More

    ಗುರು ಗುರಿ ತೋರಿಸಬಲ್ಲ ಪ್ರತ್ಯಕ್ಷ ದೇವ: ಮಳೆ ಹಿರೇಮಠ ಶ್ರೀ

    ಶಿಕಾರಿಪುರ: ಸಮಾಜವನ್ನು ಉನ್ನತಿಯ ದ್ದಾರಿಯಲ್ಲಿ ಕೊಂಡೊಯ್ಯುವ ಕಾರ್ಯವನ್ನು ಗುರುಪರಂಪರೆ ಮಾಡುತ್ತಿದೆ. ಗುರುಗಳ ಸನ್ನಿಧಾನವೆಂದರೆ ಅದು ಆನಂದಧಾಮ ಎಂದು ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
    ಸಮೀಪದ ಕಡೇನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳ 4 ತಿಂಗಳ ಮೌನಾನುಷ್ಠಾನ ಪ್ರಾರಂಭದ ನಿಮಿತ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಗುರು ಗುರಿ ತೋರಿಸಬಲ್ಲ ಪ್ರತ್ಯಕ್ಷ ದೇವ. ಹಿಂದಿನ ಕಾಲದಲ್ಲಿ ಪ್ರತಿ ಸಾಮ್ರಾಜ್ಯದ ಹಿಂದೆ ಗುರುಗಳಿದ್ದರು. ಚಂದ್ರಗುಪ್ತನ ಹಿಂದೆ ಚಾಣಕ್ಯನಿದ್ದ, ಶಿವಾಜಿಯ ಹಿಂದೆ ಸಮರ್ಥ ರಾಮದಾಸರಿದ್ದರು, ವಿಜಯನಗರದ ಅರಸರ ಹಿಂದೆ ವಿದ್ಯಾರಣ್ಯರಿದ್ದರು, ಕಿತ್ತೂರು ಸಂಸ್ಥಾನ ಸೇರಿದಂತೆ ಎಲ್ಲಾ ರಾಜ ಮಹಾರಾಜರುಗಳಿಗೆ ಗುರುಗಳು ಮಾರ್ಗದರ್ಶನ ಮಾಡುತ್ತಿದ್ದರು. ಕಡೇನಂದಿಹಳ್ಳಿ ಶ್ರೀಗಳ ಅನುಷ್ಠಾನದ ಬಲದಿಂದ ಮಣ್ಣಿಗೆ ಪವಿತ್ರತೆಯ ಲೇಪನವಾಗಿದೆ. ಕಿರಿಯ ವಯಸ್ಸಿಗೆ ಹಿರಿದಾದ ಸಾಧನೆ ಮಾಡಿದ್ದಾರೆ. ಅವರ ಎಲ್ಲ ಸಾಧನೆಗಳು ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿವೆ ಎಂದರು.
    ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿದರು. ರಾಮಘಟ್ಟ ಪುರವರ್ಗ ಹಿರೇಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
    ಭದ್ರಾವತಿ ವೈದ್ಯಡಾ.ಕೆ.ಮಹಾದೇವಪ್ಪ ಗುರುಗಳಿಗೆ ಬೆಳ್ಳಿ ಕಿರೀಟ, ಕಮಂಡಲವನ್ನು ಅರ್ಪಿಸಿದರು. ಪ್ರತಿ ಗುರುವಾರ ಸಂಜೆ 4ರಿಂದ 5ರ ತನಕ ಭಕ್ತರಿಗೆ ದರ್ಶನಭಾಗ್ಯ ನೀಡುವ ಭರವಸೆಯನ್ನ ಕಡೇನಂದಿಹಳ್ಳಿ ಶ್ರೀಗಳು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts