನಿರೀಕ್ಷಕ ಎಸ್.ಬಿ.ಬೋರಗಲ್ಲ, ಗ್ರಾಮಲೆಕ್ಕಾಕಾರಿ ಜಗದೀಶ ಗೌಡರ, ರಾಮಚಂದ್ರ ನಾಯ್ಕ, ಬಸವರಾಜ ಕೆರಕನವರ, ಡಾ.ಅರೀಫ್ ಜಮಾದಾರ್, ನವನಿರ್ಮಾಣ ಪಡೆ ಅಧ್ಯಕ್ಷ ಮಂಜುನಾಥ ಉಳವಿ, ಸೋಮಶೇಖರ ಮಾಳಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts