More

    ಗರ್ಭಕೋಶ ಪರೀಕ್ಷೆ ಮಾಡಿಸಿಕೊಳ್ಳಿ

    ಹೊಳೆನರಸೀಪುರ: ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಹೆರಿಗೆಗಳು ಮತ್ತು ಗರ್ಭಕೋಶ ಶಸ್ತ್ರಚಿಕಿತ್ಸೆಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಗುತ್ತಿವೆ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಹಾಸನ ಪ್ರಸೂತಿ ಮತ್ತು ಸ್ತ್ರೀರೋಗ ಸಂಘ ಹಾಗೂ ಸಾರ್ವಜನಿಕ ಆಸ್ಪತ್ರೆಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ತ್ರೀಮೂತ್ರ ರೋಗಶಾಸ್ತ್ರ ಸಮ್ಮೇಳನ 2022 ಉದ್ಘಾಟಿಸಿ ಮಾತನಾಡಿದರು.
    ತಾಲೂಕು ಮಟ್ಟದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ತೆರೆಯಲಾಗಿದ್ದು ತಿಂಗಳಿಗೆ 150 ಸಹಜ ಹೆರಿಗೆ, 120 ಸೀಸೇರಿಯನ್ ಹೆರಿಗೆಗಳಾಗುತ್ತವೆ. ತಿಂಗಳಲ್ಲಿ 100 ಕ್ಕೂ ಹೆಚ್ಚು ಗರ್ಭಕೋಶದ ಶಸ್ತ್ರಚಿಕಿತ್ಸೆ ಕೇಸುಗಳು ಆಗುತ್ತಿದ್ದು, ಮಹಿಳೆಯರು ಎಚ್ಚರಿಕೆಯಿಂದ ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು. ಪ್ರತಿವರ್ಷ ಎದೆ ಹಾಗೂ ಗರ್ಭಕೋಶದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಟಿ.ಆರ್.ಸುಧಾ ಮಾತನಾಡಿದರು. ಹಾಸನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ .ಬಿ.ಎಸ್. ಗಿರಿಜಾ, ಸ್ತ್ರೀ ಮೂತ್ರ ರೋಗ ಕಮಿಟಿ ಹಾಗೂ ಕೆಎಸ್‌ಒಜಿಎ ಮುಖ್ಯಸ್ಥ ಡಾ.ವೈ.ಎಂ.ಚಂದ್ರಶೇಖರಮೂರ್ತಿ, ಸಂಘದ ಕಾರ್ಯದರ್ಶಿ ಡಾ.ಭಾರತಿ ರಾಜಶೇಖರ್, ಸಮ್ಮೇಳನದ ಸಂಚಾಲಕ ಡಾ.ಲಕ್ಷ್ಮೀಕಾಂತ್, ವೈದ್ಯರಾದ ನಟರಾಜ್, ವಿಜಯಕುಮಾರ್, ಲೋಕೇಶ್ ವಿನಯ್, ಪ್ರತಿಮಾ ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts