More

    ಗುಣಮಟ್ಟದ ಬೀಜ ಖರೀದಿಸಿ

    ಹಿರೇಕೆರೂರ: ರೈತರು ವಿನಾಕಾರಣ ಅಲ್ಪ ಹಣ ಉಳಿತಾಯ ಮಾಡಲು ಹೋಗಿ ಚಿಲ್ಲರೆ ಬಿತ್ತನೆ ಬೀಜಗಳನ್ನು ಕೊಂಡುಕೊಳ್ಳದೆ, ಸರ್ಕಾರದಿಂದ ಮಾನ್ಯತೆ ಪಡೆದ ಗುಣಮಟ್ಟದ ಪ್ಯಾಕೆಟ್ ಬೀಜಗಳನ್ನು ಖರೀದಿಸಿ ಕಡ್ಡಾಯವಾಗಿ ರಶೀದಿ ಪಡೆಯಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಮುಂಗಾರು ಹಂಗಾಮಿಗೆ ಬಿತ್ತನೆ ಬೀಜಗಳ ಮಾರಾಟ ಪ್ರಕ್ರಿಯೆಗೆ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ರೈತರು ಅಲ್ಪ ಹಣ ಉಳಿಸಲು ಹೋಗಿ, ವಿನಾಕಾರಣ ಮೋಸದ ಜಾಲಕ್ಕೆ ಒಳಗಾಗದೆ, ಕೃಷಿ ಪರಿಕರ ಮಾರಾಟ ಅಂಗಡಿಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದರಕ್ಕೆ ಬೀಜ ಖರೀದಿಸಿ ರಶೀದಿ ಪಡೆಯಬೇಕು. ರಶೀದಿಯನ್ನು ಬೆಳೆ ಬರುವವರೆಗೂ ಕಾಯ್ದಿರಿಸಿಕೊಳ್ಳಬೇಕು. ರಟ್ಟಿಹಳ್ಳಿ, ಹಿರೇಕೆರೂರು ತಾಲೂಕಿಗೆ ಮುಂಗಾರು ಹಂಗಾಮಿಗೆ ಬೇಕಾಗುವಷ್ಟು ಸರ್ಕಾರದಿಂದ ಸಹಾಯಧನದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸಾಕಷ್ಟು ದಾಸ್ತಾನಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

    ರೈತರು ಬೀಜಗಳನ್ನು ಖರೀದಿಸುವಾಗ ಹಾಗೂ ಬಿತ್ತುವಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ತಾಪಂ ಅಧ್ಯಕ್ಷ ರಾಜು ಬಣಕಾರ, ಜಿಪಂ ಸದಸ್ಯ ಶಿವರಾಜ ಹರಿಜನ, ತಾಪಂ ಸದಸ್ಯ ಬಸವರಾಜ ಭರಮಗೌಡ್ರ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಜಿ. ಶಿವನಗೌಡ್ರ, ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ, ರಾಣೆಬೆನ್ನೂರು ಕೃಷಿ ಉಪನಿರ್ದೇಶಕಿ ಸ್ಪೂರ್ತಿ ಜಿ.ಎಸ್., ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ವಿ. ಮಂಜುನಾಥ, ಕೃಷಿ ಪರಿಕರ ಮಾರಾಟ ಅಂಗಡಿಗಳ ಮಾಲೀಕರಾದ ಎಸ್.ಆರ್. ಪಾಟೀಲ, ಗಂಗಾಧರ ಮಾಗನೂರು, ಲೋಕೇಶ ಸಂಕೊಳ್ಳಿ, ಕರಬಸಪ್ಪ ಸುತ್ತಕೋಟಿ ಹಾಗೂ ರೈತರು ಇದ್ದರು.

    ಕೃಷಿ ತಾಂತ್ರಿಕ ಅಧಿಕಾರಿ ಮಾರುತಿ ಅಂಗರಗಟ್ಟಿ, ತಾಂತ್ರಿಕ ವ್ಯವಸ್ಥಾಪಕಿ ಶಿಲ್ಪಾ ಗೌಡರ, ಸಹಾಯಕ ಅಧಿಕಾರಿ ಸುರೇಶ ಹಾವನೂರು ನಿರ್ವಹಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts