More

    ಗೋಕಾಕದ ಕೀರ್ತಿ ಎಲ್ಲೆಡೆ ಹರಡಲಿ

    ಗೋಕಾಕ: ಈ ಭಾಗದ ಯುವಜನರೂ ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು ಎಂಬ ಮಹತ್ತರ ಉದ್ದೇಶದಿಂದ ಸತೀಶ ಜಾರಕಿಹೊಳಿ ಫೌಂಡೇಷನ್ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಯುವ ಮುಖಂಡ ರಾಹುಲ್ ಜಾರಕಿಹೊಳಿ ಹೇಳಿದರು.

    ನಗರದ ಹಿಲ್ ಗಾರ್ಡನ್ ಆವರಣದಲ್ಲಿ ಭಾನುವಾರ ಸತೀಶ ಶುಗರ್ಸ್ ಆವಾರ್ಡ್ಸ್ ವಿಜೇತ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಹಮ್ಮಿಕೊಂಡಿದ್ದ ಔತಣಕೂಟ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಅವರು ಮಾತನಾಡಿದರು.

    ಸತೀಶ್ ಶುಗರ್ಸ್ ಅವಾರ್ಡ್ಸ್ ಮತ್ತು ಸತೀಶ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿಸಿದ ಎಲ್ಲರೂ ಅಭಿನಂದನಾರ್ಹರು ಎಂದ ಅವರು, ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳ ನಿರಂತರ ಸಹಕಾರ ಇರಬೇಕು ಎಂದರು.

    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳಿಗೆ 1 ಲಕ್ಷ ನಗದು ಬಹುಮಾನ ವಿತರಿಸುತ್ತಿದ್ದೇವೆ. ಸತೀಶ್ ಶುಗರ್ಸ್
    ಅವಾರ್ಡ್ಸ್ ವೇದಿಕೆಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳು ಪ್ರತಿಭೆ ತೋರಿಸಿದ್ದಾರೆ. ಗೋಕಾಕ ನಾಡಿನ ಕೀರ್ತಿಯನ್ನು ರಾಜ್ಯಾದ್ಯಂತ ಹರಡಬೇಕು ಎಂದು ಹೇಳಿದರು.

    ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಕಬಡ್ಡಿ ಮತ್ತು ಇತರ ಕ್ರೀಡಾ ಕಾರ್ಯಗಳಿಗೆ ಸಹಕಾರ ನೀಡಲಾಗುತ್ತಿದ್ದು, ಸುಮಾರು 65 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಗೆಲುವಿನತ್ತ ನಮ್ಮ ಪಯಣ’ ಪುಸ್ತಕ ವಿತರಿಸಲಾಗಿದೆ ಎಂದರು.

    ಶಿಕ್ಷಣ ಇಲಾಖೆಯ ವತಿಯಿಂದ ಪ್ರಿಯಾಂಕಾ ಜಾರಕಿಹೊಳಿ ಮತ್ತು ರಾಹುಲ್ ಜಾರಕಿಹೊಳಿ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.

    ಡಿಡಿಪಿಐ ಮೋಹನಕುಮಾರ ಹಂಚಾಟೆ, ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಬಿಇಒಗಳಾದ ಜಿ.ಬಿ.ಬಳಗಾರ, ಅಜಿತ ಮನ್ನಿಕೇರಿ, ಮೋಹನ ದಂಡಿನ, ಎ.ಎನ್.ಪ್ಯಾಟಿ, ಪ್ರಭಾವತಿ ಪಾಟೀಲ, ರಾಜೇಶ್ವರಿ ಕುಡಚಿ, ಎಂ.ಆರ್.ಮುಂಜಿ, ಭಗವಂತ ಮೇಕಲಮರಡಿ, ಆರ್.ಟಿ.ಬಳಿಗಾರ, ಸಂಪನ್ಮೂಲ ವ್ಯಕ್ತಿ ಎಂ.ಬಿ.ಪಾಟೀಲ, ಬಿಸಿಯೂಟ ಅಧಿಕಾರಿ ಎ.ಬಿ.ಮಲಬನ್ನವರ, ರಿಯಾಜ್ ಚೌಗಲಾ, ಪ್ರಾಚಾರ್ಯ ಪ್ರಕಾಶ ಲಕ್ಕಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts