More

    ಗಂಡ ಸತ್ತ ದುಃಖ ಮರೆಯುವುದರೊಳಗೆ ಅಡಕೆ ಮರ ಕಡಿದರು!

    ಸೊರಬ/ ಆನವಟ್ಟಿ: ಸಾರ್.. ನನ್ನ ಗಂಡ ಈ ವರ್ಷ ನಮ್ಮನ್ನೆಲ್ಲಾ ಬಿಟ್ಟು ಹೊಂಟೋದ್ರು.. ಈ ದುಃಖ ಮರೆಯೋದ್ರೊಳಗೆ ಮಕ್ಕಳಂತಿರುವ ಅಡಕೆ ಮರಗಳ ಬುಡಕ್ಕೆ ಕೊಡಲಿ ಹಾಕಿದ್ದಾರೆ. ಇದನ್ನು ಹೇಗೆ ಸಹಿಸಿಕೊಳ್ಳಲಿ. ಈ ಅಡಕೆ ಮರಗಳಿಂದಲೇ ಜೀವನ ಸಾಗಿಸುತ್ತಿದ್ದೆ. ಬೇರೆ ಜಮೀನೂ ಇಲ್ಲ. ಮಕ್ಕಳಂತೆ ಸಾಕಿದ ಆ ಮರಗಳನ್ನೂ ಅ„ಕಾರಿಗಳು ನಾಶ ಮಾಡಿದರು. ನಾನು ಹೇಗೆ ಬದುಕೋದು…
    ಇದು ತಾಲೂಕಿನ ತಾಳಗುಪ್ಪ ಗ್ರಾಮದ ಮಹಿಳೆ ಗಂಗಮ್ಮ ಅವರ ಆಕ್ರಂದನ.
    ಅರಣ್ಯ ಇಲಾಖೆ ದೌರ್ಜನ್ಯಕ್ಕೆ ಬಲಿಯಾದ ಕುಟುಂಬಸ್ಥರಿಗೆ ಮಾಜಿ ಶಾಸಕ ಮಧು ಬಂಗಾರಪ್ಪ ಸಾಂತ್ವನ ಹೇಳಲು ಶುಕ್ರವಾರ ಭೇಟಿ ನೀಡಿದಾಗ ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಕಣ್ಣೀರು ಹಾಕಿ ಗೋಳಾಡಿದ ದೃಶ್ಯ ನೆರೆದವರ ಕಣ್ಣಂಚಿನಲ್ಲಿ ನೀರಾಡಿಸಿತು.
    ತಾಳಗುಪ್ಪ ಗ್ರಾಮದ ಸರ್ವೇ ನಂ. 20ರಲ್ಲಿ ಸುಮಾರು 27 ಎಕರೆ ಅರಣ್ಯ ಜಮೀನಿನನ್ನು ರೈತರು ಏಳೆಂಟು ದಶಕಗಳಿಂದ ಸಾಗುವಳಿಮಾಡಿಕೊಂಡು ಬಂದಿದ್ದು ಅದರಲ್ಲಿ 17 ಎಕರೆ ಜಾಗದಲ್ಲಿ 40 ವರ್ಷದ ಅಡಕೆ ಮರಗಳಿದ್ದವು. ನ್ಯಾಯಾಲಯದ ಆದೇಶವಿದೆ ಎಂದು ಅರಣ್ಯ ಇಲಾಖೆ ಅ„ಕಾರಿಗಳು ತೋಟವನ್ನು ಕಡಿದು ನೆಲಸಮ ಮಾಡಿದ್ದಾರೆ.
    ತೋಟ ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳಿದ ಮಧು ಬಂಗಾರಪ್ಪ , ನಾನು ಸತ್ತಿಲ್ಲ. ನಿಮ್ಮೊಂದಿಗೆ ನಾನು ಇರುತ್ತೇನೆ. ನಾನು ಅ„ಕಾರಿಗಳಿಗೆ ಕರೆ ಮಾಡಿದಾಗ, ತೋಟ ನಾಶಮಾಡುವುದಿಲ್ಲ. ಟ್ರೆಂಚ್ ಮಾಡಿ ಗಡಿ ಗುರುತು ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಮಾತುಕೊಟ್ಟ ಅವರು ಬೆಳೆಯನ್ನೂ ನಾಶ ಮಾಡಿದ್ದು ಕರಳು ಕಿತ್ತು ಬರುತ್ತಿದೆ. ಅಡಕೆ ಮರಗಳನ್ನು ಕಡಿದು ತೆರವುಗೊಳಿಸುವಂತೆ ನ್ಯಾಯಾಲಯದ ಆದೇಶ ಇಲ್ಲದಿದ್ದರೂ ಶಾಸಕ ಕುಮಾರ್ ಬಂಗಾರಪ್ಪ ಕುಮ್ಮಕ್ಕಿನಿಂದ ಅ„ಕಾರಿಗಳು ತೋಟ ನಾಶ ಮಾಡಿದ್ದಾರೆ. ರೈತರನ್ನು ಬೀದಿಯಲ್ಲಿ ನಿಲ್ಲಿಸಿದ ಶಾಸಕರಿಗೆ, ಅವರ ಹಿಂದಿರುವ ಕೆಲವರಿಗೆ ದೇವರು ಒಳಿತು ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ರೈತರ ನಾಲ್ಕೈದು ದಶಕಗಳ ಅಡಕೆ ಬೆಳೆಯನ್ನು ನಾಶ ಮಾಡಿದ್ದರ ಬಗ್ಗೆ ನ್ಯಾಯಾಲಯ ಕೂಡ ಛೀಮಾರಿ ಹಾಕಿದೆ. ಶಾಸಕ ಕುಮಾರ್ ಬಂಗಾರಪ್ಪ ಸೇರಿದಂತೆ ಅರಣ್ಯ ಅ„ಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ತಾಲೂಕಿನ ಅರಣ್ಯ, ಬಗರ್‍ಹುಕುಂ ಸಾಗುವಳಿದಾರರು ಭಯ ಪಡದೆ ಒಗ್ಗಟ್ಟಿನಿಂದ ಹೋರಾಟ ಮಾಡುವ ಅಗತ್ಯವಿದೆ ಎಂದರು.
    ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ ತುಮರಿಕೊಪ್ಪ, ಎಂ.ಡಿ.ಶೇಖರ್, ಮೋಹನ್‍ಕುಮಾರ್, ಮಂಜುನಾಥ್ ತಲಗಡ್ಡೆ ಹಾಗೂ ನೂರಾರು ಮಂದಿ ಇದ್ದರು.

    ಮಾನವೀಯತೆ ಸತ್ತು ಹೋಗಿದೆ: ತಾಲೂಕಿನಲ್ಲಿ ಜನಪ್ರತಿನಿ„ಗಳು ಮತ್ತು ಅ„ಕಾರಿಗಳಲ್ಲಿ ಮಾನವೀಯತೆ ಸತ್ತು ಹೋಗಿದೆ. ಬಡ ರೈತರ ಅಳಲು ಕೇಳಲು ಯಾರೂ ಸಿದ್ಧರಿಲ್ಲ. ಸ್ವಾರ್ಥ ರಾಜಕಾರಣಕ್ಕಾಗಿ ತಾಲೂಕಿನ ರೈತರನ್ನು ಬಲಿ ಕೊಡಲಾಗುತ್ತಿದೆ ಎಂದು ಮಧುಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಾಲಯಗಳು ರೈತರ ಪರವಾಗಿ ಮಾನವೀಯತೆಯಿಂದ ತೀರ್ಪು ನೀಡುತ್ತಿವೆ. ಆದರೆ ತಾಲೂಕಿನ ಶಾಸಕರು ಹಾಗೂ ಅ„ಕಾರಿಗಳು ತಾವೇ ನ್ಯಾಯಾ„ೀಶರಿಗಿಂತ ಹೆಚ್ಚೆಂದು ಭಾವಿಸಿ ರೈತರ ತೋಟಗಳನ್ನು ಹಾಳು ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಇವರ ಕೃತ್ಯಕ್ಕೆ ಸಾರ್ವಜನಿಕರಿಂದ ತಿರಸ್ಕಾರ ವ್ಯಕ್ತವಾಗುತ್ತಿವೆ. ಅರಣ್ಯ ವ್ಯಾಪ್ತಿಯನ್ನು ಗುರುತು ಮಾಡಲು ಅಗಳ (ಕಾಲುವೆ) ತೆಗೆಯುತ್ತೇವೆ ಎಂದು ಹೇಳಿಕೊಂಡು ಬಂದವರು ಏಕಾಏಕಿ ಜೆಸಿಬಿ ಹಾಗೂ ಮರ ಕತ್ತರಿಸುವ ಯಂತ್ರಗಳನ್ನು ತಂದು ಸಾವಿರಾರು ಅಡಕೆ ಮರಗಳನ್ನು ಧರೆಗುರುಳಿಸಿ ಹೀನ ಕೃತ್ಯ ಮೆರೆದಿದ್ದಾರೆ. ಆದರೆ ಅದೇ ವ್ಯಾಪ್ತಿಯಲ್ಲಿರುವ ಹಲಸಿನ ಮರಗಳು, ತೆಂಗಿನ ಮರಗಳು ಹಾಗೂ ಇತರ ಬೆಲೆ ಬಾಳುವ ಮರಗಳನ್ನು ಬಿಟ್ಟು ಕೇವಲ ಅಡಕೆ ಮರಗಳನ್ನು ಗುರಿಯಾಗಿಟ್ಟುಕೊಂಡು ದುರುದ್ದೇಶದಿಂದ ಈ ಕೃತ್ಯ ಎಸಗಿ ರೈತರನ್ನು ಬೀದಿ ಪಾಲು ಮಾಡಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts