More

    ಗಿರಿಜಾ ಶಂಕರ ಕಲ್ಯಾಣೋತ್ಸವ 9ಕ್ಕೆ

    ದಾವಣಗೆರೆ: ಎಸ್‌ಕೆಪಿ ರಸ್ತೆಯ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಸಂಘದಿಂದ ಡಿ.9, 10ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಆರ್.ಎಲ್. ಪ್ರಭಾಕರ ತಿಳಿಸಿದರು.
    ಡಿ.9ರಂದು ಬೆಳಗ್ಗೆ ದೇವಸ್ಥಾನ ಆವರಣದಲ್ಲಿ ಗಂಗಾಪೂಜೆ, ಭಸ್ಮಾಭಿಷೇಕ, ಪ್ರಾರ್ಥನೆ, ಏಕಾದತ ರುದ್ರಾಭಿಷೇಕ, ರುದ್ರ ಪಾರಾಯಣ, ಗಣ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಆಯುಷ್ಯ ಹೋಮ, ಧನ್ವಂತರಿ ಸಹಿತ ರುದ್ರ ಹೋಮ, ವಾಸವಿ ಹೋಮ ನೆರವೇರಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಅಂದು ಸಂಜೆ 4 ಗಂಟೆಗೆ ಜಯದೇವ ವೃತ್ತದ ಶ್ರೀ ಜಯದೇವ ಸಾಂಸ್ಕೃತಿಕ ಭವನದಲ್ಲಿ, ದಾವಣಗೆರೆಯಲ್ಲೇ ಮೊದಲ ಬಾರಿಗೆ ನರ್ಮದ ಈಶ್ವರ ಲಿಂಗುವಿಗೆ ಜಲ ರುದ್ರಾಭಿಷೇಕ ನಡೆಯಲಿದೆ. ನಂತರ ಕೇರಳ ಮಾದರಿಯಲ್ಲಿ ಗಂಗಾರತಿ ಹಾಗೂ ಶ್ರೀ ವಾಸವಿ ಅಮ್ಮನವರಿಗೆ ಆರತಿ ನಡೆಯಲಿದೆ. ಬಳಿಕ ಬೆಂಗಳೂರಿನ ಶ್ರೀನಿವಾಸ ಗುಪ್ತ ಸಂಗಡಿಗರಿಂದ ಶ್ರೀ ಗಿರಿಜಾ ಶಂಕರ ಕಲ್ಯಾಣೋತ್ಸವ ನೆರವೇರಲಿದೆ.
    ಡಿ.10ರಂದು ಬೆಳಗ್ಗೆ 10-30ಕ್ಕೆ ನವೀಕರಣಗೊಂಡ ಶ್ರೀ ಕಾಸಲ್ ಎಸ್ ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣಮಂಟಪ ಉದ್ಘಾಟನೆಗೊಳ್ಳಲಿದೆ. ಇದೇ ವೇಳೆ ಸಮಾಜದ ಎಸ್ಸೆಸ್ಸೆಲ್ಸಿ, ಪಿಯು, ಪದವಿ ತರಗತಿಯ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಹಾಗೂ ದಾನಿಗಳಿಗೆ ಸನ್ಮಾನ ನಡೆಯಲಿದೆ.
    ಕಲ್ಯಾಣಮಂಟಪವನ್ನು ದಾವಣಗೆರೆ ರಾಮಕೃಷ್ಣ ಮಿಷನ್‌ನ ಶ್ರೀ ಸ್ವಾಮಿ ತ್ಯಾಗೀಶ್ವರಾನಂದ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಭಾಗವಹಿಸುವರು. ಸಂಜೆ 6 ಗಂಟೆಗೆ ಜಯದೇವ ವೃತ್ತದ ಜಯದೇವ ಸಾಂಸ್ಕೃತಿಕ ಭವನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಬೆಂಗಳೂರಿನ ವಾರಿ ಫೌಂಡೇಷನ್‌ನ ವೆಂಕಟೇಶಮೂರ್ತಿ ಇದನ್ನು ನಡೆಸಿಕೊಡುವರು ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಕಾಶ್, ಕಾರ್ಯದರ್ಶಿ ಜೆ.ರವೀಂದ್ರ ಗುಪ್ತ, ಶ್ರೀನಿವಾಸಮೂರ್ತಿ, ನಾಗರಾಜ ಗುಪ್ತ, ಜೆ. ಶಿವಾನಂದ್, ಸಾಯಿಪ್ರಸಾದ್. ಬದರೀನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts