More

    ಗುರುವಿನ ಸೇವೆಯಿಂದ ಪುಣ್ಯ ಪ್ರಾಪ್ತಿ

    ಚಿತ್ರದುರ್ಗ: ಗುರುವಿನ ಸೇವೆ ಸನ್ಮಾರ್ಗದಲ್ಲಿ ಮುನ್ನಡೆಸುವುದರ ಜತೆಗೆ ಪುಣ್ಯ ಪ್ರಾಪ್ತಿಗೂ ಕಾರಣವಾಗಲಿದೆ ಎಂದು ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.

    ಕಬೀರಾನಂದಾಶ್ರಮದಲ್ಲಿ ಬುಧವಾರ ರಾತ್ರಿ ನಡೆದ ಶ್ರೀ ಕಬೀರಾನಂದ ಸ್ವಾಮೀಜಿ ಅವರ 67ನೇ, ಶ್ರೀ ಕಬೀರೇಶ್ವರ ಸ್ವಾಮೀಜಿ ಅವರ 57ನೇ ಪುಣ್ಯಾರಾಧನೆಯ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

    ಹಿಂದಿನ ಗುರುಗಳು ಮಠ ಹಾಗೂ ಗೋಶಾಲೆ ನಿರ್ಮಿಸಲು ಬಂದವರಲ್ಲ. ಆದರೆ, ಇಂದು ಸಾಧ್ಯವಾಗಿದೆ ಎಂದರೆ, ಅವರ ಆಶೀರ್ವಾದವೂ ಕಾರಣವಾಗಿದೆ. ಆ ಹಾದಿಯಲ್ಲೇ ನಾವು ಸಾಗುತ್ತಿದ್ದೇವೆ. ಹೀಗಾಗಿ ಶ್ರೀಮಠ ಹಂತ-ಹಂತವಾಗಿ ಬೆಳೆಯುತ್ತಿದೆ. ಸನ್ಯಾಸಿ ಆಗುವವರಿಗೆ ಪೂರ್ವಾಶ್ರಮದ ಸಂಬಂಧ ಇರಬಾರದು. ಎಲ್ಲವನ್ನು ತೊರೆದಾಗ ಮಾತ್ರ ಇದರಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದು ತಿಳಿಸಿದರು.

    ಹುಬ್ಬಳ್ಳಿಯ ಸಿದ್ಧಾರೂಢ ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಮಹಾತ್ಮರಿಂದ ಅನೇಕ ಗುಣ ಕಲಿಯಬೇಕು. ಮಾನವನ ಪಾಪ ಕಳೆಯುವ ಸಾಮರ್ಥ್ಯ ಇರುವುದು ಗುರುವಿಗೆ ಮಾತ್ರ. ಎಲ್ಲಿ ಪರಿಪೂರ್ಣ ಶ್ರದ್ಧೆ ಇರುತ್ತದೋ ಅಲ್ಲಿ ಭಕ್ತಿ ಇರುತ್ತದೆ. ಜ್ಞಾನದ ಹಸಿವನ್ನು ನೀಗಿಸಲು ಗುರುವಿನ ಕಾರುಣ್ಯ ತುಂಬಾ ಅಗತ್ಯ ಎಂದು ಹೇಳಿದರು.

    ಕಾಂಗ್ರೆಸ್ ಮುಖಂಡ ಕೆ.ಸಿ.ನಾಗರಾಜ್ ಮಾತನಾಡಿ, ಮುಂದೆ ಗುರಿ, ಹಿಂದೆ ಗುರು ಇದ್ದಾಗ ಎಂತಹ ಸಾಧನೆ ಬೇಕಾದರೂ ಮಾಡಬಹುದು. ನಿತ್ಯ ಗುರು ಸ್ಮರಣೆಯಲ್ಲಿ ತೊಡಗುವುದರಿಂದ ಮನಸು ಶುದ್ಧಿಯಾಗಲಿದೆ ಎಂದರು.

    ಇದಕ್ಕೂ ಮುನ್ನ ಕರ್ತೃ ಗದ್ದಿಗೆಗೆ ರುದ್ರಾಭಿಷೇಕ ಪೂಜೆ ನೆರವೇರಿತು. ಆಕಾಶವಾಣಿ ಕಲಾವಿದೆ ಜಿ.ಎನ್.ಸಿದ್ದಮ್ಮ, ಗಂಜಿಗಟ್ಟೆ ಕಲಾತಂಡದಿಂದ ಸಂಗೀತ ನಮನ ಕಾರ್ಯಕ್ರಮ ನಡೆಯಿತು.

    ಮುಖಂಡರಾದ ವೆಂಕಟೇಶ್, ಎ.ರೇಖಾ, ಸಾಹಿತಿ ಬಿ.ಆರ್.ಪುಟ್ಟಪ್ಪ, ಮಾತೃಶ್ರೀ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್, ಗಣಪತಿ ಶಾಸ್ತ್ರೀ, ನಿರಂಜನಮೂರ್ತಿ, ತಿಪ್ಪೇಸ್ವಾಮಿ, ಬುಡೇನ್ ಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts