More

    ಗುಣಮಟ್ಟ ಮೇಲೆ ನಿಗಾ ಇರಲಿ

    ಅಥಣಿ ಗ್ರಾಮೀಣ: ನೀರಾವರಿ, ಲೋಕೋಪಯೋಗಿ ಮತ್ತು ಜಿಪಂ ಇಲಾಖೆಯಿಂದ ಕೋಟ್ಯಂತರ ರೂ. ಅನುದಾನದಲ್ಲಿ ಅಥಣಿ ತಾಲೂಕಿನ ಗ್ರಾಮೀಣ ಪ್ರದೇಶ ರಸ್ತೆ ಅಭಿವೃದ್ಧಿ, ಕಾಲುವೆ ದುರಸ್ತಿ ಹಾಗೂ ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದು ವಿಪ ಸದಸ್ಯ ಲಕ್ಷ್ಮಣ ಸವದಿ ತಿಳಿಸಿದರು.

    ಅಥಣಿ ತಾಲೂಕಿನ ರಡ್ಡೇರಹಟ್ಟಿ, ಝೀರೊ ಪಾಯಿಂಟ್ ಬಳಿ ಮಹಿಷವಾಡಗಿ ಹಾಗೂ ಸತ್ತಿ ಗ್ರಾಮದ ಸಂಪರ್ಕ ರಸ್ತೆ, ದೊಡವಾಡ ಮತ್ತು ಹುಲಗಬಾಳ ಗ್ರಾಮದಲ್ಲಿ 12.99 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಬುಧವಾರ ಚಾಲನೆ ನೀಡಿ, ಕಾಮಗಾರಿ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ನಿಗಾವಹಿಸಬೇಕು ಎಂದು ಸೂಚಿಸಿದರು. 2019ರ ಕೃಷ್ಣಾನದಿ ಪ್ರವಾಹದಲ್ಲಿ ಹಾಳಾಗಿರುವ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗುತ್ತಿದ್ದು, ಗ್ರಾಮಸ್ಥರು ಸಹಕಾರ ನೀಡಬೇಕು. ತಾಲೂಕಿನ ಪೂರ್ವಭಾಗದ 8 ಕೆರೆ ತುಂಬುವ ಯೋಜನೆಯ 2ನೇ ಹಂತದಲ್ಲಿ 95 ಕೋಟಿ ರೂ. ಅನುದಾನಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಅದರ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ.

    49.51 ಕೋಟಿ ರೂ. ಯಲ್ಲಮ್ಮವಾಡಿವರೆಗಿನ ಕೆರೆ ತುಂಬುವ ಕಾಮಗಾರಿ ಭರದಿಂದ ಸಾಗಿದ್ದು, ಜೂನ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
    ಮುಖಂಡರಾದ ಬಸಪ್ಪ ಖೋತ, ಮುರುಗೆಪ್ಪ ಬಾವಿ, ಜಿಪಂ ಮಾಜಿ ಸದಸ್ಯ ಶ್ರೀಶೈಲ ಗಸ್ತಿ, ಶಿವಾನಂದ ಸಾರವಾಡ, ಅಧಿಕಾರಿಗಳಾದ ಕೆ. ರವಿ, ಮನೋಜ ರಾಠೋಡ, ಗೌಡಪ್ಪ ಗೂಳಪ್ಪನವರ, ಎ.ಜಿ.ಮುಲ್ಲಾ, ಜಡೆಪ್ಪ ಕುಂಬಾರ, ಶ್ರೀಶೈಲ ಹಳದಮಳ, ರಾಜೇಂದ್ರ ಅಲಬಾಳ, ಸುರೇಶ ಗುಳಪ್ಪನವರ, ಬಾಬಾಸಾಹೇಬ ಪಾಟೀಲ, ಅಮರ ದುರ್ಗಣ್ಣವರ, ಬಸಗೊಂಡ ಮಲಗನ್ನವರ, ಬಸಪ್ಪ ಸಸಾಲಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts