More

    ಗರ್ಭಿಣಿಗೆ ನೆರವಾದ ಗ್ರಾಪಂ ಅಧ್ಯಕ್ಷೆ

    ಹುಲಸೂರು: ಕಾಮರ್ಿಕ ಗಭರ್ಿಣಿಯೊಬ್ಬಳು ರಸ್ತೆಬದಿ ಹೊಟ್ಟೆ ನೋವಿನಿಂದ ನರಳುತ್ತಿರುವುದನ್ನು ನೋಡಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿ, ಮುಚಳಂಬ ಗ್ರಾಪಂ ಅಧ್ಯಕ್ಷೆ ಮಾಲಾಶ್ರೀ ಮೇತ್ರೆ ಮಾನವೀಯತೆ ಮೆರೆದಿದ್ದಾರೆ. ರೇಣುಕಾ ಅಶೋಕ ಜಲಪೆಟ್ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

    ಮುಚಳಂಬ ಗ್ರಾಮದ ರೈತ ಭದ್ರಪ್ಪ ಭುರೆ ಅವರ ಹೊಲದಲ್ಲಿ ಕಬ್ಬು ಕಟಾವು ಮಾಡಲು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರ ತಾಲೂಕಿನ ಶಾಹೀನಪುರದ ಕಾಮರ್ಿಕರು ಆಗಮಿಸಿದ್ದಾರೆ. ಇವರಲ್ಲಿ ಗಭರ್ಿಣಿ ರೇಣುಕಾಗೆ ಮಂಗಳವಾರ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಬಸವಕಲ್ಯಾಣ ಆಸ್ಪತ್ರೆಗೆ ತೆರಳಲು ಗ್ರಾಮದ ಬಸ್ ನಿಲ್ದಾಣದಲ್ಲಿ ಕಾಯುತ್ತಾ ಕುಳಿತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಗ್ರಾಪಂ ಅಧ್ಯಕ್ಷೆ ಮಾಲಾಶ್ರೀ ಅವರು ಗಭರ್ಿಣಿಯ ಪರಿಸ್ಥಿತಿ ನೋಡಲಾಗದೆ ಆಂಬುಲೆನ್ಸ್ಗೆ ಕರೆ ಮಾಡಿ ಸಮೀಪದಲ್ಲಿದ್ದ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಮನೆಗೆ ಬರುತ್ತಿದ್ದಂತೆಯೇ ಹೆರಿಗೆ ಆಗಿದ್ದು, ತಾಯಿ -ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

    ಗ್ರಾಪಂ ಅಧ್ಯಕ್ಷೆಯು ತಾಯಿ-ಮಗುವಿನ ಆರೈಕೆ ಮಾಡಿ, ಆಂಬುಲೆನ್ಸ್ನಲ್ಲಿ ಬಸವಕಲ್ಯಾಣ ಸಕರ್ಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮಾಲಾಶ್ರೀ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ನಾವು ಮಹಾರಾಷ್ಟ್ರದಿಂದ ಕೂಲಿ ಕೆಲಸ ಮಾಡಲು ಬಂದಿದ್ದೇವೆ. ಏಕಾಏಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಹೊಲದಿಂದ ಮುಚಳಂಬ ಗ್ರಾಮಕ್ಕೆ ಬಂದು ಬಸ್ಗಾಗಿ ಕಾಯುತ್ತಾ ರಸ್ತೆ ಬದಿ ಕುಳಿತಿರುವಾಗ ನೋವು ಹೆಚ್ಚಾಯಿತು. ಗ್ರಾಪಂ ಅಧ್ಯಕ್ಷರು ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಹೆರಿಗೆಗೆ ಸಹಕಾರ ನೀಡಿದ್ದಾರೆ. ಅವರಿಗೆ ನಾನು ಚಿರಋಣಿ ಎಂದು ರೇಣುಕಾ ಅವರು ಕೃತಜ್ಞತೆ ಸಲ್ಲಿಸಿದರು.

    ನಾನು ಮನೆಯಲ್ಲಿ ಗುಡಿಸಿದ ಕಸವನ್ನು ತೆಗೆದುಕೊಂಡು ಹೊರಗಡೆ ಹಾಕುವ ಸಂದರ್ಭದಲ್ಲಿ ಮನೆಯ ಪಕ್ಕದಲ್ಲಿಯ ರಸ್ತೆ ಡಿವೈಡರ್ ಮೇಲೆ ಇಬ್ಬರು ಹೆಣ್ಣು ಮಕ್ಕಳು ಕುಳಿತಿರುವುದನ್ನು ಗಮನಿಸಿ ಹತ್ತಿರ ಹೋದೆ. ತುಂಬು ಗಭರ್ಿಣಿ ಹೊಟ್ಟೆ ನೋವಿನಿಂದ ನರಳಾಡುತ್ತಿರುವುದನ್ನು ನೋಡಿ ತಕ್ಷಣ ಆಂಬುಲೆನ್ಸ್ಗೆ ಕರೆ ಮಾಡಿ ನಮ್ಮ ಮನೆಗೆ ಕರೆದುಕೊಂಡು ಬಂದೆನು. ಮನೆಗೆ ಬರುತ್ತಿದ್ದಂತೆಯೇ ಕಾಮರ್ಿಕ ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ.
    | ಮಾಲಾಶ್ರೀ ರವೀಂದ್ರ ಮೇತ್ರೆ, ಮುಚಳಂಬ ಗ್ರಾಪಂ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts