More

    ಗೋಕಾಕದಲ್ಲಿ ಆಯುರ್ವೇದಿಕ್ ಔಷಧ ವಿತರಣೆ

    ಗೋಕಾಕ: ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಕನ್ಹೇರಿ ಮಠದಲ್ಲಿ ತಯಾರಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ್ ಔಷಧವನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಔಷಧವನ್ನು ಅರ್ಧ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಕೊಡಲಾಗುತ್ತಿದೆ.

    10 ವರ್ಷ ಮೇಲ್ಪಟ್ಟವರು ಈ ಮಿಶ್ರಣವನ್ನು ಎರಡು ದಿನ ಬೆಳಗ್ಗೆ ಮತ್ತು ರಾತ್ರಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಕರೊನಾ ರೋಗದಿಂದ ದೂರವಿರಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

    ಇನ್ನೂ ನಾಲ್ಕು ದಿನ ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ 9ರ ವರೆಗೆ ಔಷಧ ನೀಡಲಾಗುತ್ತದೆ. ನಗರದ ಶೂನ್ಯ ಸಂಪಾದನಾ ಮಠದ ಶಿಕ್ಷಣ ಸಂಸ್ಥೆಯ ಕೋಳಿಕಾಟಾ, ಕಿಲ್ಲಾದ ವೆಂಕಟೇಶ್ವರ ದೇವಸ್ಥಾನದ ಆವರಣ, ಅಂಬಿಗೇರ ಗಲ್ಲಿಯ ಹನುಮ ದೇವಸ್ಥಾನ, ಸೋಮವಾರ ಪೇಟೆಯ ಮುಪ್ಪಯ್ಯನ ಮಠ, ನಾಗನಾಥ ಮಂಗಲ ಕಾರ್ಯಾಲಯ, ಪಾಯಸಾಗರ ಶಾಲಾ ಆವರಣ, ಗೋಕಾಕ ಾಲ್ಸ್ ರಸ್ತೆಯ ನ್ಯೂ ಇಂಗ್ಲಿಷ್ ಸ್ಕೂಲ್ ಾಲ್ಸ್ ರೋಡ್, ಮಯೂರ ಸ್ಕೂಲ್ ಆವರಣ, ಜಿ.ಆರ್.ಬಿ.ಸಿ. ಆವರಣ ಹಾಗೂ ಕೆಎಲ್‌ಇ ಸ್ಕೂಲ್, ಉಮರಾಣಿ ಆಸ್ಪತ್ರೆ ಎದುರಿಗೆ ಔಷಧ ವಿತರಿಸಲಾಗುವುದು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts