More

    ಗ್ರಾಪಂಗಳಲ್ಲಿ ನೆಟ್ಟಗಿಲ್ಲ ಇಂಟರ್​ನೆಟ್

    ಡಂಬಳ: ಹೋಬಳಿ ವ್ಯಾಪ್ತಿಯ ಕೆಲ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ಇಂಟರ್​ನೆಟ್ ಸಮಸ್ಯೆ ಉಂಟಾಗಿದ್ದು ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

    ಹೋಬಳಿ ವ್ಯಾಪ್ತಿಯ 11 ಗ್ರಾಮ ಪಂಚಾಯಿತಿಗಳ ಪೈಕಿ ಕದಾಂಪುರ ಗ್ರಾಪಂ, ಜಂತ್ಲಿ ಶಿರೂರ, ಶಿಂಗಟಾಲಕೇರಿ ತಾಂಡ, ಪೇಠಾಲೂರ, ಮೇವುಂಡಿ, ಹಳ್ಳಿಕೇರಿ ಗ್ರಾಮ ಪಂಚಾಯಿತಿಗಳಲ್ಲಿ ತಾಂತ್ರಿಕ ದೋಷದಿಂದ ಇಂಟರ್​ನೆಟ್ ಸಮಸ್ಯೆ ಉಂಟಾಗಿದೆ. ಅಲ್ಲದೆ, ಡಂಬಳ ಗ್ರಾಮ ಪಂಚಾಯಿತಿಯಲ್ಲಿ ಬಿಎಸ್​ಎನ್​ಎಲ್ ಬಿಲ್ ಪಾವತಿಸದ ಕಾರಣ ಕಂಪನಿಯವರು ನೆಟ್​ವರ್ಕ್ ಸ್ಥಗಿತಗೊಳಿಸಿದ್ದಾರೆ.

    ನೆಟ್ ಸಮಸ್ಯೆಯಿಂದಾಗಿ ಆಸ್ತಿ ನೋಂದಣಿ, ಕ್ರಿಯಾ ಯೋಜನೆ ತಯಾರಿಸುವುದು, ರೇಷನ್ ಕಾರ್ಡ್ ವಿತರಣೆ, ಉದೋಗ್ಯ ಖಾತ್ರಿ ವೇತನ ಪಾವತಿ, ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ, ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್​ಕಾರ್ಡ್ ಮಾಡಿಸುವುದು ಸೇರಿ ವಿವಿಧ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗಿದೆ. ಸಾರ್ವಜನಿಕರ ಅನುಕೊಲಕ್ಕಾಗಿ ಕಂಪ್ಯೂಟರ್ ಆಪರೇಟರ್​ಗಳು ತಮ್ಮ ಮೊಬೈಲ್​ಗಳ ಹಾಟ್​ಸ್ಪಾಟ್ ಮೂಲಕ ಇಂಟರ್​ನೆಟ್ ಕನೆಕ್ಟ್ ಮಾಡಿಕೊಂಡು ಕೆಲಸ ಕಾರ್ಯ ಮಾಡಿಕೊಡುತ್ತಿದ್ದಾರೆ. ಈ ಮೂಲಕ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ. ಮೊಬೈಲ್​ಫೋನ್​ನಲ್ಲಿನ ಇಂಟರ್​ನೆಟ್ ಡಾಟಾ ಖಾಲಿಯಾದರೆ ಕೆಲಸ ಅರ್ಧಕ್ಕೆ ಸ್ಥಗಿತಗೊಂಡು ಮುಂದೂಡಲಾಗುತ್ತದೆ.

    ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ತಲುಪಿಸಲು ಇಂಟರ್​ನೆಟ್ ಸೇವೆ ಇಲ್ಲದೇ ಮೊಬೈಲ್ ಮೂಲಕ ಕನೆಕ್ಟ್ ಮಾಡಿ ಕೆಲಸ ಮಾಡುವಂತಾಗಿದೆ. ಮೊಬೈಲ್ ಕರೆಗಳು ಬಂದ ಸಂದರ್ಭದಲ್ಲಿ ಕೆಲಸ ನಿಲ್ಲುತ್ತದೆ. ನಮ್ಮ ಮೊಬೈಲ್​ನಲ್ಲಿ 1 ಜಿಬಿ, 2 ಜಿಬಿ ನೆಟ್ ಇರುವವರೆಗೆ ಕಾರ್ಯನಿರ್ವಹಿಸುತ್ತೇವೆ.
    | ಹೆಸರು ಹೇಳಲಿಚ್ಛಿಸದ ಕಂಪ್ಯೂಟರ್ ಆಪರೇಟರ್

    ಮುಂಡರಗಿ ತಾಲೂಕಿನ ಕೆಲ ಗ್ರಾಮ ಪಂಚಾಯಿತಿಯವರು ಬಿಎಸ್​ಎನ್​ಎಲ್ ಬಿಲ್ ಪಾವತಿಸದ ಕಾರಣ ಕಂಪನಿಯವರು ಇಂಟರ್​ನೆಟ್ ಬಂದ್ ಮಾಡಿದ್ದಾರೆ. ಇನ್ನುಳಿದ ಗ್ರಾಪಂ ಕಚೇರಿಗಳಲ್ಲಿ ತಾಂತ್ರಿಕ ದೋಷದಿಂದ ಇಂಟರ್​ನೆಟ್ ಸಮಸ್ಯೆಯಾಗಿದೆ. ತಕ್ಷಣ ಬಾಕಿ ಇರುವ ಬಿಲ್ ಪಾವತಿಸಿ, ತಾಂತ್ರಿಕ ಸಮಸ್ಯೆ ಬಗೆಹರಿಸಲಾಗ್ತುತದೆ.
    | ಎಸ್.ಎಸ್. ಕಲ್ಮನಿ, ಮುಂಡರಗಿ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts