More

    ಗಿರಿಜಿಲ್ಲೆಯಲ್ಲಿ ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ

    ಯಾದಗಿರಿ: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಂಭ್ರಮದ ವಾತಾವರಣ ಕಳೆಗಟ್ಟಿದ್ದು, ಭಾನುವಾರ ಎಲ್ಲೆಡೆ ಘಟಸ್ಥಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
    ನವರಾತ್ರಿಯ ಮೊದಲ ದಿನವಾದ ಭಾನುವಾರ ನಗರದ ಹಿಂದು ಸೇವಾ ಸಮಿತಿ ಆಶ್ರಮದಲ್ಲಿ ಅಂಬಾ ಭವಾನಿ ಪತ್ಥಳಿಯನ್ನು ಮೆರವಣಿಗೆಯ ಮೂಲಕ ನಗರದ ಹೊರ ವಲಯದಲ್ಲಿನ ಭೀಮಾ ನದಿಗೆ ತೆರಳಿ ಗಂಗಾಸ್ನಾನದ ನಂತರ, ಭಕ್ತವೃಂದ ಕುದುರೆ ಕುಣಿತ, ಡೊಳ್ಳು ಕುಣಿತ ಸೇರಿ ವಿವಿಧ ಕಲಾತಂಡಗಳಿಂದ ಕಲಾ ಪ್ರದರ್ಶನಗಳು ನಡೆದವು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ನೀಡಿತು. ನಗರದ ರೈಲ್ವೆ ನಿಲ್ದಾಣದಿಂದ ಶಾಸ್ತ್ರೀ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದೆ.

    ಯಾದಗಿರಿ ಹೃದಯ ಭಾಗದಲ್ಲಿನ ಐತಿಹಾಸಿಕ ಬೆಟ್ಟದಲ್ಲಿನ ಭುವನೇಶ್ವರಿ ಮಂದಿರದಲ್ಲಿ ನವರಾತ್ರಿ ಹಬ್ಬಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ನೂರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ ಅಮ್ಮನ ದರ್ಶನ ಪಡೆದುಕೊಂಡರು. ಈ ವೇಳೆ ತಾಯಿಯ ಹೆಸರಲ್ಲಿ ಒಂಭತ್ತು ದಿನಗಳ ಕಾಲ ಕೇಸರಿ ಮಾಲೆ ಹಾಕಿಕೊಂಡು ವೃತ ಆರಂಭಿಸಿದರು.
    ಇನ್ನೂ ಯಾದಗಿರಿ ತಾಲೂಕಿನ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಮಠದಲ್ಲಿ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.
    ನೆರೆ ಭಕ್ತರಿಗೆ ಆಶಿರ್ವಚನ ನೀಡಿ, ನವರಾತ್ರಿ ಉತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರು ಶ್ರದ್ಧೆ ಮತ್ತು ಭಕ್ತಿಗಳಿಂದ ಭಗುಳಾಂಬಿಕೆಯನ್ನು ಭಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ. ಪರಶಿವನ ಪತ್ನಿಯಾದ ದುಗರ್ಾಮಾತೆ ಅತ್ಯಂತ ಶಕ್ತಿಶಾಲಿಯಾದ ದೇವತೆ. ಅವಳನ್ನು ಆದಿಶಕ್ತಿ ಎಂದೂ ಕರೆಯಲಾಗುತ್ತದೆ. ಈ ಆದಿಶಕ್ತಿಯನ್ನು ಕಾಳಿ, ಪಾರ್ವತಿ, ಗೌರಿ, ಮಹಾಮಾಯೆ ಮುಂತಾದ ವಿವಿಧ ರೂಪಗಳಲ್ಲಿ ಆರಾಧಿಸುವ ಪರಂಪರೆ ನಮ್ಮದಾಗಿದೆ ಎಂದು ನುಡಿದರು.

    ಜಗತ್ತಿನಲ್ಲಿ ತಾಮಸಿಕ, ಅಸುರಿ, ಕ್ರೂರ ಪ್ರವೃತ್ತಿಗಳು ಹೆಚ್ಚಾದಾಗ ಅವುಗಳ ಸಂಹಾರಕ್ಕಾಗಿ ಶ್ರೀದೇವಿ ಅವತಾರವೆತ್ತಿ ಅವುಗಳನ್ನು ಸಂಹರಿಸಿ ಸಾತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಸಂರಕ್ಷಿಸುತ್ತಾಳೆಂದು ಹೇಳಿದರು.
    ಶ್ರೀ ವಿಶ್ವಾರಾಧ್ಯರು ಕಠಿಣವಾದ ತಪಸ್ಸನ್ನು ಮಾಡುವುದರ ಮೂಲಕ ಭಗುಳಾಂಬಿಕೆಯನ್ನು ಒಲಿಸಿಕೊಂಡ ಮಹಾತ್ಮರಾಗಿದ್ದಾರೆ. ಅಣಿಮಾದಿ ಅಷ್ಟಸಿದ್ದಿಗಳನ್ನು ಪ್ರಾಪ್ತಿ ಮಾಡಿಕೊಂಡ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ಆದಿಶಕ್ತಿಯ ವಿಶೇಷ ಪೂಜಾ ಕೈಂಕರ್ಯಗಳನ್ನು ನಿರಂತರ 9 ದಿನಗಳ ಕಾಲ ಅತ್ಯಂತ ಭಕ್ತಿಯಿಂದ ನಡೆಸಿಕೊಂಡು ಹೋಗಲಾಗುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts