More

    ಗುರಿ ಸಾಧನೆಗೆ ಕಠಿಣ ಸಂಕಲ್ಪ ಅವಶ್ಯ

    ಮಾಂಜರಿ, ಬೆಳಗಾವಿ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ತಲುಪಬೇಕಾದರೆ ಕಠಿಣ ಸಂಕಲ್ಪ ಮಾಡಬೇಕು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

    ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ವೃತ್ತಿ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಓದುವಾಗ ಗೊಂದಲ ಮಾಡಿಕೊಳ್ಳಬಾರದು. ಹತ್ತು ವಿಷಯಗಳನ್ನು ಒಂದು ಬಾರಿ ಓದುವುದಕ್ಕಿಂತ ಒಂದೇ ವಿಷಯವನ್ನು ಹತ್ತು ಬಾರಿ ಓದಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದರು.

    ಬೆಳಗಾವಿ ಸಹಕಾರ ಯೂನಿಯನ್‌ನ ಶ್ರೀಶೈಲ ಯಡಹಳ್ಳಿ ಮಾತನಾಡಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಕ್ರಮಗಳನ್ನು ವಿವರಿಸಿ ತಂತ್ರಜ್ಞಾನ, ಅಂತರ್ಜಾಲ, ಸಾಮಾಜಿಕ ಜಾಲತಾಣಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಮಾರ್ಗದರ್ಶನ ನೀಡಿದರು.

    ಚಿಕ್ಕೋಡಿ ಡಯಟ್ ಉಪನ್ಯಾಸಕ ಸಂಜಯ ಯಾದಗೂಡ, ಕೆರೂರ ಗ್ರಾಪಂ ಉಪಾಧ್ಯಕ್ಷ ವಿಠ್ಠಲ ವಾಳಕೆ ಅಧ್ಯಕ್ಷತೆ ವಹಿಸಿದ್ದರು. ಮಲ್ಲಪ್ಪ ಬಾಗಿ, ವೀರೇಂದ್ರ ಪಾಟೀಲ, ಬಸನಗೌಡ ಪಾಟೀಲ, ಚೇತನ ಪಾಟೀಲ, ರವಿ ಪಾಟೀಲ, ಯಲ್ಲನಗೌಡ ಪಾಟೀಲ, ಜನಾರ್ದನ ಸಾಳುಂಕೆ, ಶಿವಾನಂದ ಮಾಂಗನೂರ, ಸುರೇಶ ಧನವಡೆ, ಮಹೇಶ ಮಗದುಮ್, ಶ್ರೀಶೈಲ ಕೋಲಾರ, ಶಂಕರ ತೇಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts