More

    ಗಾಂಜಾ ಗಿಡ ಬೆಳೆದಿದ್ದವನ ಬಂಧನ

    ಹನೂರು: ತಾಲೂಕಿನ ಕಂಡಯ್ಯನಪಾಳ್ಯ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಗಾಂಜಾವನ್ನು ಬುಧವಾರ ರಾತ್ರಿ ಅಬಕಾರಿ ಇಲಾಖೆಯ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಗ್ರಾಮದ ಹುನುಮಗೌಡ (40) ಬಂಧಿತ ಅರೋಪಿ. ಈತ ಗ್ರಾಮದ ಸರೋಜಮ್ಮ ಎಂಬುವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದು, ಕೊತ್ತಂಬರಿ ಸೊಪ್ಪಿನ ನಡುವೆ ಗಾಂಜಾ ಬೆಳೆದಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಅಬಕಾರಿ ಇನ್ಸ್‌ಪೆಕ್ಟರ್ ಸುನೀಲ್ ಹಾಗೂ ಸಿಬ್ಬಂದಿ ರಾತ್ರಿ ವೇಳೆಯಲ್ಲಿ ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ 348 ಗ್ರಾಂ ತೂಕದ ಒಂದು ಗಾಂಜಾ ಗಿಡವನ್ನು ವಶಪಡಿಸಿಕೊಂಡು ಅರೋಪಿಯನ್ನು ಬಂಧಿಸಿದರು. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ಸಿದ್ದಯ್ಯ, ಪೇದೆಗಳಾದ ಸಿದ್ದರಾಜು, ರಮೇಶ್ ಹಾಗೂ ಪ್ರದೀಪ್‌ಕುಮಾರ್ ಭಾಗವಹಿಸಿದ್ದರು.

    ಫೋಟೋ
    15 ಹನೂರು 1 ಕಂಡಯ್ಯನಪಾಳ್ಯ ಗ್ರಾಮದ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts