More

    ಗಣಿಗಾರಿಕೆ ಸ್ಥಗಿತಕ್ಕೆ ಸೂಚನೆ

    ಗದಗ: ಕಪ್ಪತಗುಡ್ಡ ವನ್ಯಜೀವಿಧಾಮ ವ್ಯಾಪ್ತಿಯ (ಗಡಿಯಿಂದ) ಒಂದು ಕಿಲೋಮೀಟರ್ ಒಳಗಿರುವ ಮರಳು ಬ್ಲಾಕ್ ಮತ್ತು ಕಲ್ಲಿನ ಕ್ವಾರಿ ಗಣಿಗಾರಿಕೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೋಟಿಸ್ ಜಾರಿಗೊಳಿಸಿದೆ.

    ಶಿರಹಟ್ಟಿ ತಾಲೂಕಿನ ಅಕ್ಕಿಗುಂದ ಗ್ರಾಮದ ಪಟ್ಟಾ ಜಮೀನಿನಲ್ಲಿ ನಡೆಯುತ್ತಿರುವ ಕಲ್ಲಿನ ಕ್ವಾರಿಗಳನ್ನು ಬಂದ್ ಮಾಡಬೇಕೆಂದು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಸಚಿವಾಲಯ ಸೂಚನೆ ಮೇರೆಗೆ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಈ ನಿರ್ಣಯ ಕೈಗೊಂಡಿದೆ.

    ಕಪ್ಪತಗುಡ್ಡ ವನ್ಯಜೀವಿ ಧಾಮ ಎಂದು ಘೊಷಣೆ ಆದಾಗಿನಿಂದಲೂ ಕಲ್ಲು ಗಣಿ ಕುಳಗಳಿಗೆ ನಿದ್ದೆ ಇಲ್ಲದಂತಾಗಿದೆ. ಇದೀಗ ಗಣಿ ಇಲಾಖೆ ನೋಟಿಸ್ ಜಾರಿ ಮಾಡಿದ ನಂತರವಂತೂ ಕಲ್ಲು ಗಣಿ ಕುಳಗಳು ಅಕ್ಷರಶಃ ಕಂಗಾಲಾಗಿದ್ದಾರೆ. ಗಣಿ ಇಲಾಖೆಯಿಂದ ಅಧಿಕೃತ ಅನುಮತಿ ಪಡೆದು ಗಣಿಗಾರಿಕೆ ಮಾಡುತ್ತಿದ್ದ 14 ಕ್ವಾರಿಗಳಿಗೆ ನೋಟಿಸ್ ಜಾರಿಯಾಗಿದ್ದು, ಇದರಿಂದ ಹೇಗಾದರೂ ಬಚಾವ್ ಆಗಬೇಕು ಎಂದು ಕ್ವಾರಿ ಮಾಲೀಕರು

    ಸರ್ಕಾರದ ಮಟ್ಟದಲ್ಲಿ ತೀವ್ರ ಲಾಬಿ ಆರಂಭಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

    ವನ್ಯಜೀವಧಾಮ ಗಡಿ ವ್ಯಾಪ್ತಿಯಿಂದ ಒಂದು ಕಿಲೋ ಮೀಟರ್ ಒಳಗಿರುವ ಮರಳು ಮತ್ತು ಕಲ್ಲಿನ ಕ್ವಾರಿಗಳನ್ನು ಬಂದ್ ಮಾಡುವಂತೆ ನೋಟಿಸ್ ನೀಡಲಾಗಿದೆ. ಇದಕ್ಕೆ ಕೆಲ ಕ್ವಾರಿ ಮತ್ತು ಮರಳು ಗುತ್ತಿಗೆದಾರರು 90 ದಿನ ಕಾಲಾವಕಾಶ ಕೇಳಿದ್ದಾರೆ. ಗಣಿಗಾರಿಕೆ ಬಂದ್ ಮಾಡಲು ಸೂಚಿಸಲಾಗಿದ್ದು, ಕಾಲಮಿತಿಯನ್ನು ನಿಗದಿಪಡಿಸಿಲ್ಲ. ಸದ್ಯ ನೋಟಿಸ್ ನೀಡಿದ ಎಲ್ಲ 14 ಗಣಿಗಳಲ್ಲಿ ಗಣಿಗಾರಿಕೆ ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ನೋಟಿಸ್ ನೀಡಿದ ಕ್ವಾರಿಗಳ ವಿವರ: ಕಲ್ಲು ಕ್ವಾರಿ ಮತ್ತು ಮರಳು ಬ್ಲಾಕ್​ಗಳ ಮಾಲೀಕರಾದ ಎಸ್.ಆರ್. ಸ್ವಾಮಿ (ವರವಿ), ಐ.ಜಿ. ಕಲಕೇರಿ (ಹಿರೇವಡ್ಡಟ್ಟಿ), ಎಸ್.ಆರ್. ಬಳ್ಳಾರಿ (ಶಿರಹಟ್ಟಿ), ಜಗದೀಶ ಎಂ. ಬಟ್ಟೂರ (ಛಬ್ಬಿ), ಜಿ.ಎಂ. ಬಟ್ಟೂರ (ಛಬ್ಬಿ), ಸಂತೋಷ ಪಿ. ದೊಡ್ಡವಾಡ (ಸಿಂಗಟಾಲೂರ), ಡಿ. ಸುರೇಂದ್ರರಡ್ಡಿ (ಮಾಗಡಿ), ರಾಜು ಡಿ. ಕಳ್ಳಿ (ಸಿಂಗಟಾಲೂರು), ಎ.ಜಿ. ಕಲಕೇರಿ (ಹಿರೇವಡ್ಡಟ್ಟಿ), ಬಿ.ಬಿ.ಬೆಳವಾಡಿ (ಅಕ್ಕಿಗುಂದ), ಶಿವಗಂಗಾ ಸ್ಟೋನ್ (ಶಿರಹಟ್ಟಿ) ಇವರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವನ್ಯಜೀವಧಾಮ ಗಡಿಯಿಂದ ಒಂದು ಕಿಲೋ ಮೀಟರ್ ಒಳಗಿರುವ 14 ಕಲ್ಲಿನ ಕ್ವಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಈಗಾಗಲೇ ಇದರಲ್ಲಿ ಹಲವರು ಕಾಲಾವಕಾಶ ಕೇಳಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದ ಟಾಸ್ಕ್ ಫೋರ್ಸ್ ಸಭೆಯಲ್ಲಿ ರ್ಚಚಿಸಿ ನಿರ್ಧರಿಸಲಾಗುವುದು.

    | ರಾಜೇಶ ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts