More

    ಗದಗ: ಕೈ ಕೈ ಮಿಲಾಯಿಸಿದ ಕುರುಬ ಮುಖಂಡರು

    ಗದಗ:
    ನಗರದ ಕನಕ ಭವನದಲ್ಲಿ ಸೋಮವಾರ ಜರುಗಿದ ಕುರುಬ ಸಮಾಜದ ರಾಜಕೀಯ ಚಿಂತನ ಸಭೆಯಲ್ಲಿ ಪ್ರದೇಶ ಕುರುಬ ಸಮಾಜ ಹಾಗೂ ಹಾಲುಮತ ಮಹಾಸಭೆ ಮುಖಂಡರು ಕೈ ಕೈ ಮೀಲಾಯಿಸಿದ್ದಾರೆ.
    ಪ್ರದೇಶ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರು, ಹಾಲುಮತ ಸಮಾಜದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ನಡುವೆ ವಾಗ್ವಾದ ಜರುಗಿ ಏಕವಚನ ಅವಾಚ್ಯ ಶಬ್ಧಗಳ ಪ್ರಯೋಗವಾಗಿ ಎದೆಯ ಮೇಲಿನ ಕೊರಳಪಟ್ಟಿಗೆ ಕೈಹಾಕಿದ ಘಟನೆ ಜರುಗಿದೆ. ಕುರುಬ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಪಡೆಯಲು, ಸಮಾಜದ ಸಂಟನೆಗಾಗಿ ಪಕ್ಷಾತಿತವಾಗಿ ಕರೆದಿದ್ದ ಈ ಸಭೆಯಲ್ಲಿ ಬಿಜೆಪಿ & ಕಾಂಗ್ರೆಸ್​ ಕಾರ್ಯಕರ್ತರ ಹೋರಾಟದ ವೇದಿಕೆಯಾಗಿ ಪರಿವರ್ತನೆಗೊಂಡು, ಗದ್ದಲ, ಗೊಂದಲದ ಗೂಡಾಗಿ ಸಭೆಯ ಉದ್ದೇಶ ಈಡೆರಲಿಲ್ಲ.

    ಕಾರಣ ಏನು?
    ನಗರದ ಕನಕ ಭವನದಲ್ಲಿ ಕುರುಬ ಸಮಾಜದಿಂದ ರಾಜಕೀಯ ಚಿಂತನಾ ಸಭೆ ಏರ್ಪಡಿಸಲಾಗಿತ್ತು. ಇದು ಸರ್ವ ಪಕ್ಷಗಳ ಕುರುಬ ಸಮಾಜದ ಸಭೆ ಆಗಿತ್ತು. ಒಂದು ಕ್ಷೇತ್ರದಿಂದ ಕುರುಬ ಸಮಾಜದವರು ಒಬ್ಬರೇ ಸ್ಪರ್ಧೆ ಮಾಡಬೇಕು. ಯಾವುದೇ ಪಕ್ಷದಿಂದ ಸ್ಪಧಿರ್ಸಿದರೂ ಬೆಂಬಲ ನೀಡಬೇಕು. ಪಕ್ಷಬೇದ ಮರೆತು ಸಮಾಜದವರು ಬೆಂಬಲಿಸಬೇಕು ಎಂಬುದನ್ನು ಸಾರುವ ಉದ್ದೇಶ ಸಭೆಯದ್ದಾಗಿತ್ತು. ಈ ವೇಳೆ ಮಾತಿನ ಭರಾಟೆಯಲ್ಲಿ ರಾಜಕೀಯ ಟೀಕೆಗಳು ಶುರುವಾದವು ಎನ್ನಲಾಗಿದೆ. ಈ ನಡುವೆ ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ವೇದಿಕೆಯಿಂದ ಎದ್ದು ಬಂದು ಮಾಧ್ಯಮಕ್ಕೆ ಸಂದರ್ಶನ ನೀಡುತ್ತಿದ್ದರು. ಈ ನಡೆಯಿಂದ ಪ್ರದೇಶ ಕುರುಬ ಸಮಾಜ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಕೆರಳಿದರು. ವೇದಿಕೆಯಿಂದ ಅವರೂ ಕೆಳಗೆ ಆಗಮಿಸಿ ವಾಗ್ವಾದಕ್ಕೆ ಇಳಿದರು. ಇಬ್ಬರ ನಡುವೆ ನಡುವೆ ವಾಗ್ವಾದ ಶುರುವಾಗಿ ನಂತರ ಒಬ್ಬರನ್ನೊಬ್ಬರು ಎಳೆಯುತ್ತಾ ತಳ್ಳುತ್ತಾ ಮುಂದೆ ಸಾಗಿದ್ದಾರೆ. ಏಕ ವಚನದಲ್ಲಿ ನಿಂದನೆ ಶುರುವಾಗಿ ಕೆಲಕಾಲ ಹೈಡ್ರಾಮಾ ನಡೆಯಿತು. ಕಾರ್ಯಕ್ರಮ ನಂತರ ಪರಸ್ಪರ ಕ್ಷಮೆ ಕೇಳಿದರು ಎಂದು ತಿಳಿದು ಬಂದಿದೆ.

    ಹಿನ್ನೆಲೆ ಏನು?
    ಜಿಲ್ಲೆಯ ನಾಲ್ಕು ಕ್ಷೇತ್ರಗಳ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​, ಆಪ್​ ಹಾಗೂ ಪಕ್ಷೇತರ ಅಭ್ಯಥಿರ್ ಆಕಾಂಕ್ಷಿಗಳು, ಸಮಾಜದ ಮುಖಂಡರು, ಸಮಾಜ ಬಾಂಧವರು ಭಾಗಿಯಾಗಿದ್ದರು. ಸಭೆಗೆ ಹಾಲುಮತ ರಾಜ್ಯಾಧ್ಯಕ್ಷ ರುದ್ರಣ್ಣ ಆಗಮಿಸುವುದಿಲ್ಲ ಎಂದು ಹೇಳಿದ್ದರಂತೆ. ಆದರೆ, ಕಾರ್ಯಕ್ರಮಕ್ಕೆ ಧೀಡರನೇ ಬಂದು ವೇದಿಕೆಗೆ ತೆರಳಿದ್ದಾರೆ. ಹೀಗಾಗಿ ಸಭೆಯಲ್ಲಿ ಮಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಕ್ಕಿರಪ್ಪ ಹೆಬಸೂರು ಮತ್ತು ರುದ್ರಣ್ಣ ಗುಳಗುಳಿ ನಡುವೆ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳ ನಡುವಿನ ವಾಕ್ಸಮರ್​ ಇದೆ ಎಂದು ಕೆಲವರು ಆರೋಪಿಸಿದರು.

    ಕೋಟ್​:
    ಸಮಾಜದ ಒಗ್ಗಟ್ಟಿನ ಮಂತ್ರ ಜಪಿಸಲು ಸಭೆ ಕರೆಯಲಾಗಿತ್ತು. ಹೊಂದಾಣಿಕೆ ಕೊರತೆಯಿಂದ ವೈಮನಸ್ಸು ಬೆಳೆಯಿತೇ ಹೊರತು ಉದ್ದೇಶಪೂರ್ವಕವಾಗಿಲ್ಲ. ಸಭೆ ನಂತರ ಒಬ್ಬರಿಗೊಬ್ಬರು ಕ್ಷಮೆ ಕೋರಿದ್ದಾರೆ ಮತ್ತು ಸಮಾಜದ ಒಗ್ಗಟ್ಟಿಗೆ ಒಂದುಗೂಡಿ ದುಡಿಯೋಣ ಎಂದು ಭರವಸೆ ನೀಡಿದ್ದಾರೆ.
    – ಪ್ರಕಾಶ್​ ಕರಿ, ಕಾಂಗ್ರೆಸ್​ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts