More

    ಗೆಳೆತನ ರಕ್ತ ಸಂಬಂಧಕ್ಕಿಂತ ಮಿಗಿಲು

    ಚಿತ್ರದುರ್ಗ: ಜಾತಿ-ಧರ್ಮ, ಹಿರಿಯರು-ಕಿರಿಯರೆನ್ನದೆ ಜಾತ್ಯತೀತ ಗುಂಪಿನ ಗೆಳೆತನ ರಕ್ತ ಸಂಬಂಧಕ್ಕಿಂತಲೂ ಮಿಗಿಲು ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪ ಅಭಿಪ್ರಾಯಪಟ್ಟರು.

    ಕ್ರೀಡಾ ಸಭಾಂಗಣದಲ್ಲಿ ಕಂಪಳ ಗೆಳೆಯರ ಬಳಗದಿಂದ ಭಾನುವಾರ ನಡೆದ ಗೆಳೆಯರ ಸಮ್ಮಿಲನ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪಾಲಕರು ಮಕ್ಕಳನ್ನೇ ಆಸ್ತಿಯಾಗಿ ಮಾಡಿದರೆ ದೇಶ ಮತ್ತು ಸಮಾಜಕ್ಕೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಕೊಡುಗೆ ನೀಡಲಿದ್ದಾರೆ. ಜೀವನದಲ್ಲಿ ವೃತ್ತಿ-ಪ್ರವೃತ್ತಿ-ನಿವೃತ್ತಿ ಸಾಮಾನ್ಯ. ಆದರೆ, ಸದಾ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ತರಬೇತಿ ಸಂಸ್ಥೆ ನಿವೃತ್ತ ಪ್ರಾಚಾರ್ಯ ಬಿ.ಮಲ್ಲೇಶಪ್ಪ ಮಾತನಾಡಿ, ಕೃತಿ ರಚಿಸುವುದು ತುಂಬಾ ಕಷ್ಟದ ಕೆಲಸ. ಆದರೂ ಡಾ.ತಿಮ್ಮಣ್ಣ ಎರಡು ಕೃತಿ ಹೊರತಂದಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ನಿವೃತ್ತರಾದ ಎಂ.ರೇವಣಸಿದ್ದಪ್ಪ, ಆರ್.ಚಿದಾನಂದ, ಬಿ.ಆರ್.ರವಿ, ವಿ.ಬಸವರಾಜು, ಬಿ.ನಿರಂಜನ್, ಆರ್.ತಿಮ್ಮಾಭೋವಿ, ಆರ್.ಅಲ್ಕೂರಯ್ಯ ಮ್ಯಾಕಲ್ ಬೋರಯ್ಯ, ಬಿ.ಆರ್.ಚಿನ್ನರಾಜು, ಎಸ್.ಟಿ.ವೆಂಕಟೇಶ್, ಪ್ರೇಮಾ ಕೃಷ್ಣಮೂರ್ತಿ, ರಾಜ್ಯ ಪಠ್ಯಪುಸ್ತಕ ಪರಿಷ್ಕೃತಿ ಸಮಿತಿ ಅಧ್ಯಕ್ಷರಾದ ಡಾ.ಅಂಜಿನಪ್ಪ, ಡಾ.ಮಂಜಣ್ಣ, ಗೃಹ ರಕ್ಷಕದಳದ ಲೆಕ್ಕಾಧಿಕಾರಿ ಆರ್.ಪಿ.ಜಯಣ್ಣ, ಲೇಖಕ ಡಾ.ತಿಮ್ಮಣ್ಣ ಅವರನ್ನು ಬಳಗದಿಂದ ಸನ್ಮಾನಿಸಲಾಯಿತು.

    ಇದೇ ವೇಳೆ ಲೇಖಕ ಡಾ.ತಿಮ್ಮಣ್ಣ ಅವರ ಜಿಲ್ಲೆಗೆ ವಿಶೇಷ ರಿಫರೆನ್ಸ್‌ನೊಂದಿಗೆ ಮೈಕ್ರೋ-ಪೈನಾನ್ಸ್ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ, ಭಾರತದಲ್ಲಿ ಸ್ತನ್ಯಪಾನ ಅಭ್ಯಾಸದ ಜ್ಞಾನ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

    ಬೆಂಗಳೂರು ಭೂ ದಾಖಲೆಗಳ ಇಲಾಖೆ ಜಂಟಿ ನಿರ್ದೇಶಕ ವಿ.ಅಜ್ಜಪ್ಪ, ಮಧುಗಿರಿ ಡಿಡಿಪಿಐ ಎಂ.ಆರ್.ಮಂಜುನಾಥ್, ಉಪನ್ಯಾಸಕರ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ಲಕ್ಷ್ಮಣ, ವಕೀಲ ಪ್ರತಾಪ್‌ಜೋಗಿ, ಮೊಳಕಾಲ್ಮುರು ಬಿಇಒ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಕುಮಾರಿ, ಉಪ ಪ್ರಾಂಶುಪಾಲ ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts