More

    ಗುಂಡ್ಲುಪೇಟೆಗೆ ಶೇ.93 ಫಲಿತಾಂಶ

    ಗುಂಡ್ಲುಪೇಟೆ: ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ 1,078 ಬಾಲಕರು ಹಾಗೂ, 183 ಬಾಲಕಿಯರು ಸೇರಿ ಒಟ್ಟು 2,261 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 93ಫಲಿತಾಂಶ ಬಂದಿದೆ.


    ಪರೀಕ್ಷೆಗೆ ಹಾಜರಾಗಿದ್ದ 2,426 ವಿದ್ಯಾರ್ಥಿಗಳಲ್ಲಿ 1,187 ಬಾಲಕರು ಹಾಗೂ 1,239 ಬಾಲಕಿಯರು ಇದ್ದರು. 27 ಸರ್ಕಾರಿ ಶಾಲೆಗಳ 1,387 ರಲ್ಲಿ 1,282 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.92.42 ಫಲಿತಾಂಶ, 14 ಆನುದಾನಿತ ಶಾಲೆಗಳ 540ರಲ್ಲಿ 494 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.91.48 ಫಲಿತಾಂಶ ಬಂದಿದೆ. ಅನುದಾನರಹಿತ 9 ಶಾಲೆಗಳ 499ರಲ್ಲಿ 485 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.97.19 ಫಲಿತಾಂಶ ಬಂದಿದೆ.

    ಪಟ್ಟಣದ ಸೆಂಟ್ ಜಾನ್ಸ್ ಶಾಲೆಯ ಎಸ್.ಗಂಧರ್ವಿನಿ 618, ಅದೇ ಶಾಲೆಯ ಎಸ್.ಸಂಜನಾ 612, ಸರ್ಕಾರಿ ಆದರ್ಶ ಶಾಲೆಯ ಸಿ.ಎನ್.ಹರ್ಷಿತಾ 610 ಅಂಕಗಳಿಸಿ ತಾಲೂಕಿನ ಟಾಪರ್‌ಗಳಾಗಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಶೇ. 61.40 ಫಲಿತಾಂಶ ಬಂದಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಎಸ್.ಗಂಧರ್ವಿನಿ 618 ಅಂಕ: ಪಟ್ಟಣದ ಸೆಂಟ್ ಜಾನ್ಸ್ ಶಾಲೆಯ ವಿದ್ಯಾರ್ಥಿನಿ ಎಸ್.ಗಂಧರ್ವಿನಿ 618 ಅಂಕ ಗಳಿಸಿ ತಾಲೂಕಿಗೆ ಟಾಪರ್ ಆಗಿ ಹೊಮ್ಮಿದ್ದಾಳೆ. ಕಳೆದ ಎರಡು ವರ್ಷಗಳ ಪ್ರಶ್ನೆಪತ್ರಿಕೆ ಅಭ್ಯಾಸ ಮಾಡಿದ್ದು, ಶಿಕ್ಷಕರ ಸಹಕಾರ ಹಾಗೂ ಪಾಲಕರ ಪ್ರೋತ್ಸಾಹದಿಂದ ಹೆಚ್ಚಿನ ಸಮಯ ಅಧ್ಯಯನ ಮಾಡಲು ಸಾಧ್ಯವಾಯಿತು. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಗಂಧರ್ವಿನಿತಿಳಿಸಿದ್ದಾಳೆ. ಈ ತಾಲೂಕಿನ ಕೆಲಸೂರು ಗ್ರಾಮದ ನಿವಾಸಿ ವಿಜಯವಾಣಿ ಪತ್ರಿಕೆ ಏಜೆಂಟ್ ಶಿವಕುಮಾರಸ್ವಾಮಿ ಅವರು ಪುತ್ರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts