More

    ಗಾರಂಪಳ್ಳಿ ಸೇತುವೆ ಎತ್ತರ ಹೆಚ್ಚಳ ಶೀಘ್ರ

    ಚಿಂಚೋಳಿ: ಗಾರಂಪಳ್ಳಿ ಗ್ರಾಮದಲ್ಲಿ ಭೋಗಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಎತ್ತರ ಹೆಚ್ಚಳಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಶಾಸಕ ಡಾ.ಅವಿನಾಶ ಜಾಧವ್ ಭರವಸೆ ನೀಡಿದರು.

    ಗಾರಂಪಳ್ಳಿಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿ ಸೇತುವೆ ಪರಿಶೀಲಿಸಿದ ಅವರು, ಕೆಳ ಮಟ್ಟದಲ್ಲಿರುವುದರಿಂದ ಪದೇಪದೆ ತೊಂದರೆ ಆಗುತ್ತಿದೆ. ಸೇತುವೆ ಮೇಲೆ ಶವ ತರಲು ಆಂಬುಲೆನ್ಸ್ ಪರದಾಡಿದ ಪ್ರಸಂಗ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ಸೇತುವೆ ಎತ್ತರ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಳ್ಳು-ಕಂಟಿ ತೆರವುಗೊಳಿಸಬೇಕು. ಮಳೆಯಿಂದ ಹಾನಿಯಾದ ಮನೆಗಳ ಬಗ್ಗೆ ಸಮೀಕ್ಷೆ ಮಾಡಿ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

    ತಹಸೀಲ್ದಾರ್ ವೀರೇಶ ಮುಳುಗುಂದ ಮಠ, ಗ್ರೇಡ್-೨ ತಹಸೀಲ್ದಾರ್ ವೆಂಕಟೇಶ ದುಗ್ಗನ್, ಕಂದಾಯ ಅಧಿಕಾರಿ ಕೇಶವ ಕುಲಕರ್ಣಿ, ಟಿಎಚ್‌ಒ ಡಾ.ಗಫರ್ ಸಾಬ್, ಎಇಇಗಳಾದ ಶಿವಶರಣಪ್ಪ ಕೇಶ್ವಾರ, ರಾಜಶೇಖರ, ಸಿಡಿಪಿಒ ಗುರುಪ್ರಸಾದ, ಪಿಡಬ್ಲ್ಯುಡಿ ಇಂಜಿನಿಯರ್ ಬಸವರಾಜ, ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್, ಗ್ರಾಮಸ್ಥರಾದ ಮಹಾಂತರಾವ ದೇಶಮುಖ, ವೀರಭದ್ರಪ್ಪ ಮಲ್ಕೂಡ, ಬಸವರಾಜ ದೇಶಮುಖ, ಸೋಮಶೇಖರ ಪಾಟೀಲ್, ಗೋಪಾಲ ಎಂ.ಪಿ., ಮೌನೇಶ ಮುಸ್ತಾರಿ, ಈಶಪ್ಪ ಮಗಿ ಮೋಹನ ಗುತ್ತೇದಾರ್, ಸಂಗನಬಸಯ್ಯ ಮಠ, ದೇವಿಂದ್ರಪ್ಪ ಬುಳ್ಳಾ, ಹಣಮಂತ ಭೋವಿ, ರಜನಿಕಾಂತ ಬುಳ್ಳಾ ಇತರರಿದ್ದರು.

    ಕನಕಪುರ, ತಾಜಲಾಪುರ, ಚಿಮ್ಮನಚೋಡ ಸೇರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೂ ಭೇಟಿ ನೀಡಿದರು.


    ಹದಗೆಟ್ಟ ರಸ್ತೆ ದುರಸ್ತಿ ಮಾಡಿ
    ಗಾರಂಪಳ್ಳಿಯಿAದ ಹುಮನಾಬಾದ್ ಮುಖ್ಯ ರಸ್ತೆವರೆಗಿನ ಮಾರ್ಗ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಮಾಡಬೇಕು. ಭೋಗಾವತಿ ನದಿಯ ಎಡ ಮತ್ತು ಬಲ ಭಾಗದಲ್ಲಿ ತಡೆಗೋಡೆ ನಿರ್ಮಿಸಬೇಕು. ಒಂದು ದಡದಲ್ಲಿ ಮಹಿಳೆಯರಿಗೆ ಬಟ್ಟೆ ತೊಳೆಯಲು ಅನುಕೂಲ ಕಲ್ಪಿಸಬೇಕು. ನದಿಯಲ್ಲಿ ಬೆಳೆದಿರುವ ಗಿಡ-ಗಂಟಿ ತೆರವುಗೊಳಿಸಬೇಕು. ಸಾರ್ವಜನಿಕ ಮಹಿಳಾ ಶೌಚಗೃಹ ನಿರ್ಮಿಸಬೇಕು. ಎಸ್‌ಸಿ ಬಡಾವಣೆಗೆ ತೆರಳುವ ಬ್ರಿಜ್ ಎತ್ತರ ಹೆಚ್ಚಿಸಿ ಹೈಮಾಸ್ಟ್ ದೀಪ ಅಳವಡಿಸಬೇಕು ಎಂದು ಗ್ರಾಮಸ್ಥರು ಶಾಸಕ ಡಾ.ಅವಿನಾಶ ಜಾಧವ್ ಅವರಿಗೆ ಮನವಿಪತ್ರ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts