More

    ಗಿಜಿಗಿಡುತ್ತಿವೆ ರಾಷ್ಟ್ರೀಕೃತ ಬ್ಯಾಂಕ್‌ಗಳು

    ಅರಸೀಕೆರೆ: ಸಾಹೇಬ್ರೇ ಕಿಸಾನ್ ಸಮ್ಮಾನ್ ದುಡ್ಡು ಬಂದಿದೆಯೇ?, ಅಂಗವಿಕಲ ವೇತನ ಜಮಾ ಆಗಿದೆಯೇ?, ಮೇಡಂ ಹೊಸ ಖಾತೆ ತೆರೆಯಲು ಅರ್ಜಿ ನೀಡಿ, ಅಣ್ಣಾ ಪೇ ಸ್ಲಿಪ್‌ಗೆ ಸಾಕ್ಷಿ ಹಾಕಿ, ಸರ್ ಇದೊಂದು ಚಲನ್ ಭರ್ತಿ ಮಾಡಿ, ಅನ್ನಭಾಗ್ಯ ದುಡ್ಡು ಹಾಕಿದ್ದಾರಾ ನೋಡಿ… ಇಂತಹ ಮಾತುಗಳು ಕೇಳಿ ಬರುತ್ತಿರುವುದು ಬೇರೆಲ್ಲೂ ಅಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ!

    ಸರ್ಕಾರದ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಬಹುತೇಕ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದು, ಸಿಬ್ಬಂದಿಗೆ ಒತ್ತಡದ ಜತೆಗೆ ಸವಲತ್ತು ಕಲ್ಪಿಸುವ ಸವಾಲು ಎದುರಾಗಿದೆ. ಇದಕ್ಕೆ ಪೂರಕ ಎನ್ನುವಂತೆ ರೈಲ್ವೆ ನಿಲ್ದಾಣ ರಸ್ತೆಗೆ ಹೊಂದಿಕೊಂಡಂತಿರುವ ಕೆನರಾ ಬ್ಯಾಂಕ್, ಸಾಯಿನಾಥ ರಸ್ತೆಯ ಬ್ಯಾಂಕ್ ಆಫ್ ಬರೋಡಾ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಕಾವೇರಿ, ಕಾರ್ಪೊರೇಷನ್ ಸೇರಿ ಹಲವು ಬ್ಯಾಂಕ್ ಶಾಖೆಗಳು ಗ್ರಾಹಕರಿಂದ ಗಿಜಿಗುಡುತ್ತಿವೆ.

    ಇನ್ನು ಬಾಣಾವರ, ಕಣಕಟ್ಟೆ, ಗಂಡಸಿ, ಜಾವಗಲ್, ಕೋಳಗುಂದ, ಗೀಜಿಹಳ್ಳಿ, ಹಾರನಹಳ್ಳಿ ಸೇರಿ ಗ್ರಾಮೀಣ ಭಾಗದಲ್ಲಿಯೂ ಸರ್ಕಾರದ ಗ್ಯಾರಂಟಿ ಲಾಭ ಪಡೆಯುವ ಹುಮ್ಮಸ್ಸಿನಿಂದ ಹೊಸ ಖಾತೆ ತೆರೆಯಲು ಜನರು ಎಡತಾಕುತ್ತಿರುವ ದೃಶ್ಯ ಕಂಡುಬರುತ್ತಿದೆ. ಜತೆಗೆ ಖಾಸಗಿ ಸ್ವಾಮ್ಯದ ಕೆಲ ಖಾಸಗಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವವರ ಸಂಖ್ಯೆ ಕ್ಷೀಣಿಸಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts