More

    ಗೋಕರ್ಣದಲ್ಲಿ ಈಜಾಟ ನಿರ್ಬಂಧಕ್ಕೆ ಚಿಂತನೆ

    ಗೋಕರ್ಣ: ಕೆಲ ವರ್ಷಗಳಿಂದ ಇಲ್ಲಿನ ವಿವಿಧ ಬೀಚ್​ಗಳಲ್ಲಿ ನೀರಿಗಿಳಿಯುವ ಪ್ರವಾಸಿಗರು ಸಾವಿಗೀಡಾಗುವ ದುರ್ಘಟನೆ ನಡೆಯುತ್ತಿದೆ. ಉತ್ತರ ಕನ್ನಡದ ಉಳಿದ ಸಮುದ್ರ ತೀರಗಳಿಗಿಂತ ಗೋಕರ್ಣ ಕಡಲ ತಟ ಸಾವಿನಲ್ಲಿ ಮುಂದಿದೆ. ಇದನ್ನು ನಿಯಂತ್ರಿಸಲು ತ್ವರಿತವಾಗಿ ತೆಗೆದುಕೊಳ್ಳ ಬಹುದಾದ ಕ್ರಮಗಳ ಕುರಿತು ಸಮೀಕ್ಷೆ ನಡೆಸಾಗುತ್ತಿದೆ ಎಂದು ಸಿಪಿಐ ಪರಮೇಶ್ವರ ಗುನಗ ತಿಳಿಸಿದರು.

    ಶುಕ್ರವಾರ ಸಮೀಕ್ಷೆ ನಡೆಸುವ ವೇಳೆ ಸುದ್ದಿಗಾರರ ಜತೆ ಮಾತನಾಡಿದರು. ಪೊಲೀಸ್ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಜೀವ ರಕ್ಷಕ ಅಕಾಡೆಮಿ ಶುಕ್ರವಾರ ಇಲ್ಲಿನ ಪ್ಯಾರಡೈಸ್,ಓಂ, ಕುಡ್ಲೆ ಮತ್ತು ಮುಖ್ಯ ಸಮುದ್ರ ತೀರಗಳಲ್ಲಿ ದ್ರೋಣ ಮೂಲಕ ಸಮೀಕ್ಷೆ ನಡೆಸಿದೆ ಎಂದರು.

    ಅಕಾಡೆಮಿ ಸಲಹೆಗಾರ ಪಾರ್ಥ ವಾರಣಾಸಿ ಮಾತನಾಡಿ, ಎಲ್ಲ ಬೀಚ್​ಗಳಲ್ಲಿ ಅಪಾಯ ಕಡಿಮೆ ಇರುವ ನಿರ್ದಿಷ್ಟ ಪಡಿಸಿದ ಜಾಗಗಳಲ್ಲಿ ಮಾತ್ರ ಈಜಲು ಅವಕಾಶ ನೀಡಿ ಸ್ವಿಮ್ಮಿಂಗ್ ಝೆೊನ್ ನಿರ್ವಿುಸುವುದು. ಇಲ್ಲಿ ಬಿರಡೆಗಳನ್ನು(ಬಾಯ್್ಸ ತೇಲಿ ಬಿಟ್ಟು ಪ್ರವಾಸಿಗರು ಇದನ್ನು ಮೀರಿ ಮುಂದೆ ಹೋಗದಂತೆ ತಡೆಯುವುದು. ಉಳಿದ ಪ್ರದೇಶಗಳನ್ನು ರೆಡ್ ಝೆೊನ್ ಎಂದು ಘೊಷಿಸಿ ಈಜಾಟಕ್ಕೆ ಸಂಪೂರ್ಣ ನಿರ್ಬಂಧ ಹಾಕುವುದು. ಈ ಬಗ್ಗೆ ಸಂಬಂಧಿಸದ ಧ್ವಜಗಳನ್ನು ಹಾಕಿ ಪ್ರವಾಸಿಗರನ್ನು ಎಚ್ಚರಿಸುವುದು. ಬೀಚ್​ಗಳಲ್ಲಿ ಈಗಿರುವ ಲೈಫ್​ಗಾರ್ಡ್​ಗಳಿಗೆ ಹೆಚ್ಚಿನ ತರಬೇತಿ ಕೊಟ್ಟು ಅವರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಸಮೀಕ್ಷೆ ನಡೆಸಲಾಯಿತು. ಇಲ್ಲಿ ಕೈಗೊಳ್ಳ ಬಹುದಾದ ಈ ಎಲ್ಲ ಅಗತ್ಯ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಸಿಪಿಐ ಮಾರುತಿ ನಾಯಕ, ಸಿಪಿಐ ಶರಣ ಗೌಡ, ಪಿಎಸ್​ಐ ನವೀನ ನಾಯ್ಕ ಪ್ರವಾಸೋದ್ಯಮ ಅಧಿಕಾರಿ ರವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts