More

    ಗ್ರಂಥಾಲಯಕ್ಕೆ ವಾಯುದಳ ಅಧಿಕಾರಿಗಳ ಭೇಟಿ

    ಬೆಳಗಾವಿ: ಸಾಂಬ್ರಾದಲ್ಲಿರುವ ಭಾರತೀಯ ವಾಯುದಳ, ಏರ್​ಮನ್​ ತರಬೇತಿ ಶಾಲೆಯ ಅಧಿಕಾರಿಗಳು ಮತ್ತು ಪ್ರಶಿಣಾರ್ಥಿಗಳು ನಗರದ ಕೇಂದ್ರ ಗ್ರಂಥಾಲಯಕ್ಕೆ ಶನಿವಾರ ಶೈಣಿಕ ಭೇಟಿ ನೀಡಿದರು. ದೀಪಕ ಭಾರದ್ವಾಜ್​, ಬಿ.ಬಿ. ದ್ವಿವೇದಿ, ಎಸ್​. ಅಭಿಷೇಕ ಬಚ್ಚನ್​ ಹಾಗೂ 29 ಭಾರತೀಯ ಪ್ರಶಿಣಾರ್ಥಿಗಳು ಮತ್ತು 4 ಜನ ಶ್ರೀಲಂಕಾ ಏರ್​ಫೋರ್ಸ್​ ಸಿಬ್ಬಂದಿ ಗ್ರಂಥಾಲಯ ನಿರ್ವಹಣೆ ಮತ್ತು ವಿವಿಧ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

    ಗ್ರಂಥಾಲಯಗಳ ನಿರ್ವಹಣೆ ಮತ್ತು ಕೆಲಸ ಕಾರ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಸದರಿ ತರಬೇತಿ ಅಂಗವಾಗಿ ಈ ತಂಡ ಕೆಂದ್ರ ಗ್ರಂಥಾಲಯ ಮತ್ತು ಶಹಾಪುರದ ರವೀಂದ್ರ ಕೌಶಿಕ್​ ಇ&ಗ್ರಂಥಾಲಯಕ್ಕೆ ಭೇಟಿ ನೀಡಿ, ಕಾರ್ಯ ನಿರ್ವಹಣೆ ಬಗ್ಗೆ, ಸಾರ್ವಜನಿಕ ಸೇವೆಗಳು, ಗ್ರಂಥ ಸಂಪಾದನೆ, ವರ್ಗೀಕರಣ ಪ್ರಕ್ರಿಯೆ ಮತ್ತು ಡಿಜಿಟಲ್​ ಸಾರ್ವಜನಿಕ ಗ್ರಂಥಾಲಯ ಬಗ್ಗೆ ಮಾಹಿತಿ ಪಡೆದರು.

    ಗ್ರಂಥಾಲಯ ಉಪನಿರ್ದೇಶಕ ರಾಮಯ್ಯ ಅವರು, ಗ್ರಂಥಾಲಯ ಬಜೆಟ್​, ಖರೀದಿ ಪ್ರಕ್ರಿಯೆ ಮತ್ತು ಅನೇಕ ಆಡಳಿತಾತ್ಮಕ ವಿಷಯಗಳ ಕುರಿತು ಮಾಹಿತಿ ನೀಡಿದರು. ಜತೆಗೆ ದೇಶಕ್ಕೆ ತಮ್ಮ ಸೇವೆ ಬಗ್ಗೆ ಧನ್ಯವಾದ ಅರ್ಪಿಸಿದರು. ಸಿಬ್ಬಂದಿ ಪ್ರಕಾಶ ಇಚಲಕರಂಜಿ, ಎನ್​.ವೈ. ಪಾಟೀಲ ಅವರು ಗ್ರಂಥಾಲಯ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

    ತರಬೇತಿ ಶಾಲೆಯ ಅಧಿಕಾರಿಗಳಾದ ದೀಪಕ ಭಾರದ್ವಾಜ್​ ಅವರು ನಿಗದಿತ ಚೌಕಟ್ಟಿನೊಳಗೆ ಲಭ್ಯ ಸೌಲಭ್ಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಂಥಾಲಯವನ್ನು
    ಅತ್ಯಂತ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದ ಕುರಿತು ಇಲಾಖೆಗೆ, ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. ನಗರ ಕೇಂದ್ರ ಗ್ರಂಥಾಲಯ ಎಲ್ಲ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts