More

    ಗುತ್ತಲದ ಹೇಮಗಿರಿಮಠ ಪ್ರಸನ್ನ ಪ್ರಥಮ

    ಸವಣೂರ: ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಸೇವಾ ಸಮಿತಿ ವತಿಯಿಂದ ಬೀರಪ್ಪ ಕೊಳ್ಳವರ ಹಾಗೂ ನೀಲಪ್ಪ ಕೃಷ್ಣಣ್ಣವರ ಹೊಲದಲ್ಲಿ ಶನಿವಾರ 12ನೇ ಬಾರಿಯ ಜೋಡೆತ್ತಿನ ರಾಜ್ಯ ಮಟ್ಟದ ಭಾರಿ ಗಾಡಾ ಓಡಿಸುವ ಸ್ಪರ್ಧೆ ಜರುಗಿತು.

    ಸವಣೂರ, ಹಾವೇರಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ಅಂದಾಜು 65 ಜೊತೆ ಎತ್ತುಗಳು ಭಾಗವಹಿಸಿದ್ದವು. ಗುತ್ತಲದ ಹೇಮಗಿರಿಮಠ ಪ್ರಸನ್ನ ಪ್ರಥಮ ಸ್ಥಾನ (35,000 ರೂ.), ತೇರದಹಳ್ಳಿಯ ಆದಿಶೇಷ ಪ್ರಸನ್ನ ದ್ವಿತೀಯ (25, 000 ರೂ.), ನೆಲ್ಲಿಹರವಿ ಗ್ರಾಮದೇವಿ ಪ್ರಸನ್ನ ಎತ್ತುಗಳು ತೃತೀಯ ಸ್ಥಾನ (18,000 ರೂ.) ಮತ್ತು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವು. ಇತರ ಗ್ರಾಮಗಳ 17 ಎತ್ತುಗಳು ವಿವಿಧ ವಿಭಾಗದಲ್ಲಿ ಬಹುಮಾನ ಪಡೆದವು.

    ಎಪಿಎಂಸಿ ಸದಸ್ಯ ಪಾಂಡಪ್ಪ ತಿಪ್ಪಕ್ಕನವರ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ರೈತರೊಂದಿಗೆ ಎತ್ತುಗಳಿಗೆ ಸಹ ಜನಪದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಸೋಲು- ಗೆಲುವಿನ ಬದಲಾಗಿ ಸಂತಸ ಹಂಚಿಕೊಳ್ಳಬೇಕು ಎಂದರು.

    ಜನಪದ ಕಲಾವಿದ ವೀರಯ್ಯ ಸಂಕೀನಮಠ ಮಾತನಾಡಿದರು. ಮಂಜುನಾಥ ಅಡಿವೆಪ್ಪನವರ, ನಾಗಪ್ಪ ತಿಪ್ಪಕ್ಕನವರ, ಗ್ರಾಪಂ ಸದಸ್ಯರಾದ ಯಲ್ಲಪ್ಪ ಇಟಗಿ, ಯಲ್ಲಪ್ಪ ದೇವಗಿರಿ, ಮುಜಾಹಿದ್ ದಿವಾನ್​ಸಾಬನವರ, ಹೆಗ್ಗಪ್ಪ ಬಾಲೆಹೊಸೂರ, ಎಂ.ಜೆ. ಮುಲ್ಲಾ, ಶಿವಾಜೆಪ್ಪ ಅಗಡಿ, ಪ್ರಕಾಶ ಇಟಗಿ, ಮಲ್ಲೇಶ ಹರಿಜನ, ನಾಗಪ್ಪ ದೇವಗೇರಿ, ಮಹರ್ಷಿ ವಾಲ್ಮೀಕಿ ಸೇವಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts