More

    ಗಾಯಕ ಮಧೂಪ್​ಗೆ ಪಂ. ಬಸವರಾಜ ರಾಜಗುರು ಪ್ರಶಸ್ತಿ


    ಧಾರವಾಡ: ಸ್ವರ ಸಾಮ್ರಾಟ್ ಪಂ. ಬಸವರಾಜ ರಾಜಗುರು ಜನ್ಮದಿನ ನಿಮಿತ್ತ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನಗರದ ಸೃಜನಾ ರಂಗ ಮಂದಿರದಲ್ಲಿ 2022ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಹಾಗೂ ಯುವ ಪ್ರಶಸ್ತಿಯನ್ನು ಬುಧವಾರ ಪ್ರದಾನ ಮಾಡಲಾಯಿತು.
    ದೆಹಲಿಯ ಗಾಯಕ ಪಂ. ಮಧೂಪ್ ಮುದ್ಗಲ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ಬೆಂಗಳೂರಿನ ಹಾಮೋನಿಯಂ ವಾದಕ ಸತೀಶ ಕೊಳ್ಳಿ ಮತ್ತು ಪುಣೆಯ ಗಾಯಕ ವಿರಾಜ್ ಜೋಶಿ ಅವರಿಗೆ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಪ್ರಶಸ್ತಿ 1 ಲಕ್ಷ ರೂ. ಮೊತ್ತ, ಯುವ ಪ್ರಶಸ್ತಿ ತಲಾ 25 ಸಾವಿರ ರೂ. ಮೊತ್ತ, ಸ್ಮರಣಿಕೆ ಒಳಗೊಂಡಿದೆ.
    ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪಂ. ಮಧೂಪ್ ಮೂದ್ಗಲ್ ಮಾತನಾಡಿ, ಪಂ. ಬಸವರಾಜ ರಾಜಗುರು ಅವರನ್ನು ಬಾಲ್ಯದಿಂದಲೇ ಗಮನಿಸಿದ್ದೇನೆ. ಇದೀಗ ಅವರ ಹೆಸರಿನಲ್ಲಿ ಪ್ರಶಸ್ತಿ ಲಭಿಸಿರುವುದು ನನ್ನ ಸೌಭಾಗ್ಯ. ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ ಎಂದರು.
    ಯುವ ಪ್ರಶಸ್ತಿ ಪುರಸ್ಕೃತ ವಿರಾಜ್ ಜೋಶಿ ಮಾತನಾಡಿ, ಶ್ರೇಷ್ಠ ಗಾಯಕರ ಹೆಸರಿನ ಪ್ರಶಸ್ತಿ ಲಭಿಸಿರುವುದು ಜವಾಬ್ದಾರಿ ಹೆಚ್ಚಿಸಿದೆ. ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡಿದಂತಾಗಿದೆ ಎಂದರು.
    ಸತೀಶ ಕೊಳ್ಳಿ ಮಾತನಾಡಿದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಸದಸ್ಯರಾದ ಭಾರತಿದೇವಿ ರಾಜಗುರು, ಸಂಗೀತಾ ಕಟ್ಟಿ, ಡಾ. ಮುದ್ದುಮೋಹನ, ಡಾ. ಉದಯಕುಮಾರ ದೇಸಾಯಿ, ಡಾ. ಜಿ.ಎಂ. ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಇತರರು ಇದ್ದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ನಿಜಗುಣ ರಾಜಗುರು ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು.
    ನಂತರದಲ್ಲಿ ಪ್ರಶಸ್ತಿ ಪುರಸ್ಕೃತರಾದ ಪಂ. ಮಧೂಪ್ ಮುದ್ಗಲ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ಯುವ ಪ್ರಶಸ್ತಿ ಪುರಸ್ಕೃತ ಸತೀಶ ಕೊಳ್ಳಿ ಅವರಿಂದ ಹಾಮೋನಿಯಂ ಸೋಲೋ ಮತ್ತು ವಿರಾಜ್ ಜೋಶಿ ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಪಂ. ರಾಜೇಂದ್ರ ನಾಕೋಡ, ಕೇಶವ ಜೋಶಿ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts