More

    ಗುಂಡಾಪುರದಲ್ಲಿ ಬೆಟ್ಟದರಸಮ್ಮನ ಜಾತ್ರೆ

    ಹಲಗೂರು: ಗುಂಡಾಪುರದ ಬೆಟ್ಟದರಸಮ್ಮನ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ಜರುಗಿತು.


    ಮಧ್ಯಾಹ್ನ 4.30ರ ನಂತರ ಗುಂಡಾಪುರ ಗ್ರಾಮದ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಹೆಬ್ಬಾರೆಗೆ ಪೂಜೆ ಸಲ್ಲಿಸಿದ ನಂತರ ದೇವರ ಗುಡ್ಡರು ಹೆಬ್ಬಾರೆಯನ್ನು ಹೊತ್ತು ಕೆಲ ಮನೆಗಳಿಗೆ ಹೋದರು. ಮನೆಯವರು ಹೆಬ್ಬಾರೆಗೆ ಪೂಜೆ ಸಲ್ಲಿಸಿದರು. ಬಳಿಕ ವಾಪಸ್ ದೇವಸ್ಥಾನಕ್ಕೆ ತರಲಾಯಿತು.


    ಜೋಡಿ ಬಸವಗಳ ಜತೆ ದೇವರ ಕರಗ ಮೆರವಣಿಗೆ ಸಾಗಿತು. ಬಾಳೆಹೊನ್ನಿಗ ಗ್ರಾಮದ ಯುವಕರು ಮತ್ತು ಹರಕೆ ಹೊತ್ತ ಭಕ್ತರು ಚಿತ್ರ, ವಿಚಿತ್ರ ಬಟ್ಟೆಗಳನ್ನು ತೊಟ್ಟು ಬೇವಿನ ಸೊಪ್ಪನ್ನು ಸೊಂಟಕ್ಕೆ ಕಟ್ಟಿಕೊಂಡು ತೆಂಗಿನ ಮಟ್ಟೆಯಿಂದ ತಯಾರಾದ ಕೋವಿ ಹಿಡಿದು ಗೋಣಿಚೀಲವನ್ನು ವಿವಿಧ ಆಕಾರಗಳಲ್ಲಿ ಧರಿಸಿ ಕುಣಿದರು.


    ಶಾಸಕ ಡಾ.ಕೆ.ಅನ್ನದಾನಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಬಿಜೆಪಿ ಮುಖಂಡ ಜಿ.ಮುನಿರಾಜು ದೇವರ ದರ್ಶನ ಪಡೆದರು.


    ದಳವಾಯಿ ಕೋಡಿಹಳ್ಳಿ, ನಂದೀಪುರ, ಕೆಂಪಯ್ಯನದೊಡ್ಡಿ, ಎಚ್.ಬಸವಾಪುರ, ಬಾಳೆಹೊನ್ನಿಗ, ದೇವಿರಹಳ್ಳಿ, ಹೊನ್ನಗನಹಳ್ಳಿ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts