More

    ಗುಣಮಟ್ಟದ ಶಿಕ್ಷಣದಿಂದ ಸಾಧನೆ ಸಾಧ್ಯ

    ಬೆಳಗಾವಿ: ಗುಣಮಟ್ಟದ ಶಿಕ್ಷಣ ಸಾಧನೆಗೆ ರಹದಾರಿಯಾಗಿದೆ. ಶಿಕ್ಷಣವಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯಣ್ಣವರ ಹೇಳಿದರು.

    ನಗರದ ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಶಿಕ್ಷಕರ ಸತ್ಕಾರ ಮತ್ತು ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. 2022ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಿಕ್ಷಕಿ ಸುಶೀಲಾ ಗುರವ ಅವರನ್ನು ಸತ್ಕರಿಸಲಾಯಿತು.

    ಸತ್ಕಾರ ಸ್ವೀಕರಿಸಿ ಮಾತನಾಡಿದ ಸುಶೀಲಾ ಗುರವ, ಕರ್ತವ್ಯವನ್ನು ತನುಮನ, ಅರ್ಪಣಾ ಮನೋಭಾವದಿಂದ ಮಾಡಬೇಕು. ವೃತ್ತಿ ಬಗ್ಗೆ ಕಳಕಳಿ ಇರಬೇಕು. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಬೋಧನೆಯಲ್ಲಿ ಬದಲಾವಣೆ ಕಂಡುಕೊಂಡು ಸಾಗಬೇಕು ಎಂದರು. ಆರ್.ಎಲ್.ಎಸ್. ಕಾಲೇಜಿನ ಉಪನ್ಯಾಸಕ ಬಸವರಾಜ ಹೂಗಾರ ಉಪನ್ಯಾಸ ನೀಡಿದರು.

    ಮಹಾರಾಷ್ಟ್ರದ ಸಾಮಾಜಿಕ ಹೋರಾಟಗಾರ ಅವಿನಾಶ ಘೋಸೆಕರ, ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಹೂಗಾರ ಅವರನ್ನು ಸತ್ಕರಿಸಲಾಯಿತು. ಡಿ.ಎಸ್.ಹೂಗಾರ, ಶಂಕರ ಗುಡಸ, ಶಶಿಭೂಷಣ ಪಾಟೀಲ, ವಿ.ಕೆ.ಪಾಟೀಲ, ಸಂಗಮೇಶ ಅರಳಿ, ಎಂ.ವೈ.ಮೆಣಸಿನಕಾಯಿ, ಶಿವಾನಂದ ತಲ್ಲೂರ, ಅಡಿವೇಶ ಇಟಗಿ, ಬಿ.ಬಿ.ಮಠಪತಿ, ಜ್ಯೋತಿ ಬದಾಮಿ, ಸುವರ್ಣಾ ತಿಗಡಿ, ಅಕ್ಕಮಹಾದೇವಿ ತೆಗ್ಗಿ ಇತರರು ಇದ್ದರು. ಮಹಾದೇವಿ ಅರಳಿ ಪ್ರಾರ್ಥಿಸಿದರು. ಶ್ರೀದೇವಿ ನರಗುಂದ ವಚನ ವಿಶ್ಲೇಷಿಸಿದರು. ಸುರೇಶ ನರಗುಂದ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts