More

    ಗಣೇಶೋತ್ಸವಕ್ಕೆ‌ ಸಂಭ್ರಮದ ತೆರೆ

    ಬಾಗಲಕೋಟೆ: ಸಡಗರದಿಂದ ಆರಂಭಗೊಂಡಿದ್ದ ಕೋಟೆ ನಗರಿಯ ಗಣೇಶ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದಿಂದ ತೆರೆ ಬಿದ್ದಿತು. ಈ ಬಾರಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಪರಿಸರ ಮೆರೆದಿದ್ದು ವಿಶೇಷವಾಗಿತ್ತು. ಅದ್ಧೂರಿಯಾಗಿ ಹಬ್ಬ ಆಚರಿಸಲಾಯಿತು.

    ಬುಧವಾರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ಗಣೇಶ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಕಳೆದ 5 ದಿನಗಳ ಕಾಲ ಪ್ರತಿ ಮನೆ,ಮನಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಗಣೇಶ ಉತ್ಸವದ ಸಂಭ್ರಮ ಮನೆ ಮಾಡಿತ್ತು. ಪ್ರತಿನಿತ್ಯವು ಬೆಳಗ್ಗೆ, ಸಂಜೆ ಗಣೇಶನಿಗೆ ವಿಶೇಷ ಪೂಜೆ, ನೈವೇದ್ಯ ಸಮರ್ಪಿಸಲಾಗುತ್ತಿತ್ತು. ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನಿಗೆ ಪೂಜೆ, ಗಣಹೋಮ, ಅನ್ನಸಂತರ್ಪಣೆ ಜರುಗಿತು. ಚಿತ್ರಗೀತೆ, ನೃತ್ಯ, ರಂಗೋಲಿ, ಕಬ್ಬಡಿ ಸೇರಿದಂತೆ ವಿವಿಧ ಸ್ಪರ್ಧೆ ಗಳು ಮತ್ತು ನಾನಾ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಮಹಿಳೆಯರು, ಮಕ್ಕಳು, ಹಿರಿಯರು ಸೇರಿ ಎಲ್ಲರು ಭಾಗವಹಿಸಿ ಸಂತಸಪಟ್ಟರು.  

    ಗಣೇಶೋತ್ಸವಕ್ಕೆ‌ ಸಂಭ್ರಮದ ತೆರೆ

    ಹಳೆ ನಗರ, ನವನಗರ, ವಿದ್ಯಾಗಿರಿ ಸೇರಿದಂತೆ 140 ಕ್ಕೂ ಅಧಿಕ ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಲಾಗಿತ್ತು,  ಗಣೇಶ ಮೂರ್ತಿಯ ಪೂಜಾ ಕೈಂಕರ್ಯ ಗಣೇಶ ಮೂರ್ತಿಯ ಅಲಂಕಾರಿಕ ವಸ್ತುಗಳು, ಆಭರಣಗಳು, ಪೂಜಾ ಸಾಮಗ್ರಿಗಳನ್ನು ಸವಾಲು ಮಾಡಲಾಯಿತು. ರಾತ್ರಿ 8 ಗಂಟೆಯ ನಂತರ ಭವ್ಯ ಮೆರವಣಿಗೆ ಮೂಲಕ ವಿಸರ್ಜನೆ ಕಾರ್ಯ ಆರಂಭಗೊಂಡಿತು.
    ಬಾನಂಗಳದಲ್ಲಿ ಬಾನ ಬಿರುಸುಗಳ ಚಿತ್ತಾರಗಳು, ಬಗೆ ಬಗೆಯಲ್ಲಿ ಮೂಡಿದ ಸಿಡಿಮದ್ದುಗಳ ಕಲರವ ಗಮನ ಸೆಳೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಲು ಸಾಲಾಗಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ ಸೃಷ್ಠಿಸಿತು. ಚಲನ ಚಿತ್ರ, ಭಕ್ತಿ ಗೀತೆ, ಜಾಂಜ ಪತಾಕ ನಿನಾದಕ್ಕೆ ಯುವಕರು ಆಕರ್ಷಕವಾಗಿ ಹೆಜ್ಜೆ ಹಾಕಿದರು. ಗುಲಾಲ ಎರೆಚಿಕೊಂಡು ಹಣೆಗೆ ರಿಬ್ಬನ್ ಕಟ್ಟಿಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು. ಕರಡಿ ಮಜಲು, ಡೊಳ್ಳು ಕುಣಿತ ಸೇರಿದಂತೆ ಸಾಂಸ್ಕೃತಿಕ ವಾದ್ಯವೈಭವಗಳು ಮೇಳೈಸಿದವು.
    ವಿಸರ್ಜನಾ ಮೆರವಣಿಗೆಯ ಮಾರ್ಗದುದ್ದಕ್ಕೂ ಗಣಪತಿ ಬಪ್ಪ ಮೋರಯಾ... ಮಂಗಳ ಮೂರ್ತಿ ಮೋರಯಾ...',ಮೋರಯಾ, ಮೋರಯಾ… ಗಣಪತಿ ಬಪ್ಪ ಮೋರಯಾ…’, `ವಿಘ್ನೇಶ್ವರ ಮಹಾರಾಜಕೀ ಜೈ’ ಘೋಷಣೆಗಳು ಪ್ರತಿಧ್ವನಿಸಿದವು. ಗಣೇಶ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು.


    ಗಣೇಶೋತ್ಸವಕ್ಕೆ‌ ಸಂಭ್ರಮದ ತೆರೆ

    ಬಾಕ್ಸ್:
    ಗಣೇಶ ಉತ್ಸವವನ್ನು ಐದು ದಿನಗಳ ಕಾಲ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಭಾನುವಾರ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಬಹುತೇಕವಾಗಿ ವಿಸರ್ಜನೆ ಮಾಡಲಾಯಿತು. ಮೆರವಣಿಗೆ ಬರುತ್ತಿದ್ದಂತೆ ಸಾರ್ವಜನಿಕರು ಪ್ರಮುಖ ವೃತ್ತಗಳಲ್ಲಿ, ಮನೆಗಳ ಮುಂದೆ ಗುಂಪು ಗುಂಪಾಗಿ ಸೇರಿ ವೀಕ್ಷಣೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.
    ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಬಹುತೇಕ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ಆಯಾ ಗಲ್ಲಿಗಳಲ್ಲಿ ಇರುವ ಬಾವಿಗಳಲ್ಲಿ ಹಾಗೂ ನದಿ ದಡ ವಿರ್ಸಜನೆ ನಡೆಸಲಾಯಿತು. ಇನ್ನೂ ಈ ಭಾರಿ ನಗರದ ಹೊರ ವಲಯದಲ್ಲಿ ಹಿನ್ನೀರು ಲಭ್ಯ ಇದ್ದರಿಂದ ಅಲ್ಲೆಯೆ ಬಹುತೇಕ ಗಣಪತಿ ಮೂರ್ತಿಗಳನ್ನು ವಿರ್ಸಜನೆ ಕಾರ್ಯ ಜರುಗಿತು. ಮಾಧ್ಯಾಹ್ನ ಶಹರ ಪೊಲೀಸ ಠಾಣೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿ ಮೆರವಣಿಗೆ ಮೂಲಕ ವಿಸರ್ಜನೆ ಮಾಲಾಯಿತು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts